UGC NET 2024 ಪರೀಕ್ಷೆಯ ಸಿಟಿ ಸ್ಲಿಪ್ ಜಾರಿ !ಅಭ್ಯರ್ಥಿಗಳಿಗೆ ಈ ದಿನ ಸಿಗಲಿದೆ ಅಡ್ಮಿಟ್ ಕಾರ್ಡ್
UGC NET June 2024: UGC NET June 2024 ಪರೀಕ್ಷೆಗಾಗಿ ಸಿಟಿ ಸ್ಲಿಪ್ ಜಾರಿ ಮಾಡಲಾಗಿದೆ. ಆದರೆ ಇನ್ನುಕುದಾ ಅಡ್ಮಿಟ್ ಕಾರ್ಡ್ ಬಿಡುಗಡೆಯಾಗಿಲ್ಲ.
UGC NET June 2024: ಆಗಸ್ಟ್ 28 ರಿಂದ ಸೆಪ್ಟೆಂಬರ್ 4ರವರೆಗೆ ನಡೆಯಲಿರುವ ಯುಜಿಸಿ NET 2024 ಪರೀಕ್ಷೆ ಯಾವ ನಗರದಲ್ಲಿ ನಡೆಯಲಿದೆ ಎನ್ನುವ ಮಾಹಿತಿಯನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಬಿಡುಗಡೆ ಮಾಡಿದೆ.ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ UGC NET 2024 ಸಿಟಿ ಸ್ಲಿಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.ಸಿಟಿ ಸ್ಲಿಪ್ ಅನ್ನು ಡೌನ್‌ಲೋಡ್ ಮಾಡಲು, ಅಪ್ಲಿಕೇಶನ್ ಸಂಖ್ಯೆ,ಜನ್ಮ ದಿನಾಂಕ ಮತ್ತು ಪಾಸ್‌ವರ್ಡ್‌ನಂತಹ ಲಾಗಿನ್ ಕ್ರೆಡಿನ್ಶಿಯಲ್ ನ ಅಗತ್ಯವಿರುತ್ತದೆ.
ಈಗ ಬಿಡುಗಡೆಯಾಗಿರುವುದು ಸಿಟಿ ಸ್ಲಿಪ್ ಮಾತ್ರ, ಅಡ್ಮಿಟ್ ಕಾರ್ಡ್ ಅಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.ಇದು ಅಭ್ಯರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ಕೇಂದ್ರದ ನಗರದ ಹಂಚಿಕೆಯನ್ನು ಮೊದಲೇ ತಿಳಿಸಲಾಗಿದೆ. UGC-NET ಜೂನ್ 2024 ರ ಪ್ರವೇಶ ಕಾರ್ಡ್ ಅನ್ನು ನಂತರ ಬಿಡುಗಡೆ ಮಾಡಲಾಗುವುದು.
ಇದನ್ನೂ ಓದಿ : NIRF ರ‍್ಯಾಂಕಿಂಗ್ ಪಟ್ಟಿ ನಲ್ಲಿ ಅಗ್ರಸ್ಥಾನದಲ್ಲಿ ಈ ಕಾಲೇಜು ! ಟಾಪ್ 10 ಫಾರ್ಮಾ ಕಾಲೇಜುಗಳ ಪಟ್ಟಿ ಇಲ್ಲಿದೆ
ಇನ್ನು ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಆಗಸ್ಟ್ 26 ರಂದು ನಿಗದಿಯಾಗಿದ್ದ UGC NET 2024 ಪರೀಕ್ಷೆಯನ್ನು ಪರೀಕ್ಷಾ ಆಯೋಗವು ಮುಂದೂಡಿದೆ.ಈ ಪರೀಕ್ಷೆ ಆಗಸ್ಟ್ 27 ರಂದು ನಡೆಯಲಿದೆ. NTA ಯುಜಿಸಿ NET ಜೂನ್ 2024 ರ ಪರೀಕ್ಷೆಯ ನಗರ ಸ್ಲಿಪ್ ಅನ್ನು ಅಧಿಕೃತ ವೆಬ್‌ಸೈಟ್ ugcnet.nta.ac.in ನಲ್ಲಿ ಅಪ್‌ಲೋಡ್ ಮಾಡಿದೆ.
UGC NET 2024 :ಅಡ್ಮಿಟ್ ಕಾರ್ಡ್ :
ಅಡ್ಮಿಟ್ ಕಾರ್ಡ್ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ದಿನಾಂಕವನ್ನು NTA ಘೋಷಿಸದಿದ್ದರೂ,ಪರೀಕ್ಷೆಗೆ 3 ದಿನಗಳ ಮೊದಲು ಅಡ್ಮಿಟ್ ಕಾರ್ಡ್ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ : KAS ಪೂರ್ವಭಾವಿ ಪರೀಕ್ಷೆ: KPSC ಹಟಕ್ಕೆ ಬಿದ್ದಿರುವುದು ಸರಿಯಲ್ಲ ಎಂದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ
83 ವಿಷಯಗಳ ಮೇಲೆ ಪರೀಕ್ಷೆ ನಡೆಯಲಿದೆ.ಆಗಸ್ಟ್ 21 ರಿಂದ ಸೆಪ್ಟೆಂಬರ್ 4, 2024 ರವರೆಗೆ ಈ ಪರೀಕ್ಷೆ ನಡೆಯಲಿದೆ.ಆಗಸ್ಟ್ 2, 2024 ರ ಸಾರ್ವಜನಿಕ ಸೂಚನೆಯ ಪ್ರಕಾರ,ಆಗಸ್ಟ್ 26 ರ ಪರೀಕ್ಷೆಯ ದಿನಾಂಕದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.ಉಳಿದ ಪರೀಕ್ಷೆಗಳನ್ನು ಪೂರ್ವ ನಿಗದಿತ ದಿನಾಂಕ ಮತ್ತು ಸಮಯದಲ್ಲಿಯೇ ನಡೆಸಲಾಗುವುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.