NIRF ರ‍್ಯಾಂಕಿಂಗ್ ಪಟ್ಟಿ ನಲ್ಲಿ ಅಗ್ರಸ್ಥಾನದಲ್ಲಿ ಈ ಕಾಲೇಜು ! ಟಾಪ್ 10 ಫಾರ್ಮಾ ಕಾಲೇಜುಗಳ ಪಟ್ಟಿ ಇಲ್ಲಿದೆ

Top Pharmacy Institute in NIRF Rankings: ದೇಶದ ಟಾಪ್ 10 ಫಾರ್ಮಾ ಕಾಲೇಜುಗಳ  ಪಟ್ಟಿಯನ್ನು NIRF ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ರಾಜ್ಯದ ಎರಡು ಕಾಲೇಜುಗಳು ಕೂಡಾ ಸೇರಿವೆ.  

Written by - Ranjitha R K | Last Updated : Aug 15, 2024, 02:41 PM IST
  • ಈ ವರ್ಷದ ಉನ್ನತ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪಟ್ಟಿ ಬಿಡುಗಡೆ
  • ಅಗ್ರಸ್ಥಾನದಲ್ಲಿರುವ ದೇಶದ ಫಾರ್ಮಸಿ ಕಾಲೇಜುಗಳ ಪಟ್ಟಿ ಇಲ್ಲಿದೆ
  • ರಾಜ್ಯದ ಎರಡು ಕಾಲೇಜುಗಳಿಗೆ ಪಟ್ಟಿಯಲ್ಲಿ ಸ್ಥಾನ
NIRF ರ‍್ಯಾಂಕಿಂಗ್ ಪಟ್ಟಿ ನಲ್ಲಿ ಅಗ್ರಸ್ಥಾನದಲ್ಲಿ ಈ ಕಾಲೇಜು ! ಟಾಪ್ 10  ಫಾರ್ಮಾ ಕಾಲೇಜುಗಳ ಪಟ್ಟಿ ಇಲ್ಲಿದೆ  title=

Top Pharmacy Institute in NIRF Rankings : ವಿಜ್ಞಾನ ವಿದ್ಯಾರ್ಥಿಯಾಗಿದ್ದು, ಫಾರ್ಮಸಿಯಲ್ಲಿ ನಿಮ್ಮ ವೃತ್ತಿಜೀವನ ಮುಂದುವರೆಸುವ ಬಗ್ಗೆ ಯೋಚಿಸುತ್ತಿದ್ದರೆ,ದೇಶದ ಉನ್ನತ ಫಾರ್ಮಸಿ ಕಾಲೇಜುಗಳು ಯಾವುವು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.NIRFಈ ವರ್ಷದ ಉನ್ನತ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ಅಧ್ಯಯನದ ವಿಷಯದಲ್ಲಿ ಅಗ್ರಸ್ಥಾನದಲ್ಲಿರುವ ದೇಶದ ಫಾರ್ಮಸಿ ಕಾಲೇಜುಗಳ ಹೆಸರನ್ನು ಒಳಗೊಂಡಿದೆ.ಈ ಉನ್ನತ ಸಂಸ್ಥೆಗಳ ಹೆಸರುಗಳು,ಆ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಪಾವತಿಸಬೇಕಾದ ಶುಲ್ಕ ಮತ್ತು ಇಲ್ಲಿ ಅಡ್ಮಿಶನ್ ಪಡೆಯುವ ಬಗೆ ಹೇಗೆ ಎನ್ನುವ ಮಾಹಿತಿ ಇಲ್ಲಿದೆ. 

NIRF ದೇಶಾದ್ಯಂತ ವಿಶ್ವವಿದ್ಯಾಲಯಗಳು, ಕಾಲೇಜುಗಳು,ವೈದ್ಯಕೀಯ, ಔಷಧಾಲಯ ಸಂಸ್ಥೆಗಳ 16 ವಿಭಾಗಗಳಲ್ಲಿ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇದರಲ್ಲಿ ಜಾಮಿಯಾ ಹಮ್ದರ್ದ್ 84.01 ಅಂಕ ಪಡೆದು ಫಾರ್ಮಸಿ ಕ್ಷೇತ್ರದಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಜಾಮಿಯಾ ಹಮ್ದರ್ದ್ ಉನ್ನತ ಶಿಕ್ಷಣ ಸಂಸ್ಥೆಯಾಗಿದ್ದು, 1989 ರಲ್ಲಿ ಹೊಸದಿಲ್ಲಿಯಲ್ಲಿ ಸ್ಥಾಪಿಸಲಾಗಿದೆ. ಇದಕ್ಕೆ ವಿಶ್ವವಿದ್ಯಾನಿಲಯದ ಸ್ಥಾನಮಾನವನ್ನು ನೀಡಲಾಗಿದೆ. 

ಇದನ್ನೂ ಓದಿ : KAS ಪೂರ್ವಭಾವಿ ಪರೀಕ್ಷೆ: KPSC ಹಟಕ್ಕೆ ಬಿದ್ದಿರುವುದು ಸರಿಯಲ್ಲ ಎಂದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ

ವಿದ್ಯಾರ್ಥಿಗಳು ಈ ಸಂಸ್ಥೆಯ ಬಿ ಫಾರ್ಮಾ ಕೋರ್ಸ್‌ಗೆ ಪ್ರವೇಶ ಪಡೆದು 12ರ ನಂತರ ಬಿ ಫಾರ್ಮಾ ಪದವಿ ಅಥವಾ ಡಿಪ್ಲೊಮಾ ಕೋರ್ಸ್ ಮಾಡಬಹುದು. ಇದಕ್ಕಾಗಿ, 12 ನೇ ತರಗತಿಯ ವಿದ್ಯಾರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ / ಗಣಿತದಂತಹ ವಿಷಯಗಳನ್ನು ಹೊಂದಿರಬೇಕು. ಕೆಲವು ಕಾಲೇಜುಗಳು NEET, MHT CET, CUET, AP EAMCET, TS EAMCET, KCET, JEE ಮುಖ್ಯ, KEAM ಇತ್ಯಾದಿ ಅಂಕಗಳ ಆಧಾರದ ಮೇಲೆ B. ಫಾರ್ಮಾದಲ್ಲಿ ಪ್ರವೇಶವನ್ನು ನೀಡುತ್ತವೆ.ಇಲ್ಲಿ ಬಿ ಫಾರ್ಮಾ ಮಾಡಲು 6 ಲಕ್ಷದಿಂದ 8 ಲಕ್ಷದವರೆಗೆ ವೆಚ್ಚವಾಗುತ್ತದೆ. 

ಉದ್ಯೋಗದ ವಿವರ : 
ಡ್ರಗ್ ಇನ್ಸ್‌ಪೆಕ್ಟರ್
ಫಾರ್ಮಾಸಿಸ್ಟ್
ಹೆಲ್ತ್ ಇನ್‌ಸ್ಪೆಕ್ಟರ್
ಫಾರ್ಮಾಸ್ಯುಟಿಕಲ್ ಆಫೀಸರ್
ಫಾರ್ಮಾಸ್ಯುಟಿಕಲ್ ಮಾರ್ಕೆಟಿಂಗ್
ಪ್ಯಾಥೋಲಾಜಿಕಲ್ ಲ್ಯಾಬ್ ವಿಜ್ಞಾನಿ

ಇದನ್ನೂ ಓದಿ : ಹೈಟೆಕ್ ಹಾರ್ವೆಸ್ಟರ್ ಹಬ್‌ಗಳ ಸ್ಥಾಪನೆಗೆ ಅರ್ಜಿ ಆಹ್ವಾನ

NIRF ಶ್ರೇಯಾಂಕ 2024 ರಲ್ಲಿ ದೇಶದ ಟಾಪ್ 10 ಫಾರ್ಮಸಿ ಕಾಲೇಜುಗಳು : 
ಜಾಮಿಯಾ ಹಮ್ದರ್ದ್, ನವದೆಹಲಿ
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್, ಹೈದರಾಬಾದ್
ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್, ಪಿಲಾನಿ
ಜೆಎಸ್ಎಸ್ ಕಾಲೇಜ್ ಆಫ್ ಫಾರ್ಮಸಿ,ಊಟಿ
ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ, ಮುಂಬೈ
ಜೆಎಸ್ಎಸ್ ಫಾರ್ಮಸಿ ಕಾಲೇಜ್,ಮೈಸೂರು
ಪಂಜಾಬ್ ವಿಶ್ವವಿದ್ಯಾನಿಲಯ,ಚಂಡೀಗಢ
ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್, ಮಣಿಪಾಲ್
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್, ಮೊಹಾಲಿ
SVKM ನ ನರ್ಸೀ ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಮುಂಬೈ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News