UGC NET ಜೂನ್ 2024 ಪರೀಕ್ಷೆಯ ವೇಳಾಪಟ್ಟಿಯಲ್ಲಿ ಬದಲಾವಣೆ : ಇಲ್ಲಿದೆ ಹೊಸ ಶೆಡ್ಯೂಲ್

UGC NET ಜೂನ್ 2024 ಪರೀಕ್ಷೆಯ ವೇಳಾಪಟ್ಟಿಯಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಹೊಸ ವೇಳಾಪಟ್ಟಿಯನ್ನು ಈ ಲಿಂಕ್ ಮೂಲಕ ತಿಳಿದುಕೊಳ್ಳ ಬಹುದಾಗಿದೆ.   

Written by - Ranjitha R K | Last Updated : Aug 14, 2024, 05:06 PM IST
  • UGC NET ಜೂನ್ 2024 ಪರೀಕ್ಷೆಯ ವೇಳಾಪಟ್ಟಿ ಪರಿಷ್ಕರಣೆ
  • ಹೀಗಿದೆ ಹೊಸ ವೇಳಾಪಟ್ಟಿ
  • ಈ ಲಿಂಕ್ ಮೂಲಕ ವೇಳಾಪಟ್ಟಿ ನೋಡಿಕೊಳ್ಳಿ
UGC NET ಜೂನ್ 2024 ಪರೀಕ್ಷೆಯ ವೇಳಾಪಟ್ಟಿಯಲ್ಲಿ ಬದಲಾವಣೆ : ಇಲ್ಲಿದೆ ಹೊಸ  ಶೆಡ್ಯೂಲ್   title=

NTA UGC NET Exam Date : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) UGC NET ಜೂನ್ 2024 ಪರೀಕ್ಷೆಯ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ.ಪರೀಕ್ಷೆಗಳು ಆಗಸ್ಟ್ 21ರಿಂದ ಸೆಪ್ಟೆಂಬರ್ 4, 2024 ರವರೆಗೆ ನಡೆಯಲಿದೆ. ಆದರೆ, ಆಗಸ್ಟ್ 26 ಕ್ಕೆ ನಿಗದಿಯಾಗಿದ್ದ ಪರೀಕ್ಷೆಯನ್ನು ಮರುದಿನ ಆಗಸ್ಟ್ 27ಕ್ಕೆ ರಿಶೆಡ್ಯುಲ್ ಮಾಡಲಾಗಿದೆ.26 ಆಗಸ್ಟ್ 2024 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

UGC NET ಜೂನ್ 2024 ರ ಪರೀಕ್ಷೆಯನ್ನು ಭಾರತದ ವಿವಿಧ ನಗರಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಸ್ವರೂಪದಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಒಟ್ಟು 83 ವಿಷಯಗಳನ್ನು ಸೇರಿಸಲಾಗಿದೆ. ಈ ಪರೀಕ್ಷೆ ಆಗಸ್ಟ್ 21 ರಿಂದ ಸೆಪ್ಟೆಂಬರ್ 4 ರವರೆಗೆ ನಡೆಯಲಿದೆ. ಈ ಪೈಕಿ ಆಗಸ್ಟ್ 26 ರ ಪರೀಕ್ಷಾ ದಿನಾಂಕವನ್ನು ಬದಲಾಯಿಸಲಾಗಿದೆ. ಇನ್ನುಳಿದಂತೆ ಎಲ್ಲಾ ಪರೀಕ್ಷೆಗಳು ಮೊದಲೇ ನಿಗದಿಯಾದ ದಿನಾಂಕದಂದೇ ನಡೆಯಲಿದೆ. 

ಇದನ್ನೂ ಓದಿ :  ನಿಮಗಿದು ಗೊತ್ತಾ? ಈ ದೇಶದಲ್ಲಿ ಒಂದೇ ಒಂದು ರೈಲು ಚಲಿಸುವುದಿಲ್ಲ

ಯಾವುದೇ ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ಅಭ್ಯರ್ಥಿಗಳು NTA ಅಧಿಕೃತ ವೆಬ್‌ಸೈಟ್ https://ugcnet.nta.ac.in ಮತ್ತು www.nta.ac.in ಅನ್ನು ಗಮನಿಸಲು ಸೂಚಿಸಲಾಗಿದೆ. ಪರೀಕ್ಷಾ ನಗರ ಕೇಂದ್ರದ ಮಾಹಿತಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಈಗಾಗಲೇ ಈ ವೆಬ್‌ಸೈಟ್‌ಗಳಲ್ಲಿ ಬಿಡುಗಡೆ ಮಾಡಲಾಗಿದೆ. 

ಗಮನಿಸಬೇಕಾದ ಅಂಶ : 
ಆಗಸ್ಟ್ 12, 2024 ರಂದು ಬಿಡುಗಡೆಯಾದ ಪರೀಕ್ಷಾ ನಗರ ಮಾಹಿತಿಯನ್ನು ಹೊಂದಿರುವ ಫಾರ್ಮ್ ಅಡ್ಮಿಟ್ ಕಾರ್ಡ್ ಅಲ್ಲ ಎನ್ನುವುದು ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶ.ಈ ಫಾರ್ಮ್ ಪರೀಕ್ಷಾ ಕೇಂದ್ರವು ಯಾವ ನಗರದಲ್ಲಿದೆ ಎನ್ನುವುದನ್ನು ಮಾತ್ರ ತಿಳಿಸುತ್ತದೆ. ವೇಳಾಪಟ್ಟಿಯನ್ನು  https ://ugcnet.nta.ac.in/images/public-notice-for-schedule-of-ugc-net-ju...ನೇರ ಲಿಂಕ್  ಮೂಲಕ ಪರಿಶೀಲಿಸಿಕೊಳ್ಳಿ. 

ಇದನ್ನೂ ಓದಿ :    ಆಗಸ್ಟ್ 22 ರಿಂದ ಆಗಸ್ಟ್ 31 ರವರೆಗೆ ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿ

ತಮ್ಮ ಪರೀಕ್ಷೆಯ ನಗರ ಸ್ಲಿಪ್ ಅನ್ನು ಡೌನ್‌ಲೋಡ್ ಮಾಡುವಲ್ಲಿ ಅಥವಾ ಪರಿಶೀಲಿಸುವಲ್ಲಿ ಸಮಸ್ಯೆ ಎದುರಿಸುತ್ತಿರುವ ಅಭ್ಯರ್ಥಿಗಳು NTA ಅನ್ನು 011-40759000 ಅಥವಾ ಇಮೇಲ್ ಮೂಲಕ ugcnet@nta.ac.in ನಲ್ಲಿ ಸಂಪರ್ಕಿಸಬಹುದು.ಇತ್ತೀಚಿನ ನವೀಕರಣಗಳು ಮತ್ತು ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ನಿಯಮಿತವಾಗಿ ಅಧಿಕೃತ NTA ವೆಬ್‌ಸೈಟ್‌ಗಳಿಗೆ ಭೇಟಿ ನೀಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News