ಬೆಂಗಳೂರು: ಬೆಳ್ಳಂಬೆಳಿಗ್ಗೆ ಗಾಂಜಾ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಹೇಳಿದ ಸುಳ್ಳಿಗೆ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿಯೇ ತಲೆ ಕೆಡಿಸಿಕೊಂಡು ಹೈರಾಣಾಗುರವ ಘಟನೆ ಯಶವಂತಪುರದ ಎಂಇಐ ಸಿಗ್ನಲ್ ಬಳಿ ನಡೆದಿದೆ.


COMMERCIAL BREAK
SCROLL TO CONTINUE READING

ಹೌದು, ಎಂದಿನಂತೆ ಅಕ್ಕಪಕ್ಕದ ಅಂಗಡಿಯವರು, ಆಟೋ ಚಾಲಕರು ದೈನಂದಿನ ಕೆಲಸದಲ್ಲಿ ನಿರತರಾಗಿದ್ದಾಗ ಏಕಾಏಕಿ ರಸ್ತೆ ಪಕ್ಕದ ಚರಂಡಿಯಿಂದ ಹೊರಬಂದ ವ್ಯಕ್ತಿಯೊಬ್ಬ ‘ತಾನು ಶ್ರೀರಾಂಪುರದಿಂದ ಚರಂಡಿಯೊಳಗಿಂದಲೇ ಬರುತ್ತಿದ್ದೇನೆ. ಇನ್ನೂ 29 ಜನ ಒಳಗಿದ್ದಾರೆ’ ಅಂತಾ ಹೇಳಿದ್ದಾನೆ. ಈ ಭೂಪನ ಮಾತು ಕೇಳಿದ ಸ್ಥಳೀಯರು ಗಾಬರಿಗೊಂಡಿದ್ದು, ಯಾರಾದರೂ ಒಳಗೆ ಸಿಲುಕಿರಬಹುದಾ? ಅಂತಾ ತಕ್ಷಣವೇ ಆರ್‍ಎಂಸಿ ಯಾರ್ಡ್ ಠಾಣಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.


ಇದನ್ನೂ ಓದಿ: ರಾಷ್ಟ್ರೀಯ ಯುವಜನೋತ್ಸವ: ಅರಬಿಂದೋ ಸೊಸೈಟಿಯಿಂದ 7 ಸಾವಿರ ಪುಸ್ತಕಗಳ ಕೊಡುಗೆ


ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಯೊಂದಿಗೆ ಬಂದಿದ್ದ ಪೊಲೀಸರು ಪರಿಶೀಲನೆ ನಡೆಸಿದಾಗ ಇದು ಗಾಂಜಾ ಮತ್ತಿನಲ್ಲಿದ್ದವನ ಕಿತಾಪತಿ ಅನ್ನೋದು ಗೊತ್ತಾಗಿದೆ. ಸದ್ಯ ಗಾಂಜಾ ಮತ್ತಿನಲ್ಲಿ ತೇಲಾಡುತ್ತಿದ್ದವನನ್ನು ಆರ್‍ಎಂಸಿ ಯಾರ್ಡ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ವ್ಯಕ್ತಿಯ ಅವಾಂತರಕ್ಕೆ ಸ್ಥಳೀಯರು ಸಹ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ.


ಇನ್ನೂ ಗಾಂಜಾ ಮತ್ತಲ್ಲಿದ್ದ ವ್ಯಕ್ತಿಯ ಮೈಪೂರ್ತಿ ಮಣ್ಣಾಗಿದ್ದು, ಆತನಿಗೆ ಪೊಲೀಸರೇ ಸ್ನಾನ ಮಾಡಿಸಿದ್ದಾರೆ. ಆದರೆ ಪೊಲೀಸರಿಗೆ ತಲೆ ಕಡೆಸಿದ್ದ ವ್ಯಕ್ತಿ ಮಾತ್ರ ತನ್ನ ಹೆಸರು ಏನು? ಎಲ್ಲಿಂದ ಬಂದೆ? ಅನ್ನೋದನ್ನು ಬಾಯಿಬಿಟ್ಟಿಲ್ಲ. ಅದೆನೇ ಇರ್ಲಿ ಪೊಲೀಸರಿಗೆ ಪ್ರತಿದಿನ ನೂರೆಂಟು ಕೆಲಸಗಳಿರುತ್ತೆ. ಆದರೆ ಹೀಗೆ ಎಣ್ಣೆ, ಗಾಂಜಾ ಹೊಡೆದ ಕೆಲವರು ಪೊಲೀಸರು ತಲೆ ಕೆಡಿಸಿಕೊಳ್ಳುವಂತೆ ಮಾಡುತ್ತಿರುವುದು ಯೋಚಿಸಬೇಕಾದ ಸಂಗತಿಯಾಗಿದೆ.   


ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ-2023: ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಬಿಡುಗಡೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.