ರಾಷ್ಟ್ರೀಯ ಯುವಜನೋತ್ಸವ: ಅರಬಿಂದೋ ಸೊಸೈಟಿಯಿಂದ 7 ಸಾವಿರ ಪುಸ್ತಕಗಳ ಕೊಡುಗೆ

 ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ಹಾಗೂ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ತಿತರಿದ್ದರು.

Written by - Zee Kannada News Desk | Last Updated : Jan 6, 2023, 10:59 PM IST
  • ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ತಿತರಿದ್ದರು
ರಾಷ್ಟ್ರೀಯ ಯುವಜನೋತ್ಸವ:  ಅರಬಿಂದೋ ಸೊಸೈಟಿಯಿಂದ 7 ಸಾವಿರ ಪುಸ್ತಕಗಳ ಕೊಡುಗೆ title=

ಧಾರವಾಡ: ಜನವರಿ 12 ರಿಂದ ಧಾರವಾಡದಲ್ಲಿ ನಡೆಯುವ 26 ನೇಯ ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸುವ ವಿವಿಧ ರಾಜ್ಯಗಳ ಯುವ ಸ್ಪರ್ಧಾಳುಗಳಿಗೆ ಮತ್ತು ಅತಿಥಿಗಳಿಗೆ ವಿತರಿಸಲು ಶ್ರೀ ಅರಬಿಂದೋ ಸೊಸೈಟಿಯಿಂದ ಅ ಕಾಲ್ ಟು ದಿ ಯುಥ್ ಆಫ್ ಇಂಡಿಯಾ (A Call to the youth of India) ಎಂಬ ಪುಸ್ತಕದ 7 ಸಾವಿರ ಪ್ರತಿಗಳನ್ನು ಶ್ರೀ ಅರಬಿಂದೋ ಸೊಸೈಟಿಯ ಟ್ರಸ್ಟಿಗಳಾದ ಮಾಜಿ ಶಾಸಕ ಅಯ್ಯಪ್ಪ ದೇಸಾಯಿ ಅವರು ರಾಷ್ಟ್ರೀಯ ಯುವಜನೋತ್ಸವದ ಉಪಾಧ್ಯಕ್ಷರಾಗಿರುವ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರ ಸಮ್ಮುಖದಲ್ಲಿ ಇಂದು ಮಧ್ಯಾಹ್ನ ಧಾರವಾಡ ಸಕ್ಯೂರ್ಟ್ ಹೌಸ್‍ದಲ್ಲಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.

ಇದನ್ನೂ ಓದಿ: ಸ್ವಾಮೀಜಿಗಳು‌24 ಗಂಟೆಗಳ‌ ಗಡುವು ನೀಡಿದ್ದು ಸರಿಯಲ್ಲ! 

ಈ ಸಂಧರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ ಶೆಟ್ಟರ್, ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ಹಾಗೂ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ತಿತರಿದ್ದರು.

ಇದನ್ನೂ ಓದಿ: ಕೆಪಿಸಿಸಿ ಕಚೇರಿಯಲ್ಲಿ ರಂಪಾಟ! ಕೆಜಿಎಫ್ ಬಾಬುಗೆ ಚಳಿ ಬಿಡಿಸಿದ ‘ಕೈ’ ಕಾರ್ಯಕರ್ತರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News