ಬದುಕಿನಲ್ಲಿ ದೈವಭಕ್ತಿಗೆ ಮಹತ್ವದ ಪಾತ್ರವಿದೆ: ಅಶ್ವತ್ಥ ನಾರಾಯಣ

Ashwaththa Narayan : ಅನೇಕ ಸವಾಲು ಮತ್ತು ಜಟಿಲತೆಗಳಿಂದ ಹೊರಬರುವಲ್ಲಿ ಅಂತರಂಗ ಶುದ್ಧಿಯಿಂದ ಕೂಡಿದ ದೈವಭಕ್ತಿಗೆ ಮಹತ್ವದ ಪಾತ್ರ ಇದೆ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ. 

Written by - Prashobh Devanahalli | Edited by - Zee Kannada News Desk | Last Updated : Jan 6, 2023, 06:37 PM IST
  • ಬದುಕಿನಲ್ಲಿ ದೈವಭಕ್ತಿಗೆ ಮಹತ್ವದ ಪಾತ್ರವಿದೆ
  • ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿಕೆ
ಬದುಕಿನಲ್ಲಿ ದೈವಭಕ್ತಿಗೆ ಮಹತ್ವದ ಪಾತ್ರವಿದೆ: ಅಶ್ವತ್ಥ ನಾರಾಯಣ  title=
ಅಶ್ವತ್ಥ ನಾರಾಯಣ

ಬೆಂಗಳೂರು: ಅನೇಕ ಸವಾಲು ಮತ್ತು ಜಟಿಲತೆಗಳಿಂದ ಹೊರಬರುವಲ್ಲಿ ಅಂತರಂಗ ಶುದ್ಧಿಯಿಂದ ಕೂಡಿದ ದೈವಭಕ್ತಿಗೆ ಮಹತ್ವದ ಪಾತ್ರ ಇದೆ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ. ಮಲ್ಲೇಶ್ವರಂ ಕ್ಷೇತ್ರದ ವ್ಯಾಪ್ತಿಯ ಸುಬೇದಾರ್ ಪಾಳ್ಯದಲ್ಲಿ ಇರುವ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಚೆನ್ನೈನ ಓಂಶಕ್ತಿ ದೇವಸ್ಥಾನಕ್ಕೆ ತೆರಳುವ ಮಹಿಳೆಯರಿಗೆ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು.

ಇದನ್ನೂ ಓದಿ : 2D ಮೀಸಲಾತಿ ತಿರಸ್ಕಾರ: ಸಿಎಂ ಬೊಮ್ಮಾಯಿಗೆ 24 ಗಂಟೆಗಳ ಅಂತಿಮ ಗಡುವು ನೀಡಿದ ಯತ್ನಾಳ್

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನುಷ್ಯನ ಬದುಕು ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ. ಕೆಲವೊಮ್ಮೆ ನಮಗೆ ಆತ್ಮವಿಶ್ವಾಸದ ಕೊರತೆ ಕಾಡುತ್ತದೆ. ಅಂತಹ ಸಂದರ್ಭಗಳಲ್ಲಿ ಭಕ್ತಿಯು ನಮ್ಮ ಕೈ ಹಿಡಿಯುತ್ತದೆ ಎಂದರು. ನಂಬಿಕೆಗಳೇ ಬದುಕಿನ ಆಧಾರಸ್ತಂಭಗಳಾಗಿವೆ. ಆದ್ದರಿಂದ ಪುರುಷಪ್ರಯತ್ನ, ಅದೃಷ್ಟ ಇವುಗಳ ಜತೆಗೆ ಲೋಕಹಿತವನ್ನು ಬಯಸುವ ದೈವಿಕ ಶ್ರದ್ಧೆಯೂ ನಮಗೆ ಬೇಕಾಗುತ್ತದೆ. ಇದೇ ನಮ್ಮ ನೆಮ್ಮದಿಯ ಮೂಲವಾಗಿದೆ ಎಂದು ಅವರು ನುಡಿದರು.

ಮನುಷ್ಯ ವಿಜ್ಞಾನ, ತಂತ್ರಜ್ಞಾನ,  ವೈಚಾರಿಕತೆ ಇತ್ಯಾದಿಗಳಲ್ಲಿ ಎಷ್ಟೇ ಮುಂದುವರಿದಿರಬಹುದು. ಆದರೆ, ಭಕ್ತಿಯ ಪ್ರಭಾವ ನಮ್ಮ ಸಮಾಜ ಮತ್ತು ಸಂಸ್ಕೃತಿಗಳಲ್ಲಿ ಹಾಸು ಹೊಕ್ಕಾಗಿದೆ. ಇದು ಆತ್ಮಾವಲೋಕನಕ್ಕೆ ಪ್ರೇರಣೆ ನೀಡುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಇದನ್ನೂ ಓದಿ : "ಧಮ್ ಇದ್ರೆ ಹೊಡಿ ನನ್ನ, ದಿಲ್ ಇದ್ರೆ ತಡಿ ನನ್ನ" : ಡಾಲಿ ಸೈಲೆಂಟ್‌ ವಾರ್ನ್‌ ಯಾರಿಗೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News