Camera In Girls Hostel Bathroom: ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಶಾಂತನಗರದ ಅಲ್ಪಸಂಖ್ಯಾತರ ಹುಡುಗಿಯರ ಹಾಸ್ಟೆಲ್‌ನ ಬಾತ್ರೂಮ್‌ನಲ್ಲಿ ಕಾಮುಕನೊಬ್ಬ ಮೊಬೈಲ್ ಕ್ಯಾಮೆರಾ ಇಟ್ಟು ವಿಡಿಯೋ ಮಾಡಿದಂತಹ ಘಟನೆ  ಬೆಳಕಿಗೆ ಬಂದಿದೆ. ಸಲೀಂ ಎನ್ನುವ ಕಾಮುಕನೇ ಮೊಬೈಲ್ ಇಟ್ಟು ಈ ಹೇಯಾ ಕೃತ್ಯ ನಡೆಸಿದಾತ ಎಂಬ ಮಾಹಿತಿಯೂ ಲಭ್ಯವಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ- ಕೊಡಗು ಹೆದ್ದಾರಿಯಲ್ಲಿ 61 ಲಕ್ಷ ದರೋಡೆ ಪ್ರಕರಣ: ಕೇವಲ ಹತ್ತು ದಿನಗಳಲ್ಲಿ ದರೋಡೆಕೋರರನ್ನು ಬಂಧಿಸಿದ ಪೊಲೀಸರು


ಶೌಚಾಲಯದಲ್ಲಿ ಕ್ಯಾಮರಾ ಇಟ್ಟಿರುವದನ್ನು ಕಂಡು ಅನುಮಾನ ವ್ಯಕ್ತಪಡಿಸಿದ ವಿದ್ಯಾರ್ಥಿನಿಯರು ಕ್ಯಾಮರಾ ಕಂಡು ಗಾಬರಿಗೊಂಡಿದ್ದು ಕಾಮುಕನನ್ನು ಹಿಡಿದು ಥಳಿಸಿದ್ದಾರೆ. 


ಬಾಲಕಿಯರ ಹಾಸ್ಟೆಲ್ ಪ್ರಕ್ಕದಲ್ಲಿಯೇ ಬಾಡಿಗೆಗೆ ರೂಂ ಪಡೆದಿದ್ದ ಸಲೀಂ ಹಾಸ್ಟೆಲ್‌ನ ಬಾತ್‌ರೂಮ್‌ನ ಕಿಟಕಿಯಿಂದ ಪೈಪ್ ಬಳಸಿ ಅದಕ್ಕೆ ವೈಫೈ ಕ್ಯಾಮೆರಾ ಅಳವಡಿಸಿದ್ದ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. 


ಇದನ್ನೂ ಓದಿ- ಓಡಿ ಹೋಗಿ ಮದುವೆಯಾದ ಜೋಡಿಹಕ್ಕಿ: ಯುವಕನ ತಂದೆ-ತಾಯಿ ಮೇಲೆ ಮಾರಣಾಂತಿಕ ಹಲ್ಲೆ


ಇನ್ನೂ ಸ್ಥಳೀಯರ ಸಹಾಯದಿಂದ ಕಾಮುಕ ಸಲೀಂ ಎಸ್ಕೇಪ್ ಆಗಿದ್ದನು. ಆದರೆ ಜೇವರ್ಗಿ ತಹಶಿಲ್ದಾರ ಹಾಗೂ ಜೇವರ್ಗಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿರುವುದರಿಂದ ಸ್ಥಳಕ್ಕೆ ಪೋಲಿಸರು ಭೇಟಿ ಪರಿಶೀಲನೆ ನಡೆಸಿ, ಸಲೀಂ ಕುಟುಬಸ್ಥರನ್ನು ವಿಚಾರಿಸಿದಾಗ ಎಸ್ಕೇಪ್ ಆಗಿದ್ದ ಸಲೀಂನನ್ನು ಕುಟುಂಬಸ್ಥರೇ ಹಿಡಿದು ಠಾಣೆಗೆ ತಂದು ಒಪ್ಪಿಸಿದ್ದಾರೆ. 


ಪ್ರಕರಣದ ಕುರಿತು ದೂರು ದಾಖಲಿಸಿಕೊಂಡಿರುವ ಜೇವರ್ಗಿ ಪೊಲೀಸರು ಆರೋಪಿಯ ವಿಚಾರಣೆ ನಡೆಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.