ಬೆಂಗಳೂರು: ಜೀವನದಲ್ಲಿ ಬರುತ್ತಿರುವ ಕಷ್ಟಗಳನ್ನು ಎದುರಿಸುವ ಶಕ್ತಿ ಇಲ್ಲ ಎಂದು ಡೆತ್ ನೋಟ್ ಬರೆದಿಟ್ಟು ತನ್ನ ಮಗುವನ್ನು ಕೊಂದು ಬಳಿಕ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಎಚ್​ಎಎಲ್​ನ ವಿಭೂತಿಪುರದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಮೂರು ವರ್ಷದ ಸಂಯುಕ್ತಾ ತಾಯಿಯಿಂದ ಕೊಲೆಯಾದ ದುರ್ದೈವಿ. ಘಟನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗಾಯತ್ರಿಯನ್ನು ಪತಿ ನರೇಂದ್ರ ಆಸ್ಪತ್ರೆಗೆ ದಾಖಲಿಸಿದ್ದಾರೆ. ದಂಪತಿ ತಮಿಳುನಾಡು ಮೂಲದವರಾಗಿದ್ದು, ಎಚ್​ಎಎಲ್​ನ ವಿಭೂತಿಪುರದಲ್ಲಿ ಜೀವನ ಸಾಗಿಸುತ್ತಿದ್ದರು. ಇಪ್ಪತ್ತು ದಿನಗಳಲ್ಲಿ ಹಿಂದೆ ನೇರಂದ್ರ ತಾಯಿ ತಮಿಳುನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೇ ಆಘಾತದಲ್ಲಿದ್ದ ನರೇಂದ್ರ ತಮಿಳುನಾಡಿಗೆ ತೆರಳಿದ್ದರು. 


ಇದನ್ನೂ ಓದಿ- ಜೈಪುರ್ ರೆಸಾರ್ಟ್‌ ಮೇಲೆ ಪೋಲೀಸರ ದಾಳಿ: ಸಿಕ್ಕಿಬಿದ್ದ ರಾಜ್ಯದ ಇನ್ಸ್‌ಪೆಕ್ಟರ್, ತಹಸೀಲ್ದಾರ್


ನಿನ್ನೆ ತಮಿಳುನಾಡಿನಿಂದ ಬೆಂಗಳೂರಿಗೆ ನರೇಂದ್ರ ಬಂದಿದ್ದರು. ಮನೆ ಬಾಗಿಲು ತಟ್ಟಿದಾಗ ಪತ್ನಿ ಗಾಯತ್ರಿ ಬಾಗಿಲು ತೆಗೆಯಲಿಲ್ಲ. ಇದರಿಂದ ಅನುಮಾನಗೊಂಡ  ನರೇಂದ್ರ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಪತ್ನಿ ನೇಣು ಬಿಗಿದುಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಇನ್ನೊಂದೆಡೆ ಮಗುವನ್ನು ನೀರು ತುಂಬಿದ ಟಬ್​ನಲ್ಲಿ ಮುಳುಗಿಸಿ ಹತ್ಯೆ ಮಾಡಲಾಗಿತ್ತು. 


ಇದನ್ನೂ ಓದಿ- ಜೆಎನ್ ಯುನಲ್ಲಿ ಮತ್ತೆ ಗಲಾಟೆ: ವಿದ್ಯಾರ್ಥಿಗಳು- ಸೆಕ್ಯುರಿಟಿಗಳ ಮಧ್ಯೆ ಮಾರಾಮಾರಿ


ಸದ್ಯ ಗಂಭೀರ ಸ್ಥಿತಿಯಲ್ಲಿದ್ದ  ಪತ್ನಿಯನ್ನು ನರೇಂದ್ರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, “ಬಂದಿರುವ ಕಷ್ಟಗಳನ್ನು ನಿಭಾಯಿಸುವ ಶಕ್ತಿ ಇಲ್ಲ, ತನ್ನ ಸಾವಿನ ನಂತರ ಮಗು ನೋಡಿಕೊಳ್ಳಲು ಯಾರೂ ಇಲ್ಲ, ನನ್ನ ಸಾವಿಗೆ ನಾನೇ ಕಾರಣ” ಎಂದು ಗಾಯಿತ್ರಿ ಬರೆದಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.