ದೇಣಿಗೆ ಸಂಗ್ರಹಿಸುತ್ತಿದ್ದ ವಿಶೇಷಚೇತನನ ಮೇಲೆ ಮಂಗಳಮುಖಿಯರಿಂದ ಹಲ್ಲೆ ಆರೋಪ, ಕೇಸ್ ದಾಖಲು
Assault on a specially abled person : ವಿಶೇಷಚೇತನ ಯುವಕನ ಮೇಲೆ ಇಬ್ಬರು ಮಂಗಳಮುಖಿಯರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದ್ದು, ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ವಿಶೇಷಚೇತನ ಯುವಕನ ಮೇಲೆ ಇಬ್ಬರು ಮಂಗಳಮುಖಿಯರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದ್ದು, ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ಮಧ್ಯಾಹ್ನ ವಿವೇಕಾನಂದ ಮೆಟ್ರೋ ನಿಲ್ದಾಣದ ಬಳಿ ತನ್ನ ತಾಯಿಯೊಂದಿಗೆ ಬರುತ್ತಿದ್ದ ವೆಂಕಟಪ್ಪ ಎಂಬ 26 ವರ್ಷದ ವಿಶೇಷಚೇತನ ಯುವಕನನ್ನ ಅಡ್ಡಗಟ್ಟಿದ್ದ ಇಬ್ಬರು ಮಂಗಳಮುಖಿಯರು ಆತನ ಮೇಲೆ ಹಲ್ಲೆ ಮಾಡಿ, ಜೀವಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ : ಪಾರ್ಟಿ ಮಾಡಿ ಸ್ನೇಹಿತೆಯರ ಮೇಲೆ ಅತ್ಯಾಚಾರಕ್ಕೆ ಯತ್ನ: ಇಬ್ಬರು ಯುವಕರ ಬಂಧನ
ಚನ್ನಪಟ್ಟಣ ಮೂಲದ ವೆಂಕಟಪ್ಪ, ತನ್ನಂತೆ ವಿಶೇಷಚೇತನರಾಗಿರುವ ಹಲವರಿಗಾಗಿ ತನ್ನ ಊರಿನಲ್ಲಿ ಆಶ್ರಮ ನಿರ್ಮಿಸುವ ಸಲುವಾಗಿ ದೇಣಿಗೆ ಸಂಗ್ರಹಿಸುತ್ತಿದ್ದ. ಇದರಿಂದಾಗಿ ತಮಗೆ ಯಾರೂ ಹಣ ನೀಡುತ್ತಿಲ್ಲವೆಂದು ಭಾವಿಸಿದ್ದ ಇಬ್ಬರು ಮಂಗಳಮುಖಿಯರು ಈ ಹಿಂದೆ ಒಮ್ಮೆ ವೆಂಕಟಪ್ಪನಿಗೆ ಬೆದರಿಕೆ ಹಾಕಿದ್ದರಂತೆ. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದ ವೆಂಕಟಪ್ಪ ದೇಣಿಗೆ ಸಂಗ್ರಹದಲ್ಲಿ ತೊಡಗಿದ್ದ.
ನಿನ್ನೆ ಸ್ಥಳಕ್ಕೆ ಬಂದ ಮಂಗಳಮುಖಿಯರು ತನ್ನ ಮೇಲೆ ನಿನ್ನೆ ಮಧ್ಯಾಹ್ನ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಇಂದಿರಾನಗರ ಠಾಣೆಗೆ ವೆಂಕಟಪ್ಪ ದೂರು ನೀಡಿದ್ದಾನೆ. ದೂರಿನನ್ವಯ ಪ್ರಕರಣ ದಾಖಲಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ನೀನೇ ಬೇಕು ಅಂತಾ ಆಂಟಿ ಹಿಂದೆ ಬಿದ್ದ, ಆಕೆ ಒಲ್ಲೆ ಎಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದ ಬಿಎಂಟಿಸಿ ಚಾಲಕ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.