ನೀನೇ ಬೇಕು ಅಂತಾ ಆಂಟಿ ಹಿಂದೆ ಬಿದ್ದ, ಆಕೆ ಒಲ್ಲೆ ಎಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದ ಬಿಎಂಟಿಸಿ ಚಾಲಕ

BMTC Bus Driver suicide case : ಲಾಡ್ಜ್ ನಲ್ಲಿ ಬಿಎಂಟಿಸಿ ಚಾಲಕನ ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ತನಿಖೆ ಕೈಗೊಂಡ ಪೊಲೀಸರಿಗೆ ಸ್ಪೋಟಕ ಮಾಹಿತಿ ದೊರೆತಿದೆ. ಕೊಲೆಯೋ ಆತ್ಮಹತ್ಯೆಯೋ ಎಂಬ ಅನುಮಾನಕ್ಕೆ ತೆರೆ ಬಿದ್ದಿದೆ.

Written by - VISHWANATH HARIHARA | Edited by - Chetana Devarmani | Last Updated : Feb 7, 2023, 04:46 PM IST
  • ಬಿಎಂಟಿಸಿ ಚಾಲಕ ಅನುಮಾನಾಸ್ಪದ ಸಾವು ಪ್ರಕರಣ
  • ನೀನೇ ಬೇಕು ಅಂತಾ ಆಂಟಿ ಹಿಂದೆ ಬಿದ್ದ
  • ಆಕೆ ಒಲ್ಲೆ ಎಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದ
ನೀನೇ ಬೇಕು ಅಂತಾ ಆಂಟಿ ಹಿಂದೆ ಬಿದ್ದ, ಆಕೆ ಒಲ್ಲೆ ಎಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದ ಬಿಎಂಟಿಸಿ ಚಾಲಕ  title=
BMTC Bus Driver suicide case

ಬೆಂಗಳೂರು : ಲಾಡ್ಜ್ ನಲ್ಲಿ ಬಿಎಂಟಿಸಿ ಚಾಲಕನ ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ತನಿಖೆ ಕೈಗೊಂಡ ಪೊಲೀಸರಿಗೆ ಸ್ಪೋಟಕ ಮಾಹಿತಿ ದೊರೆತಿದೆ. ಕೊಲೆಯೋ ಆತ್ಮಹತ್ಯೆಯೋ ಎಂಬ ಅನುಮಾನಕ್ಕೆ ತೆರೆ ಬಿದ್ದಿದ್ದು, ವಿವಾಹಿತಳ ಹಿಂದೆ ಬಿದ್ದ ಚಾಲಕ ಪುಟ್ಟೇಗೌಡ (28) ಆಕೆ ಸಂಬಂಧ ನಿರಾಕರಿಸಿದಾಗ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬುದು ಗೊತ್ತಾಗಿದೆ.  ಕೆಂಗೇರಿ ಠಾಣಾ ಪೊಲೀಸ್ ವ್ಯಾಪ್ತಿಯಲ್ಲಿ ಪುಟ್ಟೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದ.

ಚೆನ್ನಪಟ್ಟಣ ಮೂಲದ ಪುಟ್ಟೇಗೌಡನಿಗೆ ಕೇವಲ ಆರು ತಿಂಗಳ ಹಿಂದೆಯಷ್ಟೇ ವಿವಾಹಿತ ಮಹಿಳೆಯೊಬ್ಬಳ ಪರಿಚಯವಾಗಿತ್ತು. ತನ್ನೂರಿನ ಪಕ್ಕದ ಊರಿನವಳೇ ಆಗಿದ್ದ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ. ಇತ್ತೀಚೆಗೆ ಆಕೆಯನ್ನ ತನ್ನ ಜೊತೆಯಲ್ಲೇ ಇರುವಂತೆ ಪುಟ್ಟೇಗೌಡ ದುಂಬಾಲು ಬಿದಿದ್ದ.

ಇದನ್ನೂ ಓದಿ : ಬಸವಕಲ್ಯಾಣ: ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ

ನನಗೆ ಇಬ್ಬರು ಮಕ್ಕಳಿದ್ದಾರೆ. ಹೀಗಾಗಿ ನಿನ್ನ ಜೊತೆಯಲ್ಲಿ ಸಂಬಂಧ ಮುಂದುವರೆಸಲು ಸಾಧ್ಯವಿಲ್ಲ ಎಂದು ಪುಟ್ಟೇಗೌಡನಿಗೆ ಮಹಿಳೆ ಹೇಳಿದ್ದಳು. ಜನವರಿ 30 ರಂದು ಕೆಲಸಕ್ಕೆಂದು ಬಂದಿದ್ದ ಪುಟ್ಟೇಗೌಡ ನೇರವಾಗಿ ಲಾಡ್ಜ್ ಗೆ ಬಂದು ಅದೇ ಮಹಿಳೆಯನ್ನ ಕರೆಸಿಕೊಂಡು ಲೈಂಗಿಕ ಬೆಳಸಿದ್ದ. ಒಂದು ಗಂಟೆ ಜೊತೆಯಲ್ಲೇ ಕಳೆದ ಬಳಿಕ ಮತ್ತೆ ಜೊತೆಯಲ್ಲೇ ಇರುವಂತೆ ಆಕೆಯೊಂದಿಗೆ ಕ್ಯಾತೆ ತೆಗೆದಿದ್ದ. 

ಇತ್ತ ಆಕೆ ನಿದ್ರೆಗೆ ಜಾರಿದಾಗ ಬಾತ್ ರೂಮಿಗೆ ತೆರಳಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಎಚ್ಚರವಾದ ಬಳಿಕ ಗಮನಿಸಿದ ಮಹಿಳೆ ಭಯದಿಂದ ಹೆದರಿ ರೂಮ್ ಲಾಕ್ ಮಾಡಿಕೊಂಡು ತೆರಳಿದ್ದಳು. ಲಾಡ್ಜ್ ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಆ ಮಹಿಳೆಯನ್ನ ಪತ್ತೆಹಚ್ಚಿದ ಪೊಲೀಸರು ಆಕೆಯ ಹೇಳಿಕೆ ದಾಖಲಿಸಿದ್ದಾರೆ. ಇತ್ತ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಪುಟ್ಟೇಗೌಡ ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ ಎಂದು ಕೆಂಗೇರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಅಧಿಕಾರದಿಂದ ಕಿತ್ತು ಕೆಳಗಿಳಿಸಿದರೂ ಕಾಂಗ್ರೆಸ್ ನಾಯಕರ ಮದ ಇಳಿಯುತ್ತಿಲ್ಲ: ಬಿಜೆಪಿ ಟೀಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News