ಹೆಲ್ಮೆಟ್ ಹಾಕಿಲ್ಲ ಎಂದು ವಕೀಲನ ಮೇಲೆ ಹಲ್ಲೆ: 6 ಪೊಲೀಸರ ಅಮಾನತು
Police vs Lawyer: ಗುರುವಾರ(ನವೆಂಬರ್ 30) ರಾತ್ರಿ 8 ಗಂಟೆ ವೇಳೆಗೆ ನಗರದ ಮಾರ್ಕೆಟ್ ರಸ್ತೆಯಲ್ಲಿ ನಗರ ಠಾಣೆ ಮುಂಭಾಗ ಯುವ ವಕೀಲ ಪ್ರೀತಂ ಹೆಲ್ಮೆಟ್ ಹಾಕದೆ ಬೈಕಿನಲ್ಲಿ ಹೋಗುತ್ತಿದ್ದರು. ವಕೀಲನನ್ನ ಪ್ರಶ್ನಿಸಿದ ಪೊಲೀಸರು ಹಾಗೂ ವಕೀಲನ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಚಿಕ್ಕಮಗಳೂರು: ಹೆಲ್ಮೆಟ್ ಹಾಕಿಲ್ಲ ಎಂದು ಚಿಕ್ಕಮಗಳೂರು ನಗರ ಪೊಲೀಸರು ವಕೀಲರ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದ ಆರೋಪದಡಿ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಆರು ಜನ ನಗರ ಠಾಣಾ ಪೊಲೀಸರನ್ನ ಅಮಾನತು ಮಾಡಿದ್ದಾರೆ. ಓರ್ವ ಪಿಎಸ್‍ಐ, ಓರ್ವ ಎ.ಎಸ್.ಐ. ಓರ್ವ ಹೆಡ್ ಕಾನ್ಸಟೇಬಲ್ ಸೇರಿದಂತೆ ಮೂವರು ಪೇದೆಗಳನ್ನ ಅಮಾನತು ಮಾಡಿದ್ದಾರೆ.
ಗುರುವಾರ(ನವೆಂಬರ್ 30) ರಾತ್ರಿ 8 ಗಂಟೆ ವೇಳೆಗೆ ನಗರದ ಮಾರ್ಕೆಟ್ ರಸ್ತೆಯಲ್ಲಿ ನಗರ ಠಾಣೆ ಮುಂಭಾಗ ಯುವ ವಕೀಲ ಪ್ರೀತಂ ಹೆಲ್ಮೆಟ್ ಹಾಕದೆ ಬೈಕಿನಲ್ಲಿ ಹೋಗುತ್ತಿದ್ದರು. ವಕೀಲನನ್ನ ಪ್ರಶ್ನಿಸಿದ ಪೊಲೀಸರು ಹಾಗೂ ವಕೀಲನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬೈಕಿನ ಕೀ ಏಕೆ ತೆಗೆಯುತ್ತೀರಾ ಎಂದು ಪ್ರಶ್ನಿಸಿದ ವಕೀಲ ದಂಡ ಕಟ್ಟುತ್ತೇನೆ ಎಂದು ಪೊಲೀಸರ ವಾಗ್ವಾದ ನಡೆಸಿದ್ದಾರೆ. ಠಾಣೆ ಎದುರೇ ಘಟನೆ ನಡೆದಿದ್ದರಿಂದ ಪೊಲೀಸರು ಆತನನ್ನ ಠಾಣೆಗೆ ಕರೆದೊಯ್ದು ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆಂದು ವಕೀಲರ ಸಂಘ ಆರೋಪಿಸಿದೆ.
ಇದನ್ನೂ ಓದಿ- Tumakuru: ಬೈಕ್ ಅಪಘಾತದಲ್ಲಿ ಪೊಲೀಸ್ ಪೇದೆ ಸೇರಿ ಇಬ್ಬರ ದುರ್ಮರಣ..!
ಈ ಘಟನೆಯಲ್ಲಿ ವಕೀಲ ಪ್ರೀತಂ ಎದೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದು ಆಸ್ಪತ್ರೆಗೆ ಹೋಗಿ ಆತನನ್ನ ನೋಡಿಕೊಂಡು ಠಾಣೆಗೆ ಬಂದ ವಕೀಲರ ಸಂಘ ಇಡೀ ರಾತ್ರಿ ಪೊಲೀಸ್ ಠಾಣೆ ಮುಂದೆ ಬೀಡುಬಿಟ್ಟಿತ್ತು. ವಕೀಲ ಪ್ರೀತಂ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿರುವ ಸಿಬ್ಬಂದಿಯನ್ನು ಅರೆಸ್ಟ್ ಮಾಡಿ ಎಂದು ಆಗ್ರಹಿಸಿದ್ದರು. ಆದರೆ, ಪೊಲೀಸರು ವಿಚಾರಣೆಗೊಳಪಡಿಸುತ್ತೇವೆ ಎಂದಾಗ ವಕೀಲರು ವಿಚಾರಣೆ ಬೇಡ ಕೇಸ್ ದಾಖಲಿಸಿ ಬಂಧಿಸಿ ಎಂದು ಆಗ್ರಹಿಸಿದ್ದರು.
ಪ್ರೀತಂ ಮೇಲೆ ಹಲ್ಲೆ ಮಾಡಿದ ಪೇದೆಯನ್ನ ಆಸ್ಪತ್ರೆಯಲ್ಲಿ ರಿಪೋರ್ಟ್ ತೆಗೆದುಕೊಳ್ಳಲು ಕಳುಹಿಸಿರುವುದಾಗಿ ತಿಳಿದಾಗ, ಇದು ವಕೀಲರ ಆಕ್ರೋಶಕ್ಕೆ ಕಾರಣವಾಗಿತ್ತು. ಸೆಕ್ಷನ್ 307ರ ಅಡಿಯಲ್ಲಿ ಕೇಸ್ ದಾಖಲಾಗಿದೆ. ಆರೋಪಿಗಳು ಠಾಣೆಯ ಒಳಗೆ ಇದ್ದಾರೆ, ಬಂಧಿಸಿ ಎಂದು ಪಟ್ಟು ಹಿಡಿದಿದ್ದರು. ಸುಮಾರು ಆರು ಗಂಟೆಗಳ ವಕೀಲರ ಹೋರಾಟದ ಫಲವಾಗಿ ಎಸ್ಪಿ ಆರು ಜನ ಪೊಲೀಸರನ್ನ ಅಮಾನತು ಮಾಡಿ ವಿಚಾರಣೆಗೆ ಡಿ.ವೈ.ಎಸ್.ಪಿ. ನೇತೃತ್ವದ ತಂಡ ರಚಿಸಿದ್ದಾರೆ.
ಇದನ್ನೂ ಓದಿ- ಬಾಯ್‌ಫ್ರೆಂಡ್‌ನ ಫೋನ್‌ನಲ್ಲಿ 13,000 ಬೆತ್ತಲೆ ಫೋಟೋಗಳನ್ನು ಕಂಡು ಯುವತಿ ಶಾಕ್!
ಡಿವೈಎಸ್‌ಪಿ ಆರು ಜನರನ್ನ ಅಮಾನತು ಮಾಡಿ ಆದೇಶಿಸಿದ್ದಾರೆ. ಆದರೆ, ಆ ಆರು ಜನ ಅರೆಸ್ಟ್ ಆಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿರೋ ವಕೀಲರ ಸಂಘ ಹೋರಾಟವನ್ನ ಮುಂದುವರೆಸಲು ಮುಂದಾಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.