ಅದೃಷ್ಟದ ಚೊಂಬು ಕೊಡ್ತೀನಿ ಅಂತಾ ನಾಮ ಹಾಕಿದ್ದ ಗ್ಯಾಂಗ್ ಅಂದರ್
ಮೋಸ ಹೋಗೋರು ಎಲ್ಲಿವರ್ಗೆ ಇರ್ತಾರೋ.. ಅಲ್ಲಿವರ್ಗೂ ಮೋಸ ಮಾಡೋರ ಇದ್ದೆ ಇರ್ತಾರೆ... ಇದೇ ರೀತಿ ಜನರ ನಂಬಿಕೆಯನ್ನು ಬಂಡವಾಳ ರೈಸ್ ಪುಲ್ಲಿಂಗ್ ನಿಂದ ಕೋಟಿ ಕೋಟಿ ಹಣ, ಅದೃಷ್ಟ ಬರುತ್ತೆ ಅಂತಾ ನಂಬಿಸಿ ವಂಚನೆ ಮಾಡ್ತಿದ್ದ ಗ್ಯಾಂಗ್‌ವೊಂದನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ... ಹಾಗಾದ್ರೆ ಖತರ್ನಾಕ್ ಗ್ಯಾಂಗ್ ಏನೂ ಮಾಡುತ್ತಿತ್ತು ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇದೆ.
ಬೆಂಗಳೂರು : ಮೋಸ ಹೋಗೋರು ಎಲ್ಲಿವರ್ಗೆ ಇರ್ತಾರೋ.. ಅಲ್ಲಿವರ್ಗೂ ಮೋಸ ಮಾಡೋರ ಇದ್ದೆ ಇರ್ತಾರೆ... ಇದೇ ರೀತಿ ಜನರ ನಂಬಿಕೆಯನ್ನು ಬಂಡವಾಳ ರೈಸ್ ಪುಲ್ಲಿಂಗ್ ನಿಂದ ಕೋಟಿ ಕೋಟಿ ಹಣ, ಅದೃಷ್ಟ ಬರುತ್ತೆ ಅಂತಾ ನಂಬಿಸಿ ವಂಚನೆ ಮಾಡ್ತಿದ್ದ ಗ್ಯಾಂಗ್‌ವೊಂದನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ... ಹಾಗಾದ್ರೆ ಖತರ್ನಾಕ್ ಗ್ಯಾಂಗ್ ಏನೂ ಮಾಡುತ್ತಿತ್ತು ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇದೆ.
ನಾವು ಅದೆಷ್ಟೋ ಬಾರಿ ರೈಸ್ ಪುಲ್ಲಿಂಗ್ ಮೋಸ್ ಬಗ್ಗೆ ಎಚ್ಚರದ ಸ್ಟೋರಿಗಳು ಪ್ರಸಾರ ಮಾಡಿದ್ದೇವೆ. ಪೊಲೀಸರು ಸಹ ಇಂತವುಗಳಿಂದ ಮೋಸ ಹೋಗಬೇಡಿ ಅಂತಾ ಜಾಗೃತಿ ಮೂಡಿಸ್ತಾನೆ ಇರ್ತಾರೆ. ಆದ್ರೂ ಕೆಲವರು ಮಾತ್ರ ಮೂಡ ನಂಬಿಕೆಗೆ ಬಲಿಯಾಗಿ ಕಲರ್ ಕಲರ್ ಡೈಲಾಗ್ ಹೊಡೆಯೋರನ್ನ ನಂಬಿ ಮೋಸ ಹೋಗುತ್ತಿದ್ದಾರೆ.. ಅದೃಷ್ಟದ ಚೊಂಬಿನ ಹೆಸ್ರಲ್ಲಿ ಕೆಲವರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಗ್ಯಾಂಗ್ ವೊಂದನ್ನ ಸಿಸಿಬಿ ಸ್ಪೆಷಲ್ ಟೀಂ ಹೆಡೆಮುರಿ ಕಟ್ಟಿದೆ. ರಾಜೇಶ್, ಮೊಹಮ್ಮದ್ ಗೌಸ್, ಸ್ಟೀಫನ್, ಸಾಹಿಲ್, ಶ್ರೀನಿವಾಸ್, ವಿಕಾಸ್ ಕುಮಾರ್, ಸ್ರೀವಲ್ಸ್ ಎಂಬ ಎಂಟು ಜನರ ಗ್ಯಾಂಗ್ ಅನ್ನ ಸಿಸಿಬಿ ಪೊಲೀಸರು ಜೈಲಿಗೆ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ಪಕ್ಷ ಸೇರುತ್ತೇನೆಂದು ಒತ್ತಡ ಹೇರುವ ತಂತ್ರ ಮಾಡಿದ್ದಾರೆ ಸುಮಲತಾ; ನಳೀನ್ ಕುಮಾರ್ ಕಟೀಲ್
ಅದೃಷ್ಟದ ಹುಡುಕಾಟ, ಬ್ಯುಸಿನೆಸ್ ಮೈಂಡ್ ಇರೋರನ್ನೇ ಟಾರ್ಗೆಟ್ ಮಾಡ್ತಿದ್ದ ಆರೋಪಿಗಳು, ಅವರನ್ನು ಮಾಡಿ ಕಾಂಟ್ಯಾಕ್ಟ್ ಮಾಡುತ್ತಿದ್ದರು. ಅಫೀಶಿಯಲ್ ಗಳ ರೀತಿಯಲ್ಲಿ ವೇಷಭೂಷಣ ಧರಿಸಿ ಮಾತನಾಡಿ ನಂಬಿಕೆ ಗಳಿಸುತ್ತಿದ್ದರು. ಇದೇ ರೀತಿ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲವರ ಬಳಿ ನಂಬಿಕೆ ಗಳಿಸಿದ್ದ ಆರೋಪಿಗಳು, ನಮ್ಮ ಬಳಿ ಬೆಲೆ ಬಾಳೋ ರೈಸ್ ಪುಲ್ಲಿಂಗ್ ಇದೆ. ಇದು ಬಾಹ್ಯಾಕಾಶ ಇಂಡಷ್ಟ್ರಿಯಲ್ಲಿ ಒಳ್ಳೆ ಬೇಡಿಕೆ ಇದೆ. ಸುಮಾರು ಐದು ಕೋಟಿಗೂ ಹೆಚ್ಚು ಬೆಲೆ ಬಾಳುತ್ತೆ.. ಇದನ್ನ 1.2 ಕೋಟಿಗೆ ತೆಗೆದುಕೊಳ್ಳಿ.. ನಂತರ ನಾವೇ ಅದನ್ನ ಹೆಚ್ಚಿನ ರೇಟ್ ಗೆ ಮಾರಾಟ ಮಾಡಿಸಿಕೊಡ್ತೀವಿ ಎಂದು ನಂಬಿಸಿದ್ರು.. ಅಲ್ಲದೇ ನಗರದ ಖಾಸಗಿ ಹೋಟೆಲ್ ನಲ್ಲಿ ಮೀಟ್ ಮಾಡಿ 35ಲಕ್ಷಕ್ಕೂ ಹೆಚ್ಚು ಹಣವನ್ನೂ ಪಡೆದು ಚೊಂಬು ನೀಡದೆ ಆಟ ಆಡಿಸ್ತಿದ್ರು.. ನೀವು ಚೊಂಬನ್ನು ನೋಡಿದ್ರೆ ಕಣ್ಣು ಹೋಗುತ್ತೆ.. ಅದರಿಂದ ಬರೋ ಲೈಟ್, ಲೇಸರ್ ನಿಂದ ನಿಮ್ಮ ಆರೋಗ್ಯ ಹದಗೆಡುತ್ತೆ ಅಂತಾ ಹೆದರಿಸಿ ರೈಸ್ ಪುಲ್ಲಿಂಗ್ ಕೊಡದೆ ಹಣವನ್ನೂ ವಾಪಸ್ ಕೊಡದೆ ವಂಚಿಸಿದ್ರು..
ಈ ಸಂಬಂಧ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು ಎಂಟೂ ಜನರ ಗ್ಯಾಂಗ್ ಬಂಧಿಸಿ ಅವರಿಂದ 35ಲಕ್ಷ ಹಣ ಮತ್ತು ರೈಸ್ ಪುಲ್ಲಿಂಗನ್ನು ಜಪ್ತಿ ಮಾಡಿದ್ದಾರೆ. ಖತರ್ನಾಕ್ ಗಳ ಟೀಂನಲ್ಲಿ ಇನ್ನೂ ಯಾರ್ಯಾರಿದ್ದಾರೆ.. ಇನ್ನೂ ಇವರು ಎಷ್ಟು ಜನಕ್ಕೆ ಮೋಸ ಮಾಡಿದ್ದಾರೆ ಅನ್ನೋದ್ರ ಬಗ್ಗೆ ತನಿಖೆ ನಡೆಸ್ತಿದ್ದಾರೆ.. ಅದೆನೇ ಇರ್ಲಿ.. ನಂಬಿಸಿ ಈ ರೀತಿ ಮೋಸ ಮಾಡೋರು ಇದ್ದೇ ಇರ್ತಾರೆ.. ಆದಷ್ಟು ಮೂಡನಂಭಿಕೆ, ಅಪರಿಚಿತರನ್ನ ನಂಬೋ ಮುನ್ನ ಹುಷಾರಾಗಿರಿ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.