ಪಕ್ಷ ಸೇರುತ್ತೇನೆಂದು ಒತ್ತಡ ಹೇರುವ ತಂತ್ರ ಮಾಡಿದ್ದಾರೆ ಸುಮಲತಾ; ನಳೀನ್ ಕುಮಾರ್ ಕಟೀಲ್

ಮಂಡ್ಯ : ಸುಮಲತಾ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಬಗ್ಗೆ ಕಳೆದ ಕೆಲವು ದಿನಗಳಿಂದ ಊಹಾಪೋಹಗಳು ಹರಿದಾಡುತ್ತಿವೆ. ಅವರ ಕೆಲವು ನಡೆಗಳು ಈ ಕುರಿತ ಅನುಮಾನಕ್ಕೆ ಪುಷ್ಟಿ ನೀಡಿವೆ. ಈಗಾಗಲೇ ಬಿಜೆಪಿಯ ಕೆಲವು ನಾಯಕರೊಂದಿಗೆ ಕಾಣಿಸಿಕೊಂಡಿರು ಸುಮಲತಾ ಮಾರ್ಚ್ 4 ರಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿ ಹಿರಿಯ ನಾಯಕ ಎಸ್​.ಎಂ.ಕೃಷ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 

Written by - Zee Kannada News Desk | Last Updated : Mar 8, 2023, 03:42 PM IST
  • ಪಕ್ಷಕ್ಕೆ ಯಾರನ್ನು ಸೇರಿಸಿಕೊಳ್ಳಬೇಕೆಂದು ನಾವೇ ಯೋಚಿಸುತ್ತೇವೆ
  • ಸುಮಲತಾ ಮೊದಲು ಪಕ್ಷಕ್ಕೆ ಬರಲಿ ಅನಂತರ ಕ್ಷೇತ್ರ ಯಾವುದು ಅಂತ ನೋಡೋಣ,
  • ಸುಮಲತಾ ಪಕ್ಷಕ್ಕೆ ಬರಲು ಯಾವುದೇ ಬೇಡಿಕೆ ಇಟ್ಟಿಲ್ಲ ಇದೆಲ್ಲಾ ಬರಿ ಊಹಾ ಪೋಹ ಅಷ್ಟೇ
ಪಕ್ಷ ಸೇರುತ್ತೇನೆಂದು ಒತ್ತಡ ಹೇರುವ ತಂತ್ರ ಮಾಡಿದ್ದಾರೆ ಸುಮಲತಾ; ನಳೀನ್ ಕುಮಾರ್ ಕಟೀಲ್ title=

ಈ ಎಲ್ಲ ಊಹಾಪೋಹಗಳ ನಡುವೆಯೇ ಪಕ್ಷ ಸೇರ್ಪಡೆ ವಿಚಾರವಾಗಿ ಸುಮಲತಾ ಈ ಹಿಂದೆ ಸುದ್ದಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಪದ್ಮವಿಭೂಷಣ ಪ್ರಶಸ್ತಿ ಲಭಿಸಿರುವ ಹಿನ್ನಲೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಲು ತೆರಳಿದ್ದೆ. ಭೇಟಿ ವೇಳೆ ಯಾವುದೇ ರಾಜಕೀಯ ವಿಚಾರದ ಬಗ್ಗೆ ಚರ್ಚಿಸಿಲ್ಲ ಎಂದಿದ್ದರು. 
 

ಅಲ್ಲದೇ ತಾವು ಇನ್ನೂ ಯಾವ ಪಕ್ಷಕ್ಕೆ ಸೇರಿಕೊಳ್ಳತ್ತೇನೆ ಎಂಬುದನ್ನು ನಿರ್ಧರಿಸಿಲ್ಲ, ನನ್ನ ಜತೆ ಇರುವವರ ಹಿತದೃಷ್ಟಿಯಲ್ಲಿಕೊಂಡೇ ನಿರ್ಧಾರ ಮಾಡಬೇಕಿದೆ. ಇನ್ನೂ ಹಲವರ ಜೊತೆ ಚರ್ಚೆ ಮಾಡಬೇಕು. ಹಿರಿಯರು, ಹಿತೈಷಿಗಳು, ಕುಟುಂಬಸ್ಥರು, ಪಕ್ಷೇತರವಾಗಿ ಸ್ಪರ್ಧಿಸುವಂತೆ ಹೇಳಿ ಬೆಂಬಲಿಸಿದ ನಾಯಕರ ಜೊತೆ ಚರ್ಚೆ ನಡೆಸಿಯೇ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದರು. 

ಇದನ್ನೂ ಓದಿ-ಭಾರತೀಯ ಸೇನೆಯಲ್ಲಿ ಮಹಿಳೆಯರಿಗೂ ಸಿಗುತ್ತಿದೆ ನಾಯಕತ್ವದ ಪಾತ್ರಗಳು

ಈ ವಿಚಾರವಾಗಿ ನಳೀನ್‌ ಕುಮಾರ್‌ ಕಟೀಲ್ " ಪಕ್ಷಕ್ಕೆ ಯಾರನ್ನು ಸೇರಿಸಿಕೊಳ್ಳಬೇಕೆಂದು ನಾವೇ ಯೋಚಿಸುತ್ತೇವೆ ಅಲ್ಲದೇ ಪಕ್ಷಕ್ಕೆ ಬರುವವರು ತುಂಬಾ ಜನ ಇದ್ದಾರೆ, ಯಾರೆಂದು ನೀವೆ ಕಾದು ನೋಡಿ, ಬಿಜೆಪಿ ಸೇರ್ಪಡೆ ಸುಮಲತಾ ಅವರ ವೈಯಕ್ತಿಕ ವಿಚಾರ, ಸುಮಲತಾ ಪಕ್ಷ ಸೇರುತ್ತೇನೆ ಎಂದು ಬಿಜೆಪಿ, ಕಾಂಗ್ರೆಸ್ ಗೆ ಓತ್ತಡ ಹೇರುವ ತಂತ್ರ ಮಾಡ್ತಿದ್ದಾರೆ, ನಮ್ಮದು ರಾಷ್ಟ್ರೀಯ ಪಕ್ಷ ಒತ್ತಡಕ್ಕೆ ಬಗ್ಗುವ ಪ್ರಶ್ನೆಯೇ ಇಲ್ಲಾ, ಸುಮಲತಾ ಮೊದಲು ಪಕ್ಷಕ್ಕೆ ಬರಲಿ ಅನಂತರ ಕ್ಷೇತ್ರ ಯಾವುದು ಅಂತ ನೋಡೋಣ, ಸುಮಲತಾ ಈಗ ಸಂಸದರಿದ್ದಾರೆ, ಈಗ ಅವ್ರ ಬಗ್ಗೆ ಚೆರ್ಚೆ ಯಾಕೆ ? ಸುಮಲತಾ ಪಕ್ಷಕ್ಕೆ ಬರಲು ಯಾವುದೇ ಬೇಡಿಕೆ ಇಟ್ಟಿಲ್ಲ ಇದೆಲ್ಲಾ ಬರಿ ಊಹಾ ಪೋಹ ಅಷ್ಟೇ " ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ದ ಮಂಡ್ಯದ ನಾಗಮಂಗಲದಲ್ಲಿ ಸುದ್ದಿಮಾದ್ಯಮದ ಮುಂದೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ-Cooking cylinder: ಅಡುಗೆ ಸಿಲಿಂಡರ್ ಏರಿ‌ಕೆ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಮತ್ತೊಂದು ಶಾಕ್‌ !

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News