Virat Kohli: ನಿಯಮ ಮುರಿದ ವಿರಾಟ್ ಕೊಹ್ಲಿಗೆ ಬಿಸಿಸಿಐಯಿಂದ ಖಡಕ್ ವಾರ್ನಿಂಗ್!
Yo-Yo Test Score: ಕಿಂಗ್ ಕೊಹ್ಲಿಯ ಈ ನಡೆಯಿಂದ ಗರಂ ಆಗಿರುವ ಬಿಸಿಸಿಐ ತಮ್ಮ ಫಿಟ್ನೇಸ್ ಸ್ಕೋರ್‍ಗಳನ್ನು ಸಾರ್ವಜನಿಕ ಡೊಮೇನ್‍ನಲ್ಲಿ ಹಾಕುವಂತಿಲ್ಲವೆಂದು ಟೀಂ ಇಂಡಿಯಾ ಆಟಗಾರರಿಗೆ ಸೂಚಿಸಿದೆ.
ನವದೆಹಲಿ: ಏಷ್ಯಾಕಪ್ ಟೂರ್ನಿಗಾಗಿ ಬೆಂಗಳೂರಿನ NCAನಲ್ಲಿ ಟೀಂ ಇಂಡಿಯಾದ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಬಹಳ ದಿನಗಳಿಂದ ತಂಡದಿಂದ ಹೊರಗುಳಿರುವ ಆಟಗಾರರನ್ನು ಬಿಸಿಸಿಐ ಯೋ-ಯೋ ಟೆಸ್ಟ್‍ಗೆ ಒಳಪಡಿಸುತ್ತಿದೆ. ಹೀಗಾಗಿ ಗುರುವಾರ (ಆಗಸ್ಟ್ 24) ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹ ಯೋ-ಯೋ ಟೆಸ್ಟ್‍ಗೆ ಒಳಗಾಗಿದ್ದರು.
ಬಳಿಕ ವಿರಾಟ್ ಕೊಹ್ಲಿ ತಮ್ಮ ಯೋ-ಯೋ ಟೆಸ್ಟ್ ಸ್ಕೋರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಫಿಟ್ನೇಸ್ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಕೊಹ್ಲಿಗೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಅಂದರೆ ಬಿಸಿಸಿಐ ಖಡಕ್ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಕ್ರಿಕೆಟ್ ಪಂದ್ಯದ ವೇಳೆ ಆಟಗಾರರು ಏನು ತಿನ್ನುತ್ತಾರೆ? ದೊಡ್ಡ ರಹಸ್ಯ ಬಹಿರಂಗ
ಕಿಂಗ್ ಕೊಹ್ಲಿಯ ಈ ನಡೆಯಿಂದ ಗರಂ ಆಗಿರುವ ಬಿಸಿಸಿಐ ತಮ್ಮ ಫಿಟ್ನೇಸ್ ಸ್ಕೋರ್‍ಗಳನ್ನು ಸಾರ್ವಜನಿಕ ಡೊಮೇನ್‍ನಲ್ಲಿ ಹಾಕುವಂತಿಲ್ಲವೆಂದು ಟೀಂ ಇಂಡಿಯಾ ಆಟಗಾರರಿಗೆ ಸೂಚಿಸಿದೆ. ಯಾವುದೇ ಕಾರಣಕ್ಕೂ ಸ್ಟಾರ್ ಆಟಗಾರರು ತಮ್ಮ ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸಬಾರದು ಎಂದು ಬಿಸಿಸಿಐ ಮೇಲಧಿಕಾರಿಗಳು ತಿಳಿಸಿದ್ದಾರೆ.
Cricketers Meal: ಕ್ರಿಕೆಟ್ ಪಂದ್ಯದ ವೇಳೆ ಕ್ರಿಕೆಟಿಗರ ಆಹಾರ ಪದ್ದತಿ ಹೇಗಿರುತ್ತೆ ಗೊತ್ತಾ?
‘ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಯಾವುದೇ ಗೌಪ್ಯ ವಿಷಯವನ್ನು ಪೋಸ್ಟ್ ಮಾಡಬಾರದು ಎಂದು ತಂಡದ ಆಟಗಾರರಿಗೆ ಮೌಖಿಕವಾಗಿ ತಿಳಿಸಲಾಗಿದೆ. ಅವರು ತರಬೇತಿಯ ಸಮಯದಲ್ಲಿ ಚಿತ್ರಗಳನ್ನು ಪೋಸ್ಟ್ ಮಾಡಬಹುದು, ಆದರೆ ಸ್ಕೋರ್ ಅನ್ನು ಪೋಸ್ಟ್ ಮಾಡುವುದು ಒಪ್ಪಂದದ ಷರತ್ತು ಉಲ್ಲಂಘನೆಗೆ ಕಾರಣವಾಗುತ್ತದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತ ತಂಡದ ಆಡಳಿತವು ಗುರುವಾರದಿಂದ 6 ದಿನಗಳ ಕಂಡೀಷನಿಂಗ್ ಶಿಬಿರವನ್ನು ನಡೆಸುತ್ತಿದೆ. ಮೊದಲ ದಿನ ಆಟಗಾರರು ಫಿಟ್‌ನೆಸ್‌ನ ವಿಷಯದಲ್ಲಿ ಪ್ರತಿಯೊಬ್ಬರು ಎಲ್ಲಿದ್ದಾರೆ ಎಂಬುದನ್ನು ನಿರ್ಣಯಿಸಲು ಯೋ-ಯೋ ಪರೀಕ್ಷೆಗೆ ಒಳಪಡುತ್ತಿದ್ದಾರೆ. ಆದರೆ ಆಟಗಾರರು ತಡೆರಹಿತ ಕ್ರಿಕೆಟ್ ಆಡುತ್ತಿರುವುದರಿಂದ, ಯೋ-ಯೋ ಸ್ಕೋರ್ ಬದಲಾಗಬಹುದು. ಕನಿಷ್ಠ ನಿರ್ಧರಿಸಿದ ಫಿಟ್‌ನೆಸ್ ನಿಯತಾಂಕಗಳಿಗೆ ಬದ್ಧವಾಗಿರುವಂತೆ ತಂಡದ ಆಡಳಿತವು ಆಟಗಾರರನ್ನು ಕೇಳಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.