ನವದೆಹಲಿ: ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಗುರುವಾರ ಮುಕ್ತಾಯವಾದ ಚೆಸ್ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾರತದ ಯುವ ಗ್ರಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಅವರು ರನ್ನರ್‍ಅಪ್‍ಗೆ ತೃಪ್ತಿಪಟ್ಟುಕೊಂಡಿದ್ದಾರೆ.
ಮೊದಲ 2 ಕ್ಲಾಸಿಕಲ್ ಗೇಮ್‌ಗಳು ಡ್ರಾನಲ್ಲಿ ಅಂತ್ಯಗೊಂಡ ಹಿನ್ನೆಲೆ ಫಲಿತಾಂಶ ನಿರ್ಧರಿಸಲು ಇಂದು ಟೈ-ಬ್ರೇಕರ್ ಪಂದ್ಯ ನಡೆಸಲಾಯಿತು. ಭಾರತದ ಪ್ರಜ್ಞಾನಂದ ಅವರು ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ವಿಶ್ವಕಪ್ ಗೆಲ್ಲುವ ಭರವಸೆ ಮೂಡಿಸಿದ್ದರು.
ಇದನ್ನೂ ಓದಿ: ಇಂಥಾ ಡಕೋಟಾ ಸ್ಥಿತಿಗೆ ತಲುಪಿದ ಫೆರಾರಿ ಕಾರ್ ಎಷ್ಟು ಬೆಲೆಗೆ ಮಾರಾಟವಾಗಿದೆ ಒಮ್ಮೆ ಗೆಸ್ ಮಾಡಿ ನೋಡೋಣ!
Congratulations on an incredible tournament, @rpragchess!
Keep chasing your dreams and making India proud. ♟️🇮🇳 #FIDEWorldCup— Sachin Tendulkar (@sachin_rt) August 24, 2023
ಮೊದಲ ಟೈ-ಬ್ರೇಕರ್‌ನಲ್ಲಿ ಜಯ ಸಾಧಿಸಿದ್ದ ರ್ಯಾಪಿಡ್ ಹಾಗೂ ಬ್ಲಿಟ್ಸ್ ಮಾದರಿಯ ಹಾಲಿ ವಿಶ್ವ ಚಾಂಪಿಯನ್ ಕಾರ್ಲ್‌ಸನ್ 1-0 ಮುನ್ನಡೆ ಸಾಧಿಸಿದ್ದರು. ಪ್ರಜ್ಞಾನಂದ ಅವರು 47 ನಡೆಗಳಲ್ಲಿ ಮೊದಲ ಟೈ-ಬ್ರೇಕರ್‌ನಲ್ಲಿ ಸೋಲು ಕಂಡರು. ಮೊದಲ ಟೈಬ್ರೇಕರ್‌ನಲ್ಲಿ ತೀವ್ರ ಪೈಪೋಟಿ ಕಂಡುಬಂದಿದ್ದು, ಅಂತಿಮವಾಗಿ ಕಾರ್ಲ್‌ಸನ್ ಮೇಲುಗೈ ಸಾಧಿಸಿದರು.
Triumph is not limited to the final result. For me, you are a true CHAMPION!
Congratulations @rpragchess for being in top form throughout the #FIDEWorldCupFinal. More power to you, Grandmaster R Praggnanandhaa! 🤗
— Hrithik Roshan (@iHrithik) August 24, 2023
2ನೇ ಟೈ-ಬ್ರೇಕರ್‌ನಲ್ಲಿ 18ರ ಹರೆಯದ ಪ್ರಜ್ಞಾನಂದ ವಿರುದ್ಧ ಡ್ರಾ ಮಾಡಿಕೊಂಡ ನಂತರ ಕಾರ್ಲ್‌ಸನ್ 1.5 ಅಂತರದಿಂದ ಪಂದ್ಯವನ್ನು ಜಯಿಸಿದರು. ಈ ಮೂಲಕ ಮತ್ತೊಮ್ಮೆ ವಿಶ್ವಕಪ್ ಕಾರ್ಲ್‍ಸನ್ ಮೂಡಿಗೇರಿತು. ಸೋತರೂ ಸಹ ಪ್ರಜ್ಞಾನಂದ ಇಡೀ ಪ್ರಪಂಚದ ಮನ ಗೆದಿದ್ದಾರೆ. ಗ್ರ್ಯಾಂಡ್‌ಮಾಸ್ಟರ್ ಆರ್‌ಬಿ ರಮೇಶ್ 10 ವರ್ಷಗಳಿಂದ ಪ್ರಗ್ನಾನಂದ ಅವರ ಕೋಚ್ ಆಗಿದ್ದು, ಚೆನ್ನೈನಿಂದ ಈ ಪಂದ್ಯಾವಳಿಗೆ ಮಾರ್ಗದರ್ಶನ ನೀಡುತ್ತಿದ್ದರು.
ಇದನ್ನೂ ಓದಿ: ಚಂದ್ರಯಾನ 3 ಬಗ್ಗೆ ಚೀನಾ ಮಾಧ್ಯಮಗಳು ಹೇಳಿದ್ದೇನು ನೋಡಿ?
In the end, it's Magnus! His persistence is rewarded with a victory in the only tournament that eluded him so far! Congratulations to the #FIDEWorldCup2023 winner Magnus Carlsen!
— Viswanathan Anand (@vishy64theking) August 24, 2023
ಹಾಲಿ ಚಾಂಪಿಯನ್ ಹಾಗೂ ದಿಗ್ಗಜ ಆಟಗಾರರೊಂದಿಗೆ ತೀವ್ರ ಪೈಪೋಟಿ ನೀಡಿದ 18ರ ಹರೆಯದ ಪ್ರಜ್ಞಾನಂದ ತಮ್ಮ ಉತ್ತಮ ಆಟದ ಕೌಶಲ್ಯದಿಂದ ಇಡೀ ಪ್ರಪಂಚದ ಮನ ಗೆದ್ದಿದ್ದಾರೆ. ಪ್ರಜ್ಞಾನಂದರ ಈ ಸಾಧನೆಗೆ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಬಾಲಿವುಡ್ ನಟ ಹೃತಿಕ್ ರೋಷನ್ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ. ಇನ್ನು ವಿಶ್ವಕಪ್ ಚಾಂಪಿಯನ್ ಆದ ಮ್ಯಾಗ್ನಸ್ ಕಾರ್ಲ್‌ಸನ್ ಅಂದಾಜು 90.93 ಲಕ್ಷ ರೂ. ನಗದು ಬಹುಮಾನ ಗೆದ್ದರೆ, ರನ್ನರ್‍ಅಪ್ ಆಗಿರುವ ಪ್ರಜ್ಞಾನಂದ ಅಂದಾಜು 66.13 ಲಕ್ಷ ರೂ. ಬಹುಮಾನ ಗೆದ್ದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.