ಬೆಂಗಳೂರು : ಬೆಂಗಳೂರಿನ ಪ್ರತಿಷ್ಠಿತ ಪಬ್ ನಲ್ಲಿ ಗಲಾಟೆ ನಡೆದಿದ್ದು, ರಿಯಾಲಿಟಿ ಶೋ ಖ್ಯಾತಿಯ ಸುನಾಮಿ ಕಿಟ್ಟಿ ಮತ್ತು ಅವರ ಸ್ನೇಹಿತ ಚೇತನ್ ಗೌಡ ರಿಂದ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ. ನಗರದ ಮಿರಾಜ್ ಪಬ್ ಗೆ ಸುನಾಮಿ ಕಿಟ್ಟಿ ಮತ್ತು ಸ್ನೇಹಿತರು ಹೋಗಿದ್ದರು. ಈ ವೇಳೆ ಗಲಾಟೆ ನಡೆದಿದೆ. ಈ ಘಟನೆ ಜುಲೈ 24 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುನಾಮಿ ಕಿಟ್ಟಿ ಮತ್ತು ಸ್ನೇಹಿತರು ಪಬ್‌ನಲ್ಲಿ ಕುಡಿದ ಅಮಲಿನಲ್ಲಿ ಗಲಾಟೆ ಮಾಡಿದ್ದಾಗಿ ಆರೋಪಿಸಲಾಗಿದೆ. ಈ ಹಿನ್ನೆಲೆ ಸುನಾಮಿ ಕಿಟ್ಟಿ ವಿರುದ್ಧ ದೂರು ದಾಖಲಾಗಿತ್ತು. ಪ್ರಶಾಂತ್ ಎಂಬುವವರು ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ನೀಡಿದ್ದರು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: BBK OTT: ಬಿಗ್​ಬಾಸ್​ ​ಮನೆಯೊಳಗೆ ಜಶ್ವಂತ್ - ನಂದು.. ಮಾಡ್ತಾರಾ ಮೋಡಿ ರೋಡೀಸ್​ ಜೋಡಿ?


ಸ್ನೇಹಿತರ ಜೊತೆ ಪಬ್ ಗೆ ಹೋಗಿದ್ದಾಗ ಶ್ಯಾಂಪೇನ್ ಬಾಟೆಲ್ ಓಪನ್‌ ಮಾಡಿದ ಸುನಾಮಿ ಕಿಟ್ಟಿ ಮತ್ತು ತಂಡ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಶ್ಯಾಂಪೇನ್ ಬಾಟಲ್‌ ಓಪನ್ ಮಾಡಿದ್ದಾರೆ. ಆಗ ಪಕ್ಕದಲ್ಲಿದ್ದವರ ಮೇಲೆ ಶಾಂಪೇನ್ ಚೆಲ್ಲಿದೆ. ಈ ಬಗ್ಗೆ ಅವರು ಕೇಳಿದಾಗ ಗಲಾಟೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.‌ ಈ ಬಗ್ಗೆ ಪ್ರಶ್ನಿಸಲು ಹೋದ ಪ್ರಶಾಂತ್ ಹಾಗೂ ಕೃಷ್ಣ ಎಂಬುವವರಿಗೆ ಸುನಾಮಿ ಕಿಟ್ಟಿ ಮಮತ್ತು ಸ್ನೇಹಿತರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.


ಪ್ರಶಾಂತ್ ಎಂಬುವವರು ನೀಡಿದ ದೂರಿನನ್ವಯ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸುನಾಮಿ ಕಿಟ್ಟಿ ಗೆಳೆಯ ಚೇತನ್ ಎಂಬುವವರು ಸಹ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ನಮ್ಮ ಜೊತೆಗೆ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.


ಇದನ್ನೂ ಓದಿ: Bigg Boss OTT: ಈ ಬಾರಿ ಬಿಗ್ ಬಾಸ್ ವಿನ್ನರ್‌ ಯಾರು? ಮೊದಲ ದಿನವೇ ಆರ್ಯವರ್ಧನ್​ ಗುರೂಜಿ ಭವಿಷ್ಯ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.