ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಯ ಆರ್ಭಟದಿಂದ ದೊಡ್ಡ ಅವಾಂತರವೇ ಸೃಷ್ಟಿಯಾಗಿತ್ತು. ಕೆ.ಆರ್.ಪುರಂನಲ್ಲಿ ಭಾರೀ ಮಳೆಗೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ 34 ಗಂಟೆಗಳ ಬಳಿಕ ಪತ್ತೆಯಾಗಿದೆ.


COMMERCIAL BREAK
SCROLL TO CONTINUE READING

ಶುಕ್ರವಾರ ರಾತ್ರಿ ಎಡಬಿಡದೆ ಸುರಿದ ಮಳೆ ನೀರಿಗೆ ಕೆ.ಆರ್.ಪುರಂನಲ್ಲಿ ಬೈಕು ಕೊಚ್ಚಿಕೊಂಡು ಹೋಗುತ್ತಿತ್ತು. ಈ ವೇಳೆ ಬೈಕ್‍ನ್ನು ಹಿಡಿಯಲು ಹೋಗಿದ್ದ ಶಿವಮೊಗ್ಗ ಮೂಲದ ಟೆಕ್ಕಿ ಮಿಥುನ್ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದರು. ಹೀಗಾಗಿ ಘಟನಾ ಸ್ಥಳದಿಂದ ಕೆ.ಆರ್.ಪುರದ ಸೀಗೆಹಳ್ಳಿ ಕೆರೆವರೆಗೂ SDRF ಸಿಬ್ಬಂದಿ ಶೋಧಕಾರ್ಯ ನಡೆಸಿದ್ದರು. ಸುಮಾರು 2 ಕಿ.ಮೀ ವರೆಗೂ ರಾಜಕಾಲುವೆಯಲ್ಲಿ ಶೋಧಕಾರ್ಯ ನಡೆಸಿದ್ದರೂ, ಮಿಥುನ್ ದೇಹ ಪತ್ತೆಯಾಗಿರಲಿಲ್ಲ.


ಬೆಳಗಾವಿಯಲ್ಲಿ ಹಿಂಸಾಚಾರ: ಓರ್ವನ ಕೊಲೆ, ಹತ್ತಾರು ವಾಹನಗಳಿಗೆ ಬೆಂಕಿ


ಇಂದು SDRF ಸಿಬ್ಬಂದಿ ಮತ್ತೆ ಶೋಧಕಾರ್ಯವನ್ನು ಮುಂದುವರೆಸಿದ್ದರು. ಮನೆಯಿಂದ ಕೇವಲ 500 ಮೀ. ಅಂತರದಲ್ಲಿ ಅಂದರೆ ಕೇಂಬ್ರಿಡಜ್ಡ್ ಕಾಲೇಜು ಪಕ್ಕದ ರಾಜಕಾಲುವೆಯಲ್ಲಿ ಮಿಥುನ್ ಮೃತದೇಹವನ್ನು ಪತ್ತೆಹೆಚ್ಚಿ ಹೊರತೆಗೆಯಲಾಗಿದೆ. ಮನೆ ನೀರಿನ ಪ್ರಮಾಣ ಕಡಿಮೆಯಾದ ಬಳಿಕ ಟೆಕ್ಕಿ ಮೃತದೇಹ ಪತ್ತೆಯಾಗಿದೆ. ಮಿಥುನ್ ಮೃತದೇಹವನ್ನು ಹೊರ ತೆಗೆಯುತ್ತಿದ್ದ ಹಾಗೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಿಥುನ್ ಮೃತದೇವನ್ನು ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಮಧ್ಯಾಹ್ನ 1 ಗಂಟೆಯೊಳಗೆ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.


ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮಿಥುನ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ಮು‍ಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.


ಇದನ್ನೂ ಓದಿ: Bengaluru Traffic Police : ರಸ್ತೆ ಗುಂಡಿ ಇದ್ರೂ BBMP ಡೋಂಟ್ ಕೇರ್: ರಸ್ತೆ ಗುಂಡಿ ಮುಚ್ಚಿದ್ರು ಟ್ರಾಫಿಕ್ ಪೊಲೀಸ್!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.