ಬೆಂಗಳೂರು: ಹೈಕೋರ್ಟ್ ಬಿಬಿಎಂಪಿಗೆ ರಸ್ತೆ ಗುಂಡಿ ಮುಚ್ಚಿ ಅಂತ ಆಗಾಗ ಚಾಟಿ ಬೀಸ್ತಿದ್ರು ಎಮ್ಮೆ ಚರ್ಮದ ಬಿಬಿಎಂಪಿ ಮಾತ್ರ ಇದ್ರ ಬಗ್ಗೆ ತಲೆ ಕೆಡಿಸಿಕೊಳ್ತಿಲ್ಲ. ನಿತ್ಯ ರಸ್ತೆ ಗುಂಡಿಗೆ ಅದೆಷ್ಟೋ ವಾಹನ ಸವಾರರು ಬಿದ್ದು ಪ್ರಾಣ ಕಳೆದುಕೊಂಡ್ರೆ, ಇನ್ನೂ ಕೆಲವರು ಕೈಕಾಲು ಮುರಿದುಕೊಳ್ತಿದ್ದಾರೆ.
ಹೀಗೆ ಜನ ರಸ್ತೆ ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಳ್ಳದ ಕಣ್ಣಾರೆ ಕಂಡಿದ್ದ ಬ್ಯಾಟರಾಯನಪುರ ಸಂಚಾರ ಪೇದೆ ಸದ್ದಾಂ ಗುಂಡಿ ಮುಚ್ಚುವಂತೆ ಹಿರಿಯ ಅಧಿಕಾರಿಗಳ ಮೂಲಕ ಸಾಕಷ್ಟು ಬಾರಿ ಬಿಬಿಎಂಪಿ ಗಮನಕ್ಕೆ ತಂದಿದ್ರು. ಆದ್ರೂ ಬಿಬಿಎಂಪಿ ಮಾತ್ರ ಇದ್ರ ಬಗ್ಗೆ ತಲೆಕೆಡಿಕೊಂಡಿಸಿರ್ಲಿಲ್ಲ.
ಇದನ್ನೂ ಓದಿ : Belagavi Band : ಅಗ್ನಿಪಥ್ ಯೋಜನೆ ವಿರೋಧ : ಜೂ.20ರಂದು ಬೆಳಗಾವಿ ಬಂದ್‌ಗೆ ಕರೆ!
ಇದ್ರಿಂದ ಬೇಸತ್ತ ಸಂಚಾರ ಪೇದೆ ಇಂದು ಮೈಸೂರು ರಸ್ತೆಯ ಸ್ಯಾಟ್ ಲೈಟ್ ಬಳಿ ಗುಂಡಿ ಬಿದ್ದ ರಸ್ತೆಗೆ ತಾವೇ ಸಿಮೆಂಟ್ ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚಿದ್ದಾರೆ. ಕಟ್ಟಡ ನಿರ್ಮಾಣದಲ್ಲಿ ಉಳಿದ ಸಿಮೆಂಟ್ ಪಡೆದು ಗುಂಡಿ ಮುಚ್ಚುವ ಕೆಲಸಕ್ಕೆ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಿತ್ಯ ಟ್ರಾಫಿಕ್ ಪೊಲೀಸರು ಸುಖಾಸುಮ್ಮನೆ ಗಾಡಿ ತಡೆದು ಫೈನ್ ಹಾಕ್ತಾರೆ ಅಂತ ಮೂದಲಿಸುತ್ತಿದ್ದ ಜನ ಸದ್ದಾಂ ಕೆಲಸಕ್ಕೆ ಬೇಷ್ ಅಂತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.