Udupi News: ಉಡುಪಿಯ ನೇತ್ರ ಜ್ಯೋತಿ ಕಾಲೇಜು ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ವಿವಾದ ಸದ್ಯ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ವಿಡಿಯೋ ವಿವಾದ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದಂತೆ, ವಿದ್ಯಾರ್ಥಿನಿಯರು ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ಇನ್ನೊಂದೆಡೆ, ರಾಷ್ಟ್ರೀಯ ಮಹಿಳಾ ಆಯೋಗದ ತಂಡ ಉಡುಪಿ ಬಂದು ತನಿಖೆ ನಡೆಸುವುದಾಗಿ ಹೇಳಿದೆ ಈ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ....


COMMERCIAL BREAK
SCROLL TO CONTINUE READING

ಉಡುಪಿಯ ಪ್ಯಾರಾಮೆಡಿಕಲ್ ನೇತ್ರ ಕಾಲೇಜಿನ ಶೌಚಾಲಯದಲ್ಲಿ ನಡೆದ ವಿಡಿಯೋ ಚಿತ್ರೀಕರಣ ರಾಜ್ಯ ಮತ್ತು ರಾಷ್ಟ್ರಮಟ್ಟದ ಚರ್ಚೆಯ ವಿಚಾರವಾಗಿದೆ. ಸಾಮಾಜಿಕ ಕಾರ್ಯಕರ್ತೆ ರಶ್ಮೀ ಸಾವಂತ್  ಟ್ವೀಟ್ ಮಾಡಿ, ಯಾಕೆ ಯಾರು ಈ ವಿಚಾರದಲ್ಲಿ ಮಾತನಾಡುತ್ತಿಲ್ಲ ಎಂಬ ಪ್ರಶ್ನೆ ಎತ್ತಿದ ನಂತರ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ. ಇದೀಗ ವಿವಾದ ಕಾವು ಮತ್ತಷ್ಟು ತೀವ್ರವಾಗಿದ್ದು ಘಟನೆ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದಂತೆ, ಉಡುಪಿ ಮಲ್ಪೆ ಠಾಣೆಯಲ್ಲಿ ಆಡಳಿತ ಮಂಡಳಿ ಹಾಗೂ ಮೂವರು ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ- Crime News: ಕದ್ದ ಜೆಸಿಬಿ ಬಳಸಿ ಎಟಿಎಂ ದರೋಡೆಗೆ ಯತ್ನ


ಮಹಿಳೆಯನ್ನು ಅವಮಾನಿಸುವ ಉದ್ದೇಶದಿಂದ ಮಾಡಿರುವ ಕೃತ್ಯ ಎಂದು ಸೆಕ್ಷನ್ 509ರ ಅಡಿಯಲ್ಲಿ, ಅರಿವಿಗೆ ಬಾರದಂತೆ ವಿಡಿಯೋ ಮಾಡುವ ಕೃತ್ಯ ದಾಖಲೆ ನಾಶ ವಿಚಾರ, ಸಾಕ್ಷ್ಯ ನಾಶಕ್ಕಾಗಿ ಸೆಕ್ಷನ್-  204ರ ಅಡಿಯಲ್ಲಿ,  ಉದ್ದೇಶ ಪೂರ್ವಕವಾಗಿ ಸೂಕ್ತ ದಾಖಲೆ ನೀಡದಿರುವುದು ಎಂಬ ಕಾರಣಕಾಕರಿ ಸೆಕ್ಷನ್ 175ರ ಅಡಿಯಲ್ಲಿ ಹಾಗೂ ಸೆಕ್ಷನ್ 34ರ ಪ್ರಕಾರ ಸಾಮೂಹಿಕವಾಗಿ ಮಾಡಿರುವ ಕೃತ್ಯ  ಪ್ರಕರಣ ದಾಖಲಾಗಿದೆ.


ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ಜಿಹಾದಿ ಬ್ರದರ್ಸ್ ರಕ್ಷಣೆಗಾಗಿ ಸರಕಾರ ನಿಂತಿದೆ. ಪ್ರಕರಣ ಸತ್ಯಾಂಶ ಹೊರ ಬಂದ್ರೆ ಸಿಎಂ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೀರಾ ಅಂತ ಸವಾಲು ಹಾಕಿದ್ದಾರೆ.‌ 


ರಾಷ್ಟ್ರೀಯ ಮಹಿಳಾ ಆಯೋಗ ಉಡುಪಿಗೆ ಬಂದು ತನಿಖೆ ನಡೆಸಲಿದೆ. ಪೊಲೀಸರು ಮತ್ತು ಸಂತ್ರಸ್ತ ಕುಟುಂಬದ ಜೊತೆ ಮಾಹಿತಿ ಪಡೆಯಲಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕೂಲಂಕುಶ ತನಿಖೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.


ಇದನ್ನೂ ಓದಿ- ಚಿನ್ನಾಭರಣ ದೋಚಿ ನಿಂಬೆಹಣ್ಣು ಇಟ್ಟು ಜ್ಯೋತಿಷಿ ಎಸ್ಕೇಪ್


ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬಹು ಚರ್ಚಿತ ಪ್ರಕರಣ ಇದಾಗಿದೆ. ಘಟನೆ ವಿರುದ್ಧ ಬಿಜೆಪಿ ಶುಕ್ರವಾರ ಉಡುಪಿಯಲ್ಲಿ ಪ್ರತಿಭಟನೆ ಮಾಡಲಿದೆ. ಎಫ್ ಐ ಆರ್ ದಾಖಲಾಗಿದ್ದು ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ ಗೆ ಪ್ರಕರಣವನ್ನು ಹಸ್ತಾಂತರ ಮಾಡಬೇಕು ಎಂಬ  ಒತ್ತಾಯ ಕೇಳಿಬಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.