Crime News: ಕದ್ದ ಜೆಸಿಬಿ ಬಳಸಿ ಎಟಿಎಂ ದರೋಡೆಗೆ ಯತ್ನ

Shivamogga Crime News: ಜೆಸಿಬಿ ಬಳಸಿ ಎಟಿಎಂ ದೋಚಲು ಯತ್ನಿಸಿದ ಘಟನೆ ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದಿದೆ.   

Written by - Chetana Devarmani | Last Updated : Jul 26, 2023, 02:32 PM IST
  • ಜೆಸಿಬಿಯನ್ನು ಕಳ್ಳತನ ಮಾಡಿದ ಕಳ್ಳ
  • ಕದ್ದ ಜೆಸಿಬಿ ಬಳಸಿ ಎಟಿಎಂ ದರೋಡೆಗೆ ಯತ್ನ
  • ಶಿವಮೊಗ್ಗದಲ್ಲಿ ನಡೆದ ಘಟನೆ
Crime News: ಕದ್ದ ಜೆಸಿಬಿ ಬಳಸಿ ಎಟಿಎಂ ದರೋಡೆಗೆ ಯತ್ನ  title=

ಶಿವಮೊಗ್ಗ : ಜೆಸಿಬಿ ಬಳಸಿ ಎಟಿಎಂ ದೋಚಲು ಯತ್ನಿಸಿದ ಘಟನೆ ನಡೆದಿದೆ. ಆಕ್ಸಿಸ್​ ಬ್ಯಾಂಕ್ ಎಟಿಎಂವೊಂದರಲ್ಲಿ ನಿನ್ನೆ ರಾತ್ರಿ  ಜೆಸಿಬಿಯನ್ನು ಬಳಸಿ ಎಟಿಎಂ ದರೋಡೆಗೆ ಯತ್ನಿಸಲಾಗಿದೆ. ಜೆಸಿಬಿಯನ್ನು ಕಳ್ಳತನ ಮಾಡಿ, ಈ ಕದ್ದ ಜೆಸಿಬಿಯಲ್ಲಿ ಎಟಿಎಂ ದರೋಡೆ ಮಾಡಲು ಯತ್ನಿಸಿದ್ದಾರೆ. ರಾತ್ರಿ ಹೊತ್ತು ಈ ಘಟನೆ ನಡೆದಿದ್ದು, ಬೀಟ್ ಪೊಲೀಸರು ಸ್ಥಳಕ್ಕೆ ಬಂದಿದ್ದರಿಂದ ದರೋಡೆ ಪ್ಲ್ಯಾನ್‌ ಸಕ್ಸಸ್‌ ಆಗಿಲ್ಲ. 

ಇದನ್ನೂ ಓದಿ: ನಸ್ರುಲ್ಲಾ ಜೊತೆ ನಿಖಾ ಆದ ಭಾರತದ ವಿವಾಹಿತೆ ಅಂಜು..!

ಜೆಸಿಬಿ ಬಳಸಿ ಎಟಿಎಂ ಓಪನ್ ಮಾಡುತ್ತಿರುವುದನ್ನ ಗಮನಿಸಿದ ಬೀಟ್ ಪೊಲೀಸರು ಆತನನ್ನು ಹಿಡಿಯಲು ಹೋಗಿದ್ದಾರೆ. ಆದರೆ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಶಿವಮೊಗ್ಗದ ವಿನೋಬನಗರದ ಶಿವಾಲಯದ ಬಳಿಯಲ್ಲಿರುವ ಆಕ್ಸಿಸ್ ಬ್ಯಾಂಕ್‌ಗೆ ಸೇರಿರುವ ಎಟಿಎಂ ನಲ್ಲಿ ಈ ದರೋಡೆ ಯತ್ನ ನಡೆದಿದೆ. ಸಮೀಪದಲ್ಲಿಯೇ ಇರುವ ಪೆಟ್ರೋಲ್ ಬಂಕ್​ ಬಳಿ ನಿಲ್ಲಿಸಿದ್ದ JCB ಯನ್ನ ಮೊದಲು ಕದ್ದಿದ್ದಾನೆ. ನಂತರ ಇದೇ ಜೆಸಿಬಿಯನ್ನು ಚಲಾಯಿಸಿಕೊಂಡು ಬಂದು ಎಟಿಎಂ ದರೋಡೆಗೆ ಪ್ರಯತ್ನಿಸಿದ್ದಾನೆ. ಅಷ್ಟರಲ್ಲಿ ಪೊಲೀಸರು ಅಲ್ಲಿಗೆ ಬಂದಿದ್ದರಿಂದ ಕಳ್ಳ ವಿಫಲನಾಗಿದ್ದಾನೆ. 

ವಿನೋಬನಗರ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೆಸಿಬಿಯನ್ನು ವಶಕ್ಕೆ ಪಡೆದು, ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಇದನ್ನೂ ಓದಿ:ಮಳೆ‌ ಅಬ್ಬರಕ್ಕೆ ಮನೆ ಗೋಡೆ ಕುಸಿದು ಪ್ರಾಣ ಬಿಟ್ಟ ವೃದ್ಧೆ, ಮತ್ತೊಂದು ಪ್ರಕರಣದಲ್ಲಿ ತಾಯಿ-ಮಗು ಗ್ರೇಟ್ ಎಸ್ಕೇಪ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News