ಬೆಂಗಳೂರು: ಆಸ್ತಿ ಬೇಕೆಂದು ಪೀಡಿಸುತ್ತಿದ್ದ ಸೊಸೆ ಕೊನೆಗೆ ತನ್ನ ಅತ್ತೆಯನ್ನೇ ಕೊಂದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಕೊಂದ ಮಹಿಳೆಯನ್ನು ಶ್ರೀರಾಮಪುರ ಪೊಲೀಸರು ಬಂಧಿಸಿದ್ದಾರೆ. ಸುಗುಣಾ ಬಂಧಿತ ಆರೋಪಿಯಾಗಿದ್ದು, ರಾಣಿಯಮ್ಮ (76) ಕೊಲೆಯಾದ ವೃದ್ಧೆ.


COMMERCIAL BREAK
SCROLL TO CONTINUE READING

ಮೃತ ವೃದ್ಧೆಯ ಕುಟುಂಬದವರು ಶ್ರೀರಾಂಪುರದ 7ನೇ ಮುಖ್ಯರಸ್ತೆಯಲ್ಲಿ ವಾಸಿಸುತ್ತಿದ್ದರು. ವೃದ್ಧೆಯ ಗಂಡ ಸಹ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ವೃದ್ಧೆ ತನ್ನ 3 ಜನ ಗಂಡುಮಕ್ಕಳಿಗೆ ಸಮಾನವಾಗಿ ಒಂದೊಂದು ಮನೆ ನೀಡಿದ್ದರು. ನಂತರ ಯಾರ ಸಹವಾಸವೂ ಬೇಡ ಅಂತಾ ತಾನೇ ಒಂದು ಮನೆಯಲ್ಲಿ ವಾಸವಿದ್ದರು. ಸ್ವತಃ ಊಟ-ಬಟ್ಟೆ ಎಲ್ಲವನ್ನೂ ನೋಡಿಕೊಂಡು ಯಾರ ಸಹವಾಸಕ್ಕೂ ಹೋಗದೇ ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಕಷ್ಟದ ಬದುಕು ಕಟ್ಟಿಕೊಂಡಿದ್ದಳು.


ಇದನ್ನೂ ಓದಿ: ಚರ್ಮಗಂಟು ರೋಗ ನಿರ್ವಹಣೆಗೆ 13 ಕೋಟಿ ಬಿಡುಗಡೆಗೆ ಸಿಎಂ ಬೊಮ್ಮಾಯಿ ಆದೇಶ


ಆದರೆ ಆಕೆ ಇದ್ದ ಸಣ್ಣದೊಂದು ಕೋಣೆಯ ಮೇಲೂ 2ನೇ ಸೊಸೆ ಸುಗುಣಾಳ ಕಣ್ಣು ಬಿದ್ದಿತ್ತು. ಅಷ್ಟಕ್ಕೂ ಈ ಸುಗುಣಾ ದೂರದವಳಲ್ಲ. ಸ್ವತಃ ರಾಣಿಯಮ್ಮನ ತಮ್ಮನ ಮಗಳು. ನಮ್ಮವಳೇ ಅಂತಾ ತನ್ನ 2ನೇ ಮಗನಿಗೆ ಮದುವೆ ಮಾಡಿಸಿದ್ದರು. ಸದ್ಯ ಸುಗುಣಾಳೇ ವೃದ್ಧೆಯ ಜೀವ ತೆಗೆದಿದ್ದಾಳೆ.


ಅಷ್ಟಕ್ಕೂ ಆಗಿದ್ದೇನಂದರೆ ಶ್ರೀರಾಂಪುರ 7ನೇ ಮುಖ್ಯರಸ್ತೆಯಲ್ಲಿರುವ  ಮನೆಯ ಕೆಳ ಮಹಡಿಯ ಚಿಕ್ಕ ಕೋಣೆಯಲ್ಲಿ ರಾಣಿಯಮ್ಮ ವಾಸವಿದ್ದಳು. ಮೊದಲ ಮಹಡಿಯಲ್ಲಿ 2ನೇ ಮಗ ಹಾಗೂ ಸೊಸೆ ಸುಗುಣಾ ವಾಸವಿದ್ದರು. 2ನೇ ಮಗನಂತೂ ಕುಡಿತದ ದಾಸನಾಗಿ ಪರಿವೇ ಇಲ್ಲದಂತೆ ತಿರುಗಾಡ್ತಿದ್ದ.ಇನ್ನೂ ಇಡೀ ಮನೆ ವೃದ್ಧೆಯ ಹೆಸರಲ್ಲೇ ಇತ್ತು. ಹೀಗಾಗಿ ಆ ಮನೆಯನ್ನು ತಮ್ಮ ಹೆಸರಿಗೆ ಮಾಡಿಕೊಡುವಂತೆ ಸುಗುಣಾ ಸದಾ ಪೀಡಿಸುತ್ತಿದ್ದಳಂತೆ. ಅದರಂತೆ ಅ.12ರ ರಾತ್ರಿ ಕೂಡ ಕೇಳಿದ್ದಾಳೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಕೋಪಗೊಂಡ ಸುಗುಣಾ ಏನು ಮಾಡಲು ಸಾಧ್ಯವಾಗದ ವೃದ್ಧೆ ಮೇಲೆ ಪ್ರತಾಪ ತೋರಿದ್ದಾಳೆ.


ಇದನ್ನೂ ಓದಿ: ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ಮೋದಿ ರಾಮನಾಮ ಜಪಿಸುವಂತೆ ಮಾಡಿದ್ದಾರೆ: ಬಿಜೆಪಿ


ಕೈಗೆ ಸಿಕ್ಕ ಸಿಕ್ಕ ವಸ್ತುಗಳಿಂದ ಸುಗುಣಾ ವೃದ್ಧೆಯ ಮೇಲೆ ಹಲ್ಲೆ ನಡೆಸಿದ್ದಾಳೆ.  ಜಗಳದ ವೇಳೆ ರಾಣಿಯಮ್ಮನನ್ನು ಸುಗುಣಾ ತಳ್ಳಿದಾಗ ಕೆಳಗೆ ಬಿದ್ದು ಕತ್ತು ಮುರಿದು ಸಾವನ್ನಪ್ಪಿದ್ದಾಳೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಶ್ರೀರಾಂಪುರ ಠಾಣೆ ಪೊಲೀಸರು ಆರೋಪಿ ಸುಗುಣಾಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.