ನವದೆಹಲಿ: ಆನ್‌ಲೈನ್‌ ಜೂಜಾಟದಲ್ಲಿ ನಾಗ್ಪುರ ಮೂಲದ ಉದ್ಯಮಿಯೊಬ್ಬರು ಬರೋಬ್ಬರಿ 58 ಕೋಟಿ ರೂ. ಕಳೆದುಕೊಂಡಿರುವ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಪ್ರಕರಣ ಸಂಬಂಧ ಶಂಕಿತ ಬುಕ್ಕಿ ಅನಂತ್‌ ಅಲಿಯಾಸ್‌ ಸಂತು ನವರತ್ನ ಜೈನ್‌ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು 14 ಕೋಟಿ ರೂ. ನಗದು, 4 ಕೆಜಿ ಚಿನ್ನದ ಬಿಸ್ಕತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ: Ashish Sakharkar: 4 ಬಾರಿ ಮಿಸ್ಟರ್ ಇಂಡಿಯಾ ಬಾಡಿ ಬಿಲ್ಡಿಂಗ್ ಚಾಂಪಿಯನ್ ಆಶಿಶ್ ಸಖರ್ಕರ್ ವಿಧಿವಶ


ನಾಗ್ಪುರದಿಂದ 160 ಕಿಮೀ ದೂರದಲ್ಲಿರುವ ಗೊಂಡಿಯಾದಲ್ಲಿನ ನಿವಾಸದ ಮೇಲೆ ದಾಳಿ ನಡೆಸುವ ಮುನ್ನವೇ ಆರೋಪಿ ಪರಾರಿಯಾಗಿದ್ದು, ಆತ ದುಬೈಗೆ ಪರಾರಿಯಾಗಿದ್ದಾನೆಂದು ಪೊಲೀಸರು ಶಂಕಿಸಿದ್ದಾರೆ.


ಆನ್‌ಲೈನ್‌ ಜೂಜಿನಲ್ಲಿ ಭಾರೀ ಹಣ ಗಳಿಸುವ ಬಗ್ಗೆ ಉದ್ಯಮಿಗೆ ಆರೋಪಿ ಅನಂತ್‌ ಆಮಿಷವೊಡ್ಡಿದ್ದ. ಆರಂಭದಲ್ಲಿ ಜೂಜಾಡಲು ನಿರಾಕರಿಸಿದ್ದ ಉದ್ಯಮಿ ನಂತರ ಹವಾಲ ಮೂಲಕ ಆರೋಪಿಗೆ 8 ಲಕ್ಷ ರೂ. ರವಾನಿಸಿದ್ದರು. ಹಣ ಪಡೆದ ಬಳಿಕ ಉದ್ಯಮಿಯ ವಾಟ್ಸ್ ಆಪ್ ಲಿಂಕ್‌ ಕಳಿಸಿ ಜೂಜಿನ ಖಾತೆ ತೆರೆಯುವಂತೆ ತಿಳಿಸಿದ್ದ. ಅದರಂತೆ ಖಾತೆ ತೆರೆದಾಗ ಅದರಲ್ಲಿ 8 ಲಕ್ಷ  ರೂ. ಜಮೆಯಾಗಿದ್ದನ್ನು ಉದ್ಯಮಿ ಖುಷಿಯಾಗಿದ್ದರು. ಬಳಿಕ ಜೂಜು ಆಡಲು ಆರಂಭಿಸಿದ್ದರು. ಬಳಿಕ ಹಂತ ಹಂತವಾಗಿ 58 ಕೋಟಿ ರೂ. ನಷ್ಟ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: ಮಣಿಪುರದಲ್ಲಿ ಮತ್ತೊಂದು ಘೋರ ಕೃತ್ಯ: ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ, ಹತ್ಯೆ!


ಜೂಜಿನಲ್ಲಿ 5 ಕೋಟಿ ರೂ. ಮಾತ್ರ ಗೆದ್ದಿದ್ದ ಉದ್ಯಮಿಗೆ ಆರಂಭಿಕ ಯಶಸ್ಸಿನ ನಂತರ ಅದೃಷ್ಟ ಕೈಕೊಟ್ಟಿತ್ತು. ಬಳಿಕ ತನ್ನ ಹಣವನ್ನು ಹಿಂದಿರುಗಿಸುವಂತೆ ಆರೋಪಿಗೆ ತಿಳಿಸಿದ್ದರು. ಆದರೆ ಹಣ ವಾಪಸ್ ಮಾಡಲು ಆತ ನಿರಾಕರಿಸಿದ್ದ. ಇದರಿಂದ ಭಯಗೊಂಡ ಉದ್ಯಮಿ ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಭಾರತೀಯ ದಂಡ ಸಂಹಿತೆಯಡಿ ವಂಚನೆ ಪ್ರಕರಣ ದಾಖಲಾಗಿದೆ. ಆರೋಪಿಯ ಮನೆಯಲ್ಲಿ ದೊಡ್ಡ ಪ್ರಮಾಣದ ನಗದು ಸಿಕ್ಕಿದ್ದು, ಅದನ್ನು ಎಣಿಕೆ ಮಾಡಲಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.