ಬೆಂಗಳೂರು: ಮನೆ ಕಳ್ಳತನ ಮಾಡಿ ಎಸ್ಕೇಪ್ ಅಗಿದ್ದ ಖತರ್ನಾಕ್ ಖದೀಮನೊಬ್ಬ ಗಿರವಿ ಅಂಗಡಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಮನೆಯಲ್ಲಿದ್ದ 220 ಗ್ರಾಂ ಚಿನ್ನಾಭರಣದಲ್ಲಿ ಗಡಿಬಿಡಿಯಲ್ಲಿ ಈತ 70 ಗ್ರಾಂ ಚಿನ್ನಾಭರಣ ಕದ್ದಿದ್ದ.


COMMERCIAL BREAK
SCROLL TO CONTINUE READING

ಆರೋಪಿ ಪ್ರಶಾಂತ್ ಅಲಿಯಾಸ್ ಪಚ್ಚಿಯನ್ನು ಶೇಷಾದ್ರಿ ಪುರಂ ಪೊಲೀಸರು ಬಂಧಿಸಿದ್ದಾರೆ. ಮನೆಗೆ ನುಗ್ಗಿ ಕಬೋರ್ಡ್‍ಗೆ ಕೈಹಾಕಿದ ಕಳ್ಳನಿಗೆ ಮೊದಲಿಗೆ 70 ಗ್ರಾಂ ಚಿನ್ನಾಭರಣ ಸಿಕ್ಕಿತ್ತು. ಅದನ್ನು ತೆಗೆದುಕೊಂಡವನೇ ಎಸ್ಕೇಪ್ ಆಗಿದ್ದ. ಆದರೆ ಪಕ್ಕದಲ್ಲಿಯೇ ಇದ್ದ ಬ್ಯಾಗ್‍ನಲ್ಲಿ 150 ಗ್ರಾಂ ಚಿನ್ನ 1 ಲಕ್ಷ ರೂ. ಹಣ ಇರೋದು ಆತನಿಗೆ ಗೊತ್ತಾಗಿರಲಿಲ್ಲ.


ಇದನ್ನೂ ಓದಿ: R Ashok : ಬೆಂಗಳೂರಲ್ಲೇ ಮನೆ ಮಾಡಲಿದ್ದಾರೆ ಕೇಂದ್ರ ಸಚಿವ ಅಮಿತ್ ಶಾ, ಧರ್ಮೇಂದ್ರ ಪ್ರಧಾನ್!


ಮನೆ ಕಳ್ಳತನ ಮಾಡಿದ್ದ ಆರೋಪಿ ಪ್ರಶಾಂತ್ ಸದಾಶಿವನಗರದವರೆಗೂ ನಡೆದುಕೊಂಡು ಹೋಗಿದ್ದ. ಪೊಲೀಸರ ದಿಕ್ಕು ತಪ್ಪಿಸಲು ಗಲ್ಲಿ ಗಲ್ಲಿಯಲ್ಲೂ ಓಡಾಡಿದ್ದ. ಕೊನೆಗೆ ಆಟೋದಲ್ಲಿ ಹೋಗಿ ಮತ್ತಿಕೆರೆ ಸಮೀಪದ ಜ್ಯುವೆಲ್ಲರಿ ಶಾಪ್‍ನಲ್ಲಿ ಕದ್ದ ಚಿನ್ನವನ್ನು ಅಡವಿಟ್ಟಿದ್ದ.


ಆರೋಪಿ ಪ್ರಶಾಂತ್‍ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಬರೋಬ್ಬರಿ 150 ಸಿಸಿಟಿವಿಗಳನ್ನು ಖಾಕಿಪಡೆ ಪರಿಶೀಲಿಸಿತ್ತು. ಕೊನೆಗೆ ಜ್ಯೂವೆಲ್ಲರಿ ಶಾಪ್ ನಲ್ಲಿ ಚಿನ್ನ ಅಡವಿಟ್ಟಾಗ ನೀಡಿದ್ದ ಆಧಾರ್ ಕಾರ್ಡ್ ಪೊಲೀಸರಿಗೆ ಆರೋಪಿಯ ಸುಳಿವು ನೀಡಿತ್ತು. ಈ ಹಿಂದೆ ಯಶವಂತಪುರ ಸೇರಿ ಹಲವು ಠಾಣೆಗಳಲ್ಲಿ ಈ ಆರೋಪಿ ಕಳ್ಳತನದಲ್ಲಿ ಭಾಗಿಯಾಗಿದ್ದ. ಆರೋಪಿಯಿಂದ 70 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದ ಶೇಷಾದ್ರಿಪುರಂ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: Vande Bharat Express : ಬೆಂಗಳೂರಿನಲ್ಲಿ ಮೈಸೂರು - ಚೆನ್ನೈ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.