ಅಳಿವಿನಂಚಿಗೆ ತಲುಪಿದ ರಣಹದ್ದು!! 3 ರಾಜ್ಯಗಳಲ್ಲಿ ಏಕಕಾಲಕ್ಕೆ ಜಟಾಯು ಸಮೀಕ್ಷೆ

Endangered vulture : ಅಳಿವಿನಂಚಿನಲ್ಲಿರುವ ಜಟಾಯುಗಳನ್ನು ಉಳಿಸಿಕೊಳ್ಳಲೇ ಬೇಕಾದ ತುರ್ತು ಎದುರಿಗಿರುವ ಹಿನ್ನೆಲೆಯಲ್ಲಿ ನೀಲಗಿರಿ ಶ್ರೇಣಿಯಲ್ಲಿ ಶನಿವಾರ ಹಾಗೂ ಭಾನುವಾರ ಏಕಕಾಲದಲ್ಲಿ 3 ರಾಜ್ಯಗಳಲ್ಲಿ ಸರ್ವೇ ನಡೆಯಲಿದೆ.‌

Written by - Zee Kannada News Desk | Last Updated : Feb 25, 2023, 01:01 PM IST
  • ಅಳಿವಿನಂಚಿಗೆ ತಲುಪಿದ ರಣಹದ್ದು!!
  • 3 ರಾಜ್ಯಗಳಲ್ಲಿ ಏಕಕಾಲಕ್ಕೆ ಜಟಾಯು ಸಮೀಕ್ಷೆ
ಅಳಿವಿನಂಚಿಗೆ ತಲುಪಿದ ರಣಹದ್ದು!!  3 ರಾಜ್ಯಗಳಲ್ಲಿ ಏಕಕಾಲಕ್ಕೆ ಜಟಾಯು ಸಮೀಕ್ಷೆ title=
Endangered vulture

ಚಾಮರಾಜನಗರ: ಒಂದು ಕಾಲದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ರಣಹದ್ದುಗಳು ಈಗ ನಶಿಸುವ ಹಂತ ತಲುಪಿರುವುದರಿಂದ ಎಚ್ಚೆತ್ತ ಅರಣ್ಯ ಸಚಿವಾಲಯವು  ರಣಹದ್ದುಗಳ ಸರ್ವೇಗೆ ಮುಂದಾಗಿದೆ. ಕರ್ನಾಟಕದ ಬಂಡೀಪುರ, ನಾಗರಹೊಳೆ, ಬಿಆರ್ಟಿ , ತಮಿಳುನಾಡಿನ ಮಧುಮಲೈ ಹಾಗೂ ಕೇರಳದ ವೈನಾಡು ಅರಣ್ಯ ಪ್ರದೇಶದಲ್ಲಿ 80 ರ ದಶಕದಲ್ಲಿ ಆಜುಮಾಸು 10 ಸಾವಿರದಷ್ಟಿದ್ದ ರಣಹದ್ದುಗಳ ಸಂಖ್ಯೆ ಗಣನೀಯವಾಗಿ ಕುಸಿದಿದ್ದು 250 ಇರಬಹುದು ಎನ್ನಲಾಗುತ್ತಿದೆ.

ಅಳಿವಿನಂಚಿನಲ್ಲಿರುವ ಜಟಾಯುಗಳನ್ನು ಉಳಿಸಿಕೊಳ್ಳಲೇ ಬೇಕಾದ ತುರ್ತು ಎದುರಿಗಿರುವ ಹಿನ್ನೆಲೆಯಲ್ಲಿ ನೀಲಗಿರಿ ಶ್ರೇಣಿಯಲ್ಲಿ ಶನಿವಾರ ಹಾಗೂ ಭಾನುವಾರ ಏಕಕಾಲದಲ್ಲಿ 3 ರಾಜ್ಯಗಳಲ್ಲಿ ಸರ್ವೇ ನಡೆಯಲಿದೆ.‌

ಇದನ್ನೂ ಓದಿ :  'ಡಿಜೆ ಸೌಂಡಿಗೆ ಸ್ಟೆಪ್ಸ್ ಹಾಕಿ ಜನರಿಗೆ ಡ್ರಗ್ಸ್ ಜಾಗೃತಿ ಮೂಡಿಸಿದ ಕಮೀಷನರ್'

ರಣಹದ್ದುಗಳನ್ನು ಉಳಿಸಿಕೊಳ್ಳಲು 2025 ರವರೆಗೆ ಕೇಂದ್ರ ಪರಿಸರ ಸಚಿವಾಲಯವು ಯೋಜನೆ  ಹಾಕಿಕೊಂಡಿದ್ದು ಅದರ ಮೊದಲ ಹಂತವೇ ಈ ಸರ್ವೇಕ್ಷಣೆಯಾಗಿದೆ. ಕಾಡಿನ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ರಣಹದ್ದುಗಳನ್ನು ಉಳಿಸಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಈ ಸರ್ವೇ ನಡೆದು ಮುಂದಿನ ಯೋಜನೆ ರೂಪಿಸಬೇಕಿದೆ. 

ಭಾರತದಲ್ಲಿ 9 ಜಾತಿ ರಣಹದ್ದುಗಳಿದ್ದು ಕರ್ನಾಟಕದಲ್ಲಿ ಎರಡು ವಲಸೆ ಬರುವ ರಣಹದ್ದು ಸೇರಿ 6 ರಣಹದ್ದು ಜಾತಿಗಳು ಸಿಗಲಿದೆ. ನೀಲಗಿರಿ ಶ್ರೇಣಿಯಲ್ಲಿ ಮುಖ್ಯವಾಗಿ ಬಿಳಿಬೆನ್ನಿನ ರಣಹದ್ದು,  ಕೆಂಪು ತಲೆ ರಣಹದ್ದು, ಇಂಡಿಯನ್ ವಲ್ಚರ್, ಈಜಿಪ್ಷಿಯನ್ ವಲ್ಚರ್ ಎಂಬ ನಾಲ್ಕು ಪ್ರಬೇಧಗಳಿದ್ದು ಇವುಗಳ ಅಂದಾಜು ಸಂಖ್ಯೆಯನ್ನು ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಏಕಕಾಲದಲ್ಲಿ ಲೆಕ್ಕ ಹಾಕಲಾಗುತ್ತದೆ. 

ಇದನ್ನೂ ಓದಿ : ಬಳ್ಳಾರಿ ನಗರದಲ್ಲಿ ವಿವಿಧೆಡೆ ದಾಳಿ: ಮೂವರು ಮಕ್ಕಳ ರಕ್ಷಣೆ

ಕರ್ನಾಟಕ ಅರಣ್ಯ ಇಲಾಖೆ ಹಾಗೂ ಡಬ್ಲೂಸಿಎಫ್( WCF) ಸಂಸ್ಥೆಯ ಸಹಭಾಗಿತ್ವದಲ್ಲಿ 25 ಹಾಗೂ 26 ರಂದು ಈ ಸಮೀಕ್ಷೆ ನಡೆಯುತ್ತಿದೆ. ಡಬ್ಲ್ಯೂ ಸಿ ಎಸ್ ನ ಮುಖ್ಯಸ್ಥ ರಾಜಕುಮಾರ್ ದೇವರಾಜ್ ಅರಸ್ ಅವರ ನೇತೃತ್ವದಲ್ಲಿ ಈ ಸಮೀಕ್ಷೆ ಕಾರ್ಯ ನಡೆಯುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News