MS Dhoni, ಅಭಿಷೇಕ್ ಬಚ್ಚನ್, ಶಿಲ್ಪಾ ಶೆಟ್ಟಿಗಳಂತಹ ಸೆಲಿಬ್ರಿಟಿಗಳ ಹೆಸರಿನಲ್ಲಿ ಭಾರಿ ವಂಚನೆ!
Credit Card Competition Act: ವಂಚಕರ ಗುಂಪೊಂದು MS ಧೋನಿ ಸೇರಿದಂತೆ ಹಲವಾರು ಬಾಲಿವುಡ್ ನಟ-ನಟಿಯರ PAN ವಿವರಗಳನ್ನು ಅವರ GST ಗುರುತಿನ ಸಂಖ್ಯೆ ಅಂದರೆ GSTIN ನಿಂದ ಪಡೆದುಕೊಂಡಿದೆ ಮತ್ತು ಪುಣೆ ಮೂಲದ ಫಿನ್‌ಟೆಕ್ ಸ್ಟಾರ್ಟ್ಅಪ್ `ಒನ್ ಕಾರ್ಡ್` ನಿಂದ ಅವರ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ!
Cyber Crime: ಸೈಬರ್ ವಂಚನೆಗಳ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಇಂತಹುದೇ ಒಂದು ವಿಲಕ್ಷಣ ಪ್ರಕರಣದಲ್ಲಿ, ವಂಚಕರ ಗುಂಪೊಂದು ಎಂಎಸ್ ಧೋನಿ ಸೇರಿದಂತೆ ಹಲವಾರು ಬಾಲಿವುಡ್ ನಟರ ಪ್ಯಾನ್ ವಿವರಗಳನ್ನು ಅವರ GST ಗುರುತಿನ ಸಂಖ್ಯೆ ಅಂದರೆ GSTIN ನಿಂದ ಪಡೆದುಕೊಂಡಿದೆ ಮತ್ತು ಪುಣೆ ಮೂಲದ ಫಿನ್‌ಟೆಕ್ ಸ್ಟಾರ್ಟ್ಅಪ್ 'ಒನ್ ಕಾರ್ಡ್' ನಿಂದ ಅವರ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆದುಕೊಂಡಿದೆ ಎಂದು ಆರೋಪಿಸಲಾಗಿದೆ. ವಂಚಕರು ಅಭಿಷೇಕ್ ಬಚ್ಚನ್, ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್, ಇಮ್ರಾನ್ ಹಶ್ಮಿ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ಹೆಸರು ಮತ್ತು ವಿವರಗಳನ್ನು ಅದಕ್ಕಾಗಿ ಬಳಸಿದ್ದಾರೆ ಎಂದು ಶಾಹದಾರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರೋಹಿತ್ ಮೀನಾ ಹೇಳಿದ್ದಾರೆ.
21 ಲಕ್ಷ ರೂ, ಖರ್ಚು ಮಾಡಲಾಗಿದೆ
ಈ ಕುರಿತು ಸುದ್ದಿ ಸಂಸ್ಥೆ ಪಿಟಿಐಗೆ ಮಾಹಿತಿ ನೀಡಿರುವ ರೋಹಿತ್ ಮೀನಾ, 'ಪ್ರಕರಣದ ತನಿಖೆ ನಡೆಯುತ್ತಿದೆ, ಆದ್ದರಿಂದ ನಾವು ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. ಈ ವಂಚನೆಯ ಬಗ್ಗೆ ಕಂಪನಿಗೆ ನಂತರ ಮಾಹಿತಿ ಸಿಕ್ಕಿದೆ, ಆದರೆ ಅದಕ್ಕೂ ಮೊದಲು ವಂಚಕರು ಈ ಕೆಲವು ಕಾರ್ಡ್‌ಗಳನ್ನು ಬಳಸಿಕೊಂಡು 21.32 ಲಕ್ಷ ಮೌಲ್ಯದ ಉತ್ಪನ್ನಗಳ ಖರೀದಿಯನ್ನು ಮಾಡಿದ್ದಾರೆ. ಇದರ ನಂತರ, ಕಂಪನಿಯು ತಕ್ಷಣವೇ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದೆ, ತಕ್ಷಣ ಕಾರ್ಯತತ್ಪರಾದ ಪೊಲೀಸರು ಪ್ರಕರಣದಲ್ಲಿ ಐದು ಜನರನ್ನು ಬಂದಿಸಿದ್ದಾರೆ.
ಬಂಧಿತ ಆರೋಪಿಗಳು ಯಾರು?
ಐವರು ಆರೋಪಿಗಳನ್ನು ಪುನೀತ್, ಮೊಹಮ್ಮದ್ ಆಸಿಫ್, ಸುನೀಲ್ ಕುಮಾರ್, ಪಂಕಜ್ ಮಿಶ್ರಾ ಮತ್ತು ವಿಶ್ವ ಭಾಸ್ಕರ್ ಶರ್ಮಾ ಎಂದು ಗುರುತಿಸಲಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. ಅವರು ಕಂಪನಿಯನ್ನು ವಿಲಕ್ಷಣ ರೀತಿಯಲ್ಲಿ ವಂಚಿಸಲು ಒಟ್ಟಿಗೆ ಕೆಲಸ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಮೂಲವೊಂದು, 'ಆರೋಪಿಗಳನ್ನು ಬಂಧಿಸಿದ ನಂತರ ವಿಚಾರಣೆ ನಡೆಸಿದಾಗ, ವಂಚನೆ ಹೇಗೆ ನಡೆಸಲಾಯಿತು ಎಂಬುದನ್ನು ಅವರು ತಿಳಿಸಿದ್ದಾರೆ. ಆರೋಪಿಗಳು ಗೂಗಲ್‌ನಲ್ಲಿ ಸೆಲೆಬ್ರಿಟಿಗಳ ಜಿಎಸ್‌ಟಿ ವಿವರಗಳನ್ನು ಬಳಸುತ್ತಿದ್ದರು. GSTIN ನ ಮೊದಲ ಎರಡು ಅಂಕೆಗಳು ರಾಜ್ಯದ ಕೋಡ್ ಮತ್ತು ಮುಂದಿನ 10 ಅಂಕೆಗಳು PAN ಸಂಖ್ಯೆ ಎಂದು ಅವರು ತಿಳಿದಿದ್ದರು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Women's Day: ಉಡುಗೊರೆಯಾಗಿ ಕೊಡಲು ಇಲ್ಲಿವೆ 5 ಬೆಸ್ಟ್ ಸ್ಮಾರ್ಟ್ ಫೋನ್ ಗಳು, 2023 ರಲ್ಲಿ ಬಂಪರ್ ಬಿಕರಿಯಾಗಿವೆ
‘ಈ ಸೆಲೆಬ್ರಿಟಿಗಳ ಜನ್ಮದಿನಾಂಕ ಗೂಗಲ್‌ನಲ್ಲಿಯೂ ಲಭ್ಯವಿತ್ತು... ಪ್ಯಾನ್ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ಪಡೆದ ನಂತರ ಅವರು ಅಗತ್ಯವಾದ ಪ್ಯಾನ್ ವಿವರಗಳನ್ನು ಪಡೆದುಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಅವರು ಮೋಸದಿಂದ ಪ್ಯಾನ್ ಕಾರ್ಡ್ ಅನ್ನು ಮರು-ತಯಾರಿಕೆ ಮಾಡಿದ್ದಾರೆ ಮತ್ತು ಅದರ ಮೇಲೆ ಅವರ ಛಾಯಾಚಿತ್ರವನ್ನು ಅಂಟಿಸಿದ್ದಾರೆ, ಇದರಿಂದ ವೀಡಿಯೊ ಪರಿಶೀಲನೆಯ ಸಮಯದಲ್ಲಿ ಅವರ ಮುಖವು ಪ್ಯಾನ್/ಆಧಾರ್ ಕಾರ್ಡ್‌ನಲ್ಲಿ ಲಭ್ಯವಿರುವ ಛಾಯಾಚಿತ್ರದೊಂದಿಗೆ ಹೊಂದಿಕೆಯಾಗಿದೆ ಎನ್ನಲಾಗಿದೆ. ಉದಾಹರಣೆಗೆ, ಅಭಿಷೇಕ್ ಬಚ್ಚನ್ ಅವರ ಪ್ಯಾನ್ ಕಾರ್ಡ್‌ನಲ್ಲಿ ಅವರ ಪ್ಯಾನ್ ಸಂಖ್ಯೆ ಮತ್ತು ಜನ್ಮ ದಿನಾಂಕವಿದೆ, ಆದರೆ ಆರೋಪಿಗಳಲ್ಲಿ ಒಬ್ಬನ ಭಾವಚಿತ್ರವಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ-ಶೀಘ್ರದಲ್ಲೇ 300 ಕಿ.ಮೀಗೂ ಅಧಿಕ ಮೈಲೇಜ್ ನೀಡುವ ಈ ಕಾರ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ!
ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಗಳು ಇತರ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯಲು ಇದೇ ವಿಧಾನವನ್ನು ಅನುಸರಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಪುಣೆ ಮೂಲದ ಕಂಪನಿಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ, 'ಎಫ್‌ಪಿಎಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ 'ಒನ್ ಕಾರ್ಡ್' ಅನ್ನು ನೀಡುತ್ತದೆ, ಇದು ಸಂಪರ್ಕವಿಲ್ಲದ ಕ್ರೆಡಿಟ್ ಕಾರ್ಡ್ ಆಗಿದೆ. ಇದರೊಂದಿಗೆ, ಆನ್‌ಲೈನ್ ಸೇವೆಗಳನ್ನು ಒನ್ ಕಾರ್ಡ್ ಮತ್ತು ಒನ್ ಸ್ಕೋರ್ ಅಪ್ಲಿಕೇಶನ್ ಮೂಲಕ ಒದಗಿಸಲಾಗುತ್ತದೆ, ಇದರಿಂದ ಗ್ರಾಹಕರು ಯಾವುದೇ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಲ್ಲಿ ಆನ್‌ಲೈನ್ ವಹಿವಾಟುಗಳು ಅಥವಾ ಖರೀದಿಗಳಿಗಾಗಿ ಇದನ್ನು ಬಳಸಬಹುದು. ಈ ವಂಚಕರು ತಮ್ಮ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲು ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳಂತಹ ವಿವರಗಳನ್ನು ಅಪ್‌ಲೋಡ್ ಮಾಡಿ ಅಪ್ಲಿಕೇಶನ್ ಮೂಲಕ ಕಂಪನಿಯನ್ನು ಸಂಪರ್ಕಿಸಿದ್ದಾರೆ ಎಂದು ಕಂಪನಿ ಆರೋಪಿಸಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.