Food Delivery IVR Scam: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವು ಸಾಕಷ್ಟು ಅನುಕೂಲಗಳನ್ನು ತಂದಿದೆ ಆದರೆ ಹ್ಯಾಕರ್‌ಗಳು ಮತ್ತು ವಂಚಕರು ಮೋಸ ಮಾಡುವ ಹೊಸ ಮಾರ್ಗಗಳನ್ನು ಸಹ ಕಂಡುಹಿಡಿದಿದ್ದಾರೆ. ಐವಿಆರ್ ಸಿಸ್ಟಂ ಮೂಲಕ ಜನರು ಕರೆ ಮಾಡಿದಾಗ ರೆಕಾರ್ಡ್ ಆಗಿರುವ ಧ್ವನಿ ಕೇಳಿಸಿ, ಅದರ ಮೂಲಕ  ಹ್ಯಾಕರ್ ಗಳು ಲಕ್ಷಗಟ್ಟಲೇ ಹಣಗಳನ್ನು ಲೂಟಿ ಮಾಡುತ್ತೀದ್ದಾರೆ. ಅಂತಹದ್ದೆ ಒಂದು ಘಟನೆ ಬೆಳಕಿಗೆ ಬಂದಿದೆ. ಏನ್‌ ಈ ಘಟನೆ ಎಂಬುದನ್ನು ಇಲ್ಲಿ ತಿಳಿಯಿರಿ.. 


COMMERCIAL BREAK
SCROLL TO CONTINUE READING

ಹೌದು ಸೈಬರ್‌ ವಂಚಕರು ಒಂದಲ್ಲ ಒಂದು ದಾರಿ ಹಿಡಿದು ಅಮಾಯಕ ಜನರನ್ನು ವಂಚಿಸುತ್ತೀರುವುದು ಕೇಳುತ್ತಲೇ ಇರುತ್ತೇವೆ ಆದರೆ ಅದರ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ಈ ಬಗ್ಗೆ ಎಚ್ಚರಿಕೆಯ ಸುದ್ದಿಗಳು ಬಂದರು ಕೂಡ ಮೋಸ ಹೋಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮುಂದಿನ ಬಾರಿ ಫೋನ್ ರಿಂಗ್ ಆಗುವಾಗ ಅದರಲ್ಲಿ ಧ್ವನಿಮುದ್ರಿತ ಧ್ವನಿಯನ್ನು ಕೇಳಿದರೆ, ಎಚ್ಚರದಿಂದಿರಿ. ಇದು ವಂಚನೆಯ ಕರೆಯೂ ಆಗಿರಬಹುದು.


ಇದನ್ನೂ ಓದಿ:  Franchise fraud: ಮುಂಬೈನಲ್ಲಿ ಅಡಗಿದ್ದ ʼಇಡ್ಲಿ ಗುರುʼ ಮಾಲೀಕನ ಬಂಧನ!


ಇಂತಹದ್ದೇ ಪ್ರಕರಣವೊಂದು  ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಆಹಾರ ವಿತರಣಾ ವೇದಿಕೆಯಿಂದ ಸ್ವಯಂಚಾಲಿತ ಕರೆ ಬಂದಿದ್ದು ಇದರಿಂದ 26 ವರ್ಷದ ಉದ್ಯಮಿ ಮಹಿಳೆಯ ಬ್ಯಾಂಕ್ ಖಾತೆಯಿಂದ 97,000 ರೂಪಾಯಿಯನ್ನು ವಂಚಿಸಿದ್ದಾರೆ. ಮಹಿಳೆ ತಕ್ಷಣ ಸ್ಥಳೀಯ ಸೈಬರ್ ಸೆಲ್ ಅನ್ನು ಸಂಪರ್ಕಿಸಿದ್ದು. ತನಿಖೆಯಲ್ಲಿ ಮಾಜಿ ಡೆಲಿವರಿ ಬಾಯ್ ಗ್ಯಾಂಗ್ ವಂಚನೆ ಬಹಿರಂಗಗೊಂಡಿದ್ದು, ಇದರಲ್ಲಿ ಆತನ ಸಹಚರರೊಬ್ಬರು ಭಾಗಿಯಾಗಿದ್ದು ಸದ್ಯ ದೆಹಲಿ ಪೊಲೀಸ್‌ ಅವರನ್ನು ವಶಕ್ಕೆ ಪಡೆದಿದ್ದಾರೆ .


IVR ವ್ಯವಸ್ಥೆಯ ಮೂಲಕ ವಂಚನೆ


ಈ ಗ್ಯಾಂಗ್ ಆಹಾರ ವಿತರಣಾ ಅಪ್ಲಿಕೇಶನ್‌ಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಲು ಐವಿಆರ್ (ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್) ವ್ಯವಸ್ಥೆಯನ್ನು ಬಳಸುತ್ತಿದ್ದರು. ಇದು ಸ್ವಯಂಚಾಲಿತ ದೂರವಾಣಿ ವ್ಯವಸ್ಥೆಯಾಗಿದ್ದು, ಪೂರ್ವ-ದಾಖಲಿತ ಸಂದೇಶಗಳನ್ನು ಒಳಗೊಂಡಂತೆ ಹಲವಾರು ಇಂಟರ್ಫೇಸ್‌ಗಳನ್ನು ಒಳಗೊಂಡಿರುತ್ತದೆ. ಇದರ ಮೂಲಕವೇ ಜನರನ್ನು ವಂಚಿಸಲಾಗುತ್ತಿದೆ.


ಇದನ್ನೂ ಓದಿ: 600 ರೂ ದಿನಗೂಲಿಗೆ ಬಂದವರು ಬೆಂಕಿಯಲ್ಲಿ ಬೆಂದುಹೋದ್ರು:ಈ ಕುಟುಂಬಗಳಿಗೆ ಇನ್ಯಾರು ದಿಕ್ಕು


ಹೆಚ್ಚಿನವರು ಆನ್‌ಲೈನ್‌ ಫುಡ್‌ಗಳನ್ನು ಹೆಚ್ಚಾಗಿ ಆರ್ಡರ್‌ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಈ ರೀತಿಯ ಕಾಲ್‌ಗಳು ಬಂದಾಗ ಎಚ್ಚರವಹಿಸಿವುದು ಒಳ್ಳೆಯದು. ಇದನ್ನೇನ್ನಾದರು ನಿರ್ಲಕ್ಷ್ಯ ತೋರಿದರೆ ಇದರಿಂದ ನಿಮಗೆ ಭಾರಿ ನಷ್ಟವಾಗುವುದು. ಆದ್ದರಿಂದ ಈ ಹೊಸ ರೀತಿಯ ಸೈಬರ್‌ ಅಪರಾಧ ಮತ್ತು ವಂಚನೆಗಳಿಂದ ಸ್ವಲ್ಪ ಎಚ್ಚರದಿಂದಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.