Bangalore robbery case: ಉಂಡ ಮನೆಗೆ ಕನ್ನ ಹಾಕಿ ನವರಂಗಿ ನಾಟಕವಾಡಿದ್ದ ಕಳ್ಳಿ ಅಂದರ್

Robbery investigation in Bangalore: ಬೆಂಗಳೂರಿನಲ್ಲಿ ಮಾರುತಿ ಪ್ರಸನ್ನ ಎಂಬುವರ ಮನೆಯಲ್ಲಿ ಮನೆಗೆಲಸದವಳು ಕಳ್ಳತನ ಮಾಡಿ ಯಾರೋ ಕಳ್ಳರು ಬಂದು ಚಿನ್ನಾಭರಣ ಕದ್ದಿದ್ದಾರೆ ಎಂದು ಕಥೆ ಕಟ್ಟಿದ್ದವಳನ್ನು ಮಾಲೀಕರು ದೂರು ನೀಡಿದ ಮೇರೆಗೆ ಪೋಲೀಸರು ತನಿಖೆ ನಡೆಸಿ ಬಳಿಕ ಈ ಕಳ್ಳಿಯನ್ನು ಬಂಧಿಸಿದ್ದಾರೆ.

Written by - VISHWANATH HARIHARA | Last Updated : Jan 30, 2024, 03:35 PM IST
  • ಬಳ್ಳಾರಿ ಮೂಲದ 34 ವರ್ಷದ ಶಾಂತ ಕಳೆದ ಮೂರು ವರ್ಷಗಳಿಂದ ಮಾರುತಿ ಪ್ರಸನ್ನ ಎಂಬುವರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದಳು.
  • ಮನೆ ಮಾಲೀಕರು ಕುಟುಂಬ ವಿದೇಶಕ್ಕೆ ತೆರಳಿದ ಸಮಯ ಅರಿತು ಪ್ಲಾನ್ ನಂತೆ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ವೈರ್ ಕಟ್ ಮಾಡಿ, ಅಪರಿಚಿತರೇ ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಹಾಗೇ ಸಿನ್ ಕ್ರಿಯೇಟ್ ಮಾಡಿದ್ದಳು.
  • ಮಾಲೀಕರು ದೂರು ನೀಡಿದ ಮೇರೆಗೆ ಇನ್ಸ್ಪೆಕ್ಟರ್ ಗಿರೀಶ್ ನೇತೃತ್ವದ ತಂಡ ತನಿಖೆ ನಡೆಸಿ ಮನೆಗೆಲಸದಾಕೆಯನ್ನ ತೀವ್ರವಾಗಿ ವಿಚಾರಣೆ ನಡೆಸಿದಾಗ ಚಿನ್ನ‌ ಕದ್ದು ಸಂಬಂಧಿಕರ ಮನೆಗೆ ಸಾಗಿಸಿರುವುದಾಗಿ ಒಪ್ಪಿಕೊಂಡಿದ್ದಾಳೆ‌.
Bangalore robbery case: ಉಂಡ ಮನೆಗೆ ಕನ್ನ ಹಾಕಿ ನವರಂಗಿ ನಾಟಕವಾಡಿದ್ದ ಕಳ್ಳಿ ಅಂದರ್ title=

Updates on Bangalore crime incident: ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿ ಯಾರೋ ಕಳ್ಳರು ಬಂದು ಚಿನ್ನಾಭರಣ ಕದ್ದಿದ್ದಾರೆ ಎಂದು ಕಥೆ ಕಟ್ಟಿದ  ಕಳ್ಳಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ‌. ಶಾಂತ ಬಂಧಿತ ಆರೋಪಿತೆಯಾಗಿದ್ದು,30 ಲಕ್ಷ ಮೌಲ್ಯದ 523 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಬಳ್ಳಾರಿ ಮೂಲದ 34 ವರ್ಷದ ಶಾಂತ ಕಳೆದ ಮೂರು ವರ್ಷಗಳಿಂದ ಮಾರುತಿ ಪ್ರಸನ್ನ ಎಂಬುವರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದಳು. ಈಕೆಗೆ ಇಬ್ಬರ ಮಕ್ಕಳಿದ್ದು, ಗಂಡ ಮೃತಪಟ್ಟಿದ್ದ. ಮಾಲೀಕನ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಇರುವುದನ್ನ ಖಾತ್ರಿಪಡಿಸಿಕೊಂಡಿದ್ದಳು‌. 

ಇದನ್ನೂ ಓದಿ: "ಕಾಂಗ್ರೆಸ್ ಜೀವಂತವಾಗಿದ್ದರೇ ಮೊದಲು ಶಾಮನೂರು ಶಿವಶಂಕರಪ್ಪ ಅವರನ್ನು ಉಚ್ಛಾಟಿಸಿ"

ಮನೆ ಮಾಲೀಕರು ಕುಟುಂಬ ವಿದೇಶಕ್ಕೆ ತೆರಳಿದ ಸಮಯ ಅರಿತು ಪ್ಲಾನ್ ನಂತೆ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ವೈರ್ ಕಟ್ ಮಾಡಿ ಗ್ಯಾಸ್  ಲೈಟ್ , ಸುತ್ತಿಗೆ  ಇನ್ನಿತರ ವಸ್ತುಗಳನ್ನ‌ ಖರೀದಿಸಿದ್ದಳು. ಕಬೋರ್ಡ್ ನಲ್ಲಿ ಬೀಗವನ್ನು ಗ್ಯಾಸ್ ಲೈಟ್ ಮೂಲಕ ಸುಟ್ಟು ಅಪರಿಚಿತರೇ ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಹಾಗೇ ಸಿನ್ ಕ್ರಿಯೇಟ್ ಮಾಡಿದ್ದಳು. 

ಜನವರಿ 25 ರಂದು ರಾತ್ರಿ ಅಪರಿಚಿತರು ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದಾರೆ ಎಂದು ಮನೆ ಮಾಲೀಕರನ್ನ ನಂಬಿಸಿದ್ದಳು. ಇದರಂತೆ ಮಾಲೀಕರು ದೂರು ನೀಡಿದ ಮೇರೆಗೆ ಇನ್ಸ್ಪೆಕ್ಟರ್ ಗಿರೀಶ್ ನೇತೃತ್ವದ ತಂಡ ತನಿಖೆ ನಡೆಸಿ ಮನೆಗೆಲಸದಾಕೆಯನ್ನ ತೀವ್ರವಾಗಿ ವಿಚಾರಣೆ ನಡೆಸಿದಾಗ ಚಿನ್ನ‌ ಕದ್ದು ಸಂಬಂಧಿಕರ ಮನೆಗೆ ಸಾಗಿಸಿರುವುದಾಗಿ ಒಪ್ಪಿಕೊಂಡಿದ್ದಾಳೆ‌. ಸದ್ಯ ಆರೋಪಿತೆಯನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ‌.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News