ಡೆಲಿವರಿ ನೀಡದೆ ಐಫೋನ್ಗಳನ್ನು ಕದ್ದು ಪರಾರಿಯಾಗಿದ್ದ ಡಂಜೋ ಡೆಲವರಿ ಬಾಯ್ಸ್ ಬಂಧನ
ಗ್ರಾಹಕರು ರವಾನಿಸುವ ದುಬಾರಿ ವಸ್ತುಗಳನ್ನ ಡೆಲವರಿ ಮಾಡದೇ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದ ಖದೀಮರ ಬಂಧನ.
ಬೆಂಗಳೂರು : ಐಫೋನ್‌ಗಳಿದ್ದ ಪಾರ್ಸೆಲ್ ಸಮೇತ ಪರಾರಿಯಾಗಿದ್ದ ಇಬ್ಬರು ಡಂಜೋ ಡೆಲವರಿ ಬಾಯ್ಸ್ ಗಳನ್ನ ಕೇಂದ್ರ ವಿಭಾಗದ ಸಿಇಎನ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಸವರಾಜು ಹಾಗೂ ಮಾಳಪ್ಪ ಬಂಧಿತ ಆರೋಪಿಗಳು.
ತಸ್ಲೀಂ, ಆರೀಫ್ ಎಂಬುವವರು ರವಾನಿಸಿದ್ದ ಆರು ಐಫೋನ್ ಹಾಗೂ ಆ್ಯಪಲ್ ವಾಚ್ ಸಮೇತ ಈ ಆರೋಪಿಗಳು ಪರಾರಿಯಾಗಿದ್ದರು. ನಕಲಿ ದಾಖಲಾತಿ, ಆಧಾರ್ ಕಾರ್ಡುಗಳನ್ನ ನೀಡಿ ಬೇರೆಯವರ ಹೆಸರಲ್ಲಿ ಡಂಜೋದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಗ್ರಾಹಕರು ರವಾನಿಸುವ ದುಬಾರಿ ವಸ್ತುಗಳನ್ನ ಡೆಲವರಿ ಮಾಡದೇ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದರು.
ಇದನ್ನೂ ಓದಿ- ನಿಮ್ಮ ಹೆಸರಲ್ಲಿ ಡ್ರಗ್ಸ್ ಸಪ್ಲೈ ಆಗುತ್ತಿದೆ ಎಂದು ಬೆದರಿಕೆ ಹಾಕಿ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿದ ಸೈಬರ್ ಖದೀಮರು
ಮಾರ್ಚ್ ಐದರಂದು ಸುಣಕಲ್ ಪೇಟೆಯ ಅಂಗಡಿಯೊಂದರಲ್ಲಿ ಆರು ಐಫೋನ್‌ಗಳು ಹಾಗೂ ಒಂದು ಆ್ಯಪಲ್ ವಾಚ್ ಖರೀದಿಸಿದ್ದ ತಸ್ಲೀಂ ಎಂಬುವವರು ವಿಜಯನಗರದ ತಮ್ಮ ಅಂಗಡಿ ವಿಳಾಸಕ್ಕೆ ತಲುಪಿಸಲು ಡಂಜೋ ಡಿಲವರಿ ಮೊರೆಹೋಗಿದ್ದರು. ಅರುಣ್ ಪಾಟೀಲ್ ಎಂಬ ಹೆಸರಿನಲ್ಲಿ ಆರೋಪಿ ಪಾರ್ಸೆಲ್ ಪಡೆದಿದ್ದ. ಕೆಲ ಸಮಯದ ಬಳಿಕ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ತನಗೆ ಪಾರ್ಸಲ್ ಹಸ್ತಾಂತರಿಸಿದ್ದು ಶೀಘ್ರದಲ್ಲೇ ನಿಮ್ಮ ವಿಳಾಸಕ್ಕೆ ಡಿಲವರಿ ಕೊಡಲಾಗುವುದು ಎಂದು ನಯನ್ ಎಂಬ ಹೆಸರಿನಲ್ಲಿ ಮತ್ತೋರ್ವ ಆರೋಪಿ ತಸ್ಲೀಂಗೆ ಕರೆ ಮಾಡಿ ತಿಳಿಸಿದ್ದ. ಆದರೆ ಇಬ್ಬರೂ ಸಹ ಪಾರ್ಸಲ್ ವಿಳಾಸಕ್ಕೆ ತಲುಪಿಸದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದರು.
ಇದನ್ನೂ ಓದಿ- ಉದ್ಯೋಗದ ಹೆಸರಿನಲ್ಲಿ ಮಹಾ ಮೋಸ: ಯುವಕರೇ ಎಚ್ಚರ! ಎಚ್ಚರ! ಎಚ್ಚರ!
ಸದ್ಯ ತಸ್ಲೀಂ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಕೇಂದ್ರ ವಿಭಾಗದ ಸಿಇಎನ್ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 6.5 ಲಕ್ಷ ಮೌಲ್ಯದ 6 ಐಪೋನ್ ಗಳು, 2 ಆಪಲ್ ವಾಚ್ , ಲ್ಯಾಪ್ ಟಾಪ್ ಹಾಗೂ ಕೃತ್ಯಕ್ಕೆ ಬಳಸಿದ್ದ 4 ಮೊಬೈಲ್ 4 ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.