ನಿಮ್ಮ ಹೆಸರಲ್ಲಿ ಡ್ರಗ್ಸ್ ಸಪ್ಲೈ ಆಗುತ್ತಿದೆ ಎಂದು ಬೆದರಿಕೆ ಹಾಕಿ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿದ ಸೈಬರ್ ಖದೀಮರು

ನಿಮ್ಮ ಹೆಸರಲ್ಲಿ  ಥೈವಾನ್ ಗೆ ಡ್ರಗ್ಸ್, ಅವಧಿ ಮೀರಿದ ಪಾಸ್‌ಪೋರ್ಟ್, ಲ್ಯಾಪ್‌ಟಾಪ್ ಪಾರ್ಸಲ್ ಹೋಗುತ್ತಿದೆ. ವ್ಯಕ್ತಿಯೊಬ್ಬ ನಿಮ್ಮ ಬ್ಯಾಂಕ್ ಖಾತೆ ಉಪಯೋಗಿಸಿ ಮನಿಲ್ಯಾಂಡರಿಗ್ ಮಾಡುತ್ತಿದ್ದಾನೆ. ಹೀಗಾಗಿ ನೀವು ಆರೋಪಿಯಾಗಿದ್ದು, ನಾವು‌ ನಿಮ್ಮನ್ನು ವಿಚಾರಣೆ ಮಾಡಬೇಕಿದೆ ಎಂದು ಬೆದರಿಸಿದ್ದಾರೆ. 

Written by - VISHWANATH HARIHARA | Edited by - Yashaswini V | Last Updated : Feb 23, 2023, 01:27 PM IST
  • ಸಿಬಿಐ ಹೆಸರಲ್ಲಿ ಮಹಿಳೆಗೆ ಲಕ್ಷ-ಲಕ್ಷ ಮೋಸ
  • ನಿಮ್ಮ ಹೆಸರಲ್ಲಿ ಡ್ರಗ್ಸ್, ಅವಧಿ ಮೀರಿದ ಪಾಸ್‌ಪೋರ್ಟ್, ಲ್ಯಾಪ್‌ಟಾಪ್ ಪಾರ್ಸಲ್ ಹೋಗುತ್ತಿದೆ ಎಂದು ಹೇಳಿ ವಂಚನೆ
  • ವ್ಯಕ್ತಿಯೊಬ್ಬ ನಿಮ್ಮ ಬ್ಯಾಂಕ್ ಖಾತೆ ಉಪಯೋಗಿಸಿ ಮನಿಲ್ಯಾಂಡರಿಗ್ ಮಾಡುತ್ತಿದ್ದಾರೆ ಎಂದಿದ್ದ ವಂಚಕರು
ನಿಮ್ಮ ಹೆಸರಲ್ಲಿ ಡ್ರಗ್ಸ್ ಸಪ್ಲೈ ಆಗುತ್ತಿದೆ ಎಂದು ಬೆದರಿಕೆ ಹಾಕಿ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿದ ಸೈಬರ್ ಖದೀಮರು title=
Cyber Crime

ಬೆಂಗಳೂರು: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಗೆ ಲಕ್ಷ-ಲಕ್ಷ ಮೋಸ ಮಾಡಿರುವ ಪ್ರಸಂಗ ಬೆಳಕಿಗೆ ಬಂದಿದೆ. ಸಹನಾ(ಹೆಸರು ಬದಲಿಸಲಾಗಿದೆ) ಎಂಬ ಮಹಿಳೆಗೆ ವಂಚಿಸಿರುವ ಸೈಬರ್ ಖದೀಮರು, Fedex ಕೋರಿಯರ್  ಮುಂಬೈನಿಂದ ಕರೆ ಮಾಡುತ್ತಿದ್ದೇವೆ ಎಂದಿದ್ದರು. 

ನಿಮ್ಮ ಹೆಸರಲ್ಲಿ  ಥೈವಾನ್ ಗೆ ಡ್ರಗ್ಸ್, ಅವಧಿ ಮೀರಿದ ಪಾಸ್‌ಪೋರ್ಟ್, ಲ್ಯಾಪ್‌ಟಾಪ್ ಪಾರ್ಸಲ್ ಹೋಗುತ್ತಿದೆ. ವ್ಯಕ್ತಿಯೊಬ್ಬ ನಿಮ್ಮ ಬ್ಯಾಂಕ್ ಖಾತೆ ಉಪಯೋಗಿಸಿ ಮನಿಲ್ಯಾಂಡರಿಗ್ ಮಾಡುತ್ತಿದ್ದಾನೆ. ಹೀಗಾಗಿ ನೀವು ಆರೋಪಿಯಾಗಿದ್ದು, ನಾವು‌ ನಿಮ್ಮನ್ನು ವಿಚಾರಣೆ ಮಾಡಬೇಕಿದೆ ಎಂದು ಬೆದರಿಸಿದ್ದಾರೆ. ನಂತರ ಸ್ಕೈಪ್ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಿ ಅಂತಾ ಹೇಳಿ‌ ಮಹಿಳೆಯನ್ನು ನಂಬಿಸಲು ನಕಲಿ ಅಧಿಕಾರಿಗಳ ಐಡಿ‌ ಕಾರ್ಡ್ ಕಳುಹಿಸಿದ್ದಾರೆ. 

ಇದನ್ನೂ ಓದಿ- ಉದ್ಯೋಗದ ಹೆಸರಿನಲ್ಲಿ ಮಹಾ ಮೋಸ: ಯುವಕರೇ ಎಚ್ಚರ! ಎಚ್ಚರ! ಎಚ್ಚರ!

ನಿಮ್ಮ ಖಾತೆಯಲ್ಲಿರುವ ಹಣವನ್ನು ನಮಗೆ ವರ್ಗಾಯಿಸಬೇಕು. ಇಲ್ಲದಿದ್ದರೆ ನಿಮಗೆ ತೊಂದರೆಯಾಗಿ ತಪ್ಪಿತಸ್ಥರಾಗುತ್ತೀರಿ. ತನಿಖೆಗೆ ನೀವು ಸಹಕರಿಸಬೇಕು, ನೀವು ಈಗ ಆರೋಪಿಯಾಗಿದ್ದೀರಿ ಎಂದು ಬೆದರಿಸಿದ್ದರು.  

ಮನಿಲ್ಯಾಂಡರಿಂಗ್ ಕೇಸ್ ಸಂಬಂಧ ನಿಮ್ಮ ಖಾತೆಯ ಮಾಹಿತಿ ನಮಗೆ ಬೇಕಾಗಿದ್ದು, ಅಕೌಂಟಲ್ಲಿರುವ ಹಣವನ್ನು ನಮಗೆ ವರ್ಗಾಯಿಸಿ. ತನಿಖೆ ಮುಗಿದ ನಂತರ ನಿಮ್ಮ ಹಣ ಖಾತೆಗೆ ಜಮೆ ಆಗುತ್ತದೆ ಎಂದಿದ್ದರು. ಹೀಗಾಗಿ ಮಹಿಳೆ ತಮ್ಮ ಖಾತೆಯಲ್ಲಿದ್ದ 5.52 ಲಕ್ಷ ಹಣ ವರ್ಗಾವಣೆ ಮಾಡಿದ್ದರು. 

ಇದನ್ನೂ ಓದಿ- ಇಸ್ಲಾಂಗೆ ಮತಾಂತರಗೊಂಡು ಮದುವೆಯಾಗಿದ್ದ ಯುವತಿಗೆ ಮೋಸ.!

ಇತ್ತ ಖದೀಮರು ತಮ್ಮ ಖಾತೆಗೆ ಹಣ ಜಮೆಯಾದ ತಕ್ಷಣ ಕರೆ ಕಟ್ ಮಾಡಿದ್ದಾರೆ. ಮಹಿಳೆ ಎಷ್ಟೇ ಸಂಪರ್ಕಿಸಲು ಪ್ರಯತ್ನಿಸಿದರು ಸಾಧ್ಯವಾಗಿಲ್ಲ. ಇದರಿಂದ ತಾನೂ ಮೋಸ  ಹೋದೆ ಎಂಬುದನ್ನು ಅರಿತ ಮಹಿಳೆ ಆಗ್ನೇಯ ವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News