ಉದ್ಯೋಗದ ಹೆಸರಿನಲ್ಲಿ ಮಹಾ ಮೋಸ: ಯುವಕರೇ ಎಚ್ಚರ! ಎಚ್ಚರ! ಎಚ್ಚರ!

ಅಮಾಯಕರು ಮೊಬೈಲ್ ಸಂದೇಶವನ್ನು ನೋಡಿ ಕರೆಮಾಡಿ ತಗಲಾಕೊಂಡ್ರೆ ಮುಗಿತು, ಖದೀಮರು ನಿಮ್ಮ ಬಳಿ ಹಣ ಪೀಕಲು ಶುರು ಮಾಡ್ತಾರೆ. ಇನ್ನು ವಾಟ್ಸಪ್ ನಲ್ಲಿ ಹೆಚ್ ಎ ಎಲ್  ಶಾಖಾ ವ್ಯವಸ್ಥಾಪಕ ಶಿವಕುಮಾರ್  ಎಂಬ ನಕಲಿ ಹೆಸರಲ್ಲಿ ಮೇಸೇಜ್ ಕಳುಹಿಸಿ ಹರಿಬಿಟ್ಟಿರುವ ಖದೀಮರು.

Written by - Yashaswini V | Last Updated : Feb 23, 2023, 11:40 AM IST
  • ಉದ್ಯೋಗದ ಹೆಸರಲ್ಲಿ ನಕಲಿ ಸಂದೇಶ
  • ಸಂದೇಶ ನಂಬಿ ತಗಲಾಕೊಂಡ್ರೆ ಪಂಗನಾಮ
  • ವಂಚಕರ ಜಾಲಕ್ಕೆ ಸಿಗದಂತೆ ನಿರುದ್ಯೋಗಿಗಳಿಗೆ ಮನವಿ
ಉದ್ಯೋಗದ ಹೆಸರಿನಲ್ಲಿ ಮಹಾ ಮೋಸ: ಯುವಕರೇ ಎಚ್ಚರ! ಎಚ್ಚರ! ಎಚ್ಚರ!  title=
Scam in Name of Govt Jobs

ಬೆಂಗಳೂರು: ಕೊರೋನಾ ನಂತರ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬಹಳಷ್ಟು ಉಲ್ಬಣವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಉದ್ಯೋಗ ಕೊಡಿಸೋದಾಗಿ ವಾಟ್ಸಪ್ ಮೇಸೇಜ್ ಕಳುಹಿಸುವ ಮೂಲಕ ಜನರಿಗೆ ಮಖ್ಮಲ್ ಟೋಪಿ ಹಾಕಲು ಮುಂದಾಗಿದ್ದಾರೆ. 

ಕೆಲವೇ ದಿನಗಳ ಹಿಂದೆ ತುಮಕೂರು ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ ಹೆಚ್ಎಎಲ್ ಹೆಸರನ್ನು ಬಳಸಿ ಕೊಂಡು, ಗುಬ್ಬಿ ಬಳಿಯ ಹೆಚ್ಎಎಲ್ ನಲ್ಲಿ ಐಟಿಐ ನವರಿಗೆ ಕೆಲಸ ಕೊಡಿಸೋದಾಗಿ ಕಳೆದ ಒಂದು ವಾರದಿಂದ  ವಾಟ್ಸಪ್ ಮೂಲಕ ಮೇಸೇಜ್‌ಗಳನ್ನು ವಂಚಕರು ಹರಿಬಿಟ್ಟಿದ್ದಾರೆ. 

ಇದನ್ನೂ ಓದಿ- Surya Mukundaraj : 'ಡಿಕೆ ರವಿ ಲವ್ ಕೇಸ್ ಬೆಳಕಿಗೆ ಬರಲಿಲ್ಲ, ರೋಹಿಣಿ ವಿರುದ್ಧ ದೂರು ದಾಖಲಾಗಲಿಲ್ಲ'

ಅಮಾಯಕರು ಮೊಬೈಲ್ ಸಂದೇಶವನ್ನು ನೋಡಿ ಕರೆಮಾಡಿ ತಗಲಾಕೊಂಡ್ರೆ ಮುಗಿತು, ಖದೀಮರು ನಿಮ್ಮ ಬಳಿ ಹಣ ಪೀಕಲು ಶುರು ಮಾಡ್ತಾರೆ. ಇನ್ನು ವಾಟ್ಸಪ್ ನಲ್ಲಿ ಹೆಚ್ ಎ ಎಲ್  ಶಾಖಾ ವ್ಯವಸ್ಥಾಪಕ ಶಿವಕುಮಾರ್  ಎಂಬ ನಕಲಿ ಹೆಸರಲ್ಲಿ ಮೇಸೇಜ್ ಕಳುಹಿಸಿ ಹರಿಬಿಟ್ಟಿರುವ ಖದೀಮರು, ಮೇಸೇಜ್ ಜೊತೆ ಸಂಪರ್ಕಿಸಿ ಎಂದು 8217861841 ಮತ್ತು 9148494081 ಎರಡು ಮೊಬೈಲ್ ಸಂಖ್ಯೆಗಳನ್ನು ನೀಡಿ ಜನರನ್ನು ವಂಚಿಸುತ್ತಿದ್ದಾರೆ. 

ಮೊದಲಿಗೆ ಕರೆಮಾಡಿದ್ರೆ ಯುವಕರು ಹಣ ಕಟ್ಟುವಂತೆ ಪ್ರೇರೇಪಣೆ ಮಾಡ್ತಾರೆ ಎಂಬ ಆರೋಪವು ಕೇಳಿ ಬಂದಿದೆ. ಸದ್ಯ ಮೊಬೈಲ್ ನಲ್ಲಿ ಹರಿದಾಡುತ್ತಿರುವ ಹೆಚ್ ಎ ಎಲ್ ಹೆಸರಿನ ಸಂದೇಶದ ಎರಡು ದೂರವಾಣಿ ಸಂಖ್ಯೆಗಳು  ಸ್ವಿಚ್ ಆಪ್ ಆಗಿದ್ದು. ಸದ್ಯ ಈ ಬಗ್ಗೆ ಖುದ್ದು ಹೆಚ್ಎಎಲ್ ನಿಂದ ಈ ವಿಚಾರಕ್ಕೆ ಸ್ಪಷ್ಟಣೆ ನೀಡಲಾಗಿದೆ. 

ಇದನ್ನೂ ಓದಿ- ಗಂಡನ ಜೊತೆ ಅಕ್ರಮವಾಗಿ ನೆಲೆಸಿದ್ದ ಪಾಕ್ ಯುವತಿ ಗಡಿಪಾರು : ಪಾಕ್'ಗೆ ಹೋಗಲ್ಲ ಎಂದು ಹೈಡ್ರಾಮ!

ಸರ್ಕಾರ ಅಧಿಸೂಚನೆ ಹೊರಡಿಸದೇ ಹೆಚ್.ಎ.ಎಲ್.ನಲ್ಲಿ ನೇಮಕಾತಿ ನಡೆಯೋಲ್ಲ ಎಂದು ಪತ್ರದ ಮೂಲಕ ಸ್ಪಷ್ಟನೇ ನೀಡಲಾಗಿದೆ. ಇನ್ನು ವಂಚಕರ ಜಾಲಕ್ಕೆ  ಸಿಗದಂತೆ ನಿರುದ್ಯೋಗಿಗಳಿಗೆ ಮನವಿ ಮಾಡಲಾಗಿದೆ. ಅದೇನೆ ಇರಲಿ ನಕಲಿ ಉದ್ಯೋಗದ ಹೆಸರಲ್ಲಿ ಸಂದೇಶ ಹರಿಬಿಟ್ಟವರ ವಿರುದ್ದ ಇದುವರೆಗೂ ಸೈಬರ್ ಕ್ರೈಂ ಪೊಲೀಸರು ಯಾವುದೇ ದೂರು ದಾಖಲಿಸಿ ಕೊಂಡಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News