ನವದೆಹಲಿ: ತನ್ನ ಮುಂಬರುವ ಸಾಕ್ಷ್ಯಚಿತ್ರ ಕಾಳಿಯ ಪ್ರಚಾರದ ಪೋಸ್ಟರ್‌ನಲ್ಲಿ ಕಾಳಿ ದೇವಿಯನ್ನು ಆಕ್ಷೇಪಾರ್ಹವಾಗಿ ಚಿತ್ರಿಸಿರುವ ಬಗ್ಗೆ ಆಕ್ರೋಶ ಭುಗಿಲೆದ್ದಿರುವ ಮಧ್ಯೆಯೇ ಕೆನಡಾ ಮೂಲದ ಭಾರತೀಯ ಚಲನಚಿತ್ರ ನಿರ್ಮಾಪಕಿ ಲೀನಾ ಅವರು ಶಿವ ಮತ್ತು ಪಾರ್ವತಿ ಧೂಮಪಾನ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Malaika Arora: ಡೀಪ್‌ ನೆಕ್‌ ಉಡುಪಿನಲ್ಲಿ ಮಲೈಕಾ ಅರೋರಾ


ಮಧುರೈ ಮೂಲದ ಚಲನಚಿತ್ರ ನಿರ್ಮಾಪಕಿ ಲೀನಾ ನಿರ್ದೇಶನದ ಸಾಕ್ಷ್ಯಚಿತ್ರದ ಪೋಸ್ಟರ್ ಕಾಳಿ ದೇವಿಯ ಚಿತ್ರಣದೊಂದಿಗೆ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿತ್ತು. ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಟ್ವೀಟ್ ಅನ್ನು ದೇಶಾದ್ಯಂತ ಅನೇಕರು ಖಂಡಿಸಿದ್ದರು.  


ವಿವಾದಾತ್ಮಕ ಪೋಸ್ಟರ್ ಅನ್ನು ತೆಗೆದುಹಾಕುವಂತೆ ಪ್ರತಿಭಟನೆಗಳು ಮತ್ತು ಬೇಡಿಕೆಗಳ ನಡುವೆ ಚಲನಚಿತ್ರ ನಿರ್ದೇಶಕಿ ವಿರುದ್ಧ ಹಲವಾರು ಪೊಲೀಸ್ ದೂರುಗಳು ದಾಖಲಾಗಿವೆ. ಈ ವಿವಾದಾತ್ಮಕ ಪೋಸ್ಟರ್‌ ಬಗ್ಗೆ ಮಾತನಾಡಿರುವ ಲೀನಾ ಅವರು, ತಾನು ಬದುಕಿರುವವರೆಗೂ ನಿರ್ಭೀತಿಯಿಂದ ಧ್ವನಿ ಎತ್ತುತ್ತೇನೆ ಎಂದು ಹೇಳಿದ್ದಾರೆ.  ಈ ಎಲ್ಲ ಬೆಳವಣಿಗೆಗಳ ನಡುವೆ ಲೀನಾ ಮತ್ತೊಂದು ಆಕ್ಷೇಪಾರ್ಹ ಫೋಟೋವನ್ನು ಟ್ವೀಟ್‌ ಮಾಡಿದ್ದಾರೆ. 


ಇದನ್ನೂ ಓದಿ: ಬಿಎಸ್ಎನ್ಎಲ್ ಬಳಕೆದಾರರಿಗೆ ಡಬಲ್ ಶಾಕ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.