ಬೆಂಗಳೂರು: ಆನ್‍ಲೈನ್ ಬೆಟ್ಟಿಂಗ್ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ನಕಲಿ ಕಂಪನಿಗಳಿಗೆ ಬಿಸಿ ಮುಟ್ಟಿಸಿರುವ ಜಾರಿ ನಿರ್ದೇಶನಾಲಯ(ED) 5.87 ಕೋಟಿ ರೂ. ಮೊತ್ತದ ಆಸ್ತಿ ಮುಟ್ಟುಗೋಲು ಹಾಕಿದೆ. ಈ ಮೂಲಕ ಜೂಜಾಟದ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಇ.ಡಿ ನಿರ್ಣಾಯಕ ಹೆಜ್ಜೆ ಇಟ್ಟಿದೆ.


COMMERCIAL BREAK
SCROLL TO CONTINUE READING

ಗುಪ್ತಚರ ನಿರ್ದೇಶನಾಲಯದ ಮಹಾ ನಿರ್ದೇಶಕರ ಕಚೇರಿಯಿಂದ ಬಂದ ದೂರಿನನ್ವಯ ಬೆಂಗಳೂರಿನ ವಿವೇಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯಡಿ (PMLA) ವಂಚಕ ಕಂಪೆನಿಗಳ ವಿರುದ್ಧ ತನಿಖೆ ನಡೆಸಲಾಗಿತ್ತು ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.


ಅಕ್ರಮ ಆನ್‌ಲೈನ್ ಜೂಜು, ಬೆಟ್ಟಿಂಗ್ ಮತ್ತು ಅನುಮಾನಾಸ್ಪದ ಚಟುವಟಿಕೆಗಳಲ್ಲಿ ಹಲವಾರು ಕಂಪನಿಗಳು ತೊಡಗಿಸಿಕೊಂಡಿವೆ ಎಂದು ಆರೋಪಿಸಿ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯ (DGGI) ಕಚೇರಿಯಿಂದ ದೂರು ದಾಖಲಾಗಿತ್ತು. ಈ ದೂರಿನನ್ವಯ ಆನ್‌ಲೈನ್‌ ಬೆಟ್ಟಿಂಗ್‌ ಹೆಸರಲ್ಲಿ ಜನರನ್ನು ವಂಚಿಸಿದ್ದ ನಕಲಿ ಕಂಪನಿಗಳು ಮತ್ತು ಆ ಕಂಪನಿಗಳಿಗೆ ಸೇರಿದ ವ್ಯಕ್ತಿಗಳ ಬ್ಯಾಂಕ್‌ ಖಾತೆಯಲ್ಲಿನ 5.87 ಕೋಟಿ ರೂ. ಚರಾಸ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.


ಇದನ್ನೂ ಓದಿ: ಮೋದಿ ಸರ್ಕಾರದಿಂದ ಮುಂದಿನ ತಿಂಗಳು ಹೊಸ ಯೋಜನೆ ಜಾರಿ ! ಯಾರಿಗೆ ಸಿಗಲಿದೆ ಇದರ ನೇರ ಲಾಭ


ಈ ನಕಲಿ ಕಂಪನಿಗಳು ಆನ್ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬಲಿಂಗ್ ಹೆಸರಲ್ಲಿ ಜನರಿಂದ ಹಣ ಸಂಗ್ರಹಿಸಿ ವಂಚಿಸುತ್ತಿದ್ದವು. ಎನ್.ಶ್ಯಾಮಲಾ ಹಾಗೂ ಉಮರ್ ಫಾರುಖ್ ಎಂಬ ವಂಚಕರು ಬೇರೆ ವ್ಯಕ್ತಿಗಳ ದಾಖಲೆ ಪತ್ರಗಳನ್ನು ದುರ್ಬಳಕೆ ಮಾಡಿಕೊಂಡು ವಿವಿಧ ಹೆಸರಿನಲ್ಲಿ ಕಂಪನಿಗಳನ್ನು ತೆರೆದಿದ್ದರು.


ಆರೋಪಿಗಳು ಜನರನ್ನು ವಂಚಿಸುವ ಉದ್ದೇಶದಿಂದಲೇ ರಾಕ್‌ಸ್ಟಾರ್ ಇಂಟರಾಕ್ಟಿವ್, ಇಂಡೀ ವರ್ಲ್ಡ್ ಸ್ಟುಡಿಯೋ, ಫಾಲ್ಕನ್ ಎಂಟರ್‌ಟೈನ್‌ಮೆಂಟ್ ಏಜೆನ್ಸಿಗಳು, ದಿ ನೆಕ್ಸ್ಟ್ ಲೆವೆಲ್ ಟೆಕ್ನಾಲಜಿ, ರಿಫ್ಟ್ ಗೇಮರ್ ಟೆಕ್ನಾಲಜೀಸ್, ರಿಯಾಲಿಟಿ ಕೋಡ್ ಟೆಕ್ನಾಲಜಿ, ಟೆನೆಸ್ ಸೊಲ್ಯೂಷನ್ಸ್, ಎಲೆಕ್ಟ್ರಾನಿಕ್ ವರ್ಚುವಲ್ ಸೊಲ್ಯೂಷನ್ಸ್, ಝಝಾಗೊ ಸಿಸ್ಟಮ್ಸ್, ಝಿಂಗಾ ಇಂಟರಾಕ್ಟಿವ್, ವೇಲ್ ಬೈಟ್ ಇಂಟರಾಕ್ಟಿವ್, ವೇಲ್‌ನಿಂದ ಅನೇಕ ಘಟಕಗಳು ಆಕ್ಯುಲಸ್ ವಾಲ್ವ್ ಎಂಟರ್‌ಟೈನ್‌ಮೆಂಟ್ ಮತ್ತು ನೆಸ್ಟ್ರಾ ವೆಬ್ ಸೊಲ್ಯೂಷನ್‌ಸೇರಿದಂತೆ ಹಲವು ನಕಲಿ ಕಂಪನಿಗಳನ್ನು ತೆರೆದಿದ್ದರು.


ಇದನ್ನೂ ಓದಿ: ವೇತನ ನಿಯಮಗಳಲ್ಲಿ ಬದಲಾವಣೆ ! ಮುಂದಿನ ತಿಂಗಳಿನಿಂದಲೇ ಕೈ ಸೇರುವುದು ಹೆಚ್ಚಿನ ವೇತನ


ನಕಲಿ ಕಂಪನಿಗಳು ಬೆಟ್ಟಿಂಗ್ ಮತ್ತು ಜೂಜಾಟದ ನೆಪದಲ್ಲಿ ಹಣ ಸಂಗ್ರಹಿಸಿ ವಂಚನೆ ಚಟುವಟಿಕೆಗಳಲ್ಲಿ ತೊಡಗಿದ್ದವು. ವಂಚಕರು Bestartech, Khelo24bet, ಮತ್ತು Betinexchangeನಂತಹ ವೆಬ್‌ಸೈಟ್‌ಗಳ ಮೂಲಕ ಜನರಿಗೆ ವಂಚಿಸುತ್ತಿದ್ದರು. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.