ಗುಜರಾತ್‌ನ ಎರಡು ಜಿಲ್ಲೆಗಳಲ್ಲಿ ಕಳ್ಳಭಟ್ಟಿ ಸೇವಿಸಿ ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ ಮತ್ತು 56 ಜನರು ಅಸ್ವಸ್ಥರಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ಸಂಬಂಧ ಹದಿಮೂರು ಜನರನ್ನು ಬಂಧಿಸಿದ ಪೊಲೀಸರು, ಇವರು ಸೇವಿಸಿದ ಕಳ್ಳಭಟ್ಟಿಯಲ್ಲಿ ಮೀಥೈಲ್ ಆಲ್ಕೋಹಾಲ್ ಅಥವಾ ಮೆಥನಾಲ್ - ಕೈಗಾರಿಕಾ ದ್ರಾವಕ - ನೀರಿನೊಂದಿಗೆ ಮಿಶ್ರಣವಾಗಿದೆ ಎಂದು ಹೇಳಿದ್ದಾರೆ. ಈ ರೂಪದಲ್ಲಿ ಆಲ್ಕೋಹಾಲ್ ಹೆಚ್ಚು ವಿಷಕಾರಿಯಾಗಿರುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮೂರನೇ ಸುತ್ತಿನ ವಿಚಾರಣೆಗೆ ಸೋನಿಯಾ ಗಾಂಧಿಗೆ ಇಡಿ ಸಮನ್ಸ್!


ತಿಂಗಳ ಹಿಂದೆಯೇ ಅಕ್ರಮ ಕಳ್ಳಭಟ್ಟಿ ಮಾರಾಟದ ಬಗ್ಗೆ ಪೊಲೀಸರಿಗೆ ಸುಳಿವು ನೀಡಿದ್ದಾಗಿ ಬೊಟಾಡ್ ಜಿಲ್ಲೆಯ ಗ್ರಾಮ ಪಂಚಾಯತ್ ಮುಖ್ಯಸ್ಥರು ತಿಳಿಸಿದ್ದಾರೆ. ಮಂಗಳವಾರ, ಪ್ರಾಥಮಿಕ ತನಿಖೆಗಳು ಬೋಟಾಡ್‌ನ ವಿವಿಧ ಗ್ರಾಮಗಳಲ್ಲಿ ಕಾಳಧನಿಕರನ್ನು ಗುರುತಿಸಿದ್ದು, ಅವರು ಕೈಗಾರಿಕಾ ಘಟಕಗಳಿಂದ ಬರುವ ನೀರನ್ನು ಮೆಥೆನಾಲ್‌ನೊಂದಿಗೆ ಬೆರೆಸಿ ತಯಾರಿಸಿದ ಕಳ್ಳಭಟ್ಟಿಯನ್ನು ಮಾರಾಟ ಮಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಡಿಜಿಪಿ ಆಶಿಶ್ ಭಾಟಿಯಾ, ಸೋಮವಾರ ಎರಡರಿಂದ ಮೂರು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ನಂತರ ಘಟನೆ ಬೆಳಕಿಗೆ ಬಂದಿದೆ, ನಂತರ ಅವರ ಸ್ಥಿತಿ ಹದಗೆಡಲು ಪ್ರಾರಂಭಿಸಿತು. ಮೃತರು ಸೇವಿಸಿದ ಕಳ್ಳಭಟ್ಟಿಯಲ್ಲಿ ಶೇ.99 ರಷ್ಟು ಮೀಥೈಲ್ ಅಲ್ಕೋಹಾಲ್ ಇತ್ತು ಎಂದು ವಿಧಿವಿಜ್ಞಾನ ವರದಿಗಳು ತೋರಿಸಿವೆ ಎಂದು ಹೇಳಿದ್ದಾರೆ.


ಮಂಗಳವಾರದ ವೇಳೆಗೆ ಒಟ್ಟು ಮೃತರ ಸಂಖ್ಯೆ 36, ಅದರಲ್ಲಿ 25 ಬೊಟಾಡ್ ಜಿಲ್ಲೆಯವರು, ಉಳಿದ 11 ಮಂದಿ ಅಹಮದಾಬಾದ್ ಜಿಲ್ಲೆಯ ಹಳ್ಳಿಗಳ ನಿವಾಸಿಗಳು ಎಂದು ತಿಳಿದುಬಂದಿದೆ.


ಇದನ್ನೂ ಓದಿ: ಬಿಜೆಪಿಯ ಒಂದು ವರ್ಷದ ಸಾಧನೋತ್ಸವ ಅಲ್ಲ, ಭ್ರಷ್ಟೋತ್ಸವ: ಸಿದ್ದರಾಮಯ್ಯ


ಈ 13 ಜನರ ವಿರುದ್ಧ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಗುಜರಾತ್ ಗೃಹ ಇಲಾಖೆಯು ಭಾರತೀಯ ಪೊಲೀಸ್ ಸೇವೆಯ ಹಿರಿಯ ಅಧಿಕಾರಿ ಸುಭಾಷ್ ತ್ರಿವೇದಿ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದು, ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಿ ಮೂರು ದಿನಗಳಲ್ಲಿ ವರದಿಯನ್ನು ಸಲ್ಲಿಸಲು ಆದೇಶಿಸಿದೆ ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.