Sonia Gandhi : ಮೂರನೇ ಸುತ್ತಿನ ವಿಚಾರಣೆಗೆ ಸೋನಿಯಾ ಗಾಂಧಿಗೆ ಇಡಿ ಸಮನ್ಸ್!

ಹೆಚ್ಚುವರಿ ನಿರ್ದೇಶಕಿ ಮೋನಿಕಾ ಶರ್ಮಾ ನೇತೃತ್ವದ ತಂಡವು ಸೋನಿಯಾ ಗಾಂಧಿ ಅವರನ್ನು  ವಿಚಾರಣೆ ನಡೆಸುತ್ತಿದೆ. 

Last Updated : Jul 26, 2022, 08:01 PM IST
  • ನ್ಯಾಷನಲ್ ಹೆರಾಲ್ಡ್ ಮನಿ ಲಾಂಡರಿಂಗ್ ಪ್ರಕರಣ
  • ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯವರಿಗೆ ಸಮನ್ಸ್
  • ಮೂರನೇ ಸುತ್ತಿನ ವಿಚಾರಣೆಗೆ ಜುಲೈ 27 ರಂದು
Sonia Gandhi : ಮೂರನೇ ಸುತ್ತಿನ ವಿಚಾರಣೆಗೆ ಸೋನಿಯಾ ಗಾಂಧಿಗೆ ಇಡಿ ಸಮನ್ಸ್! title=

ನವದೆಹಲಿ : ನ್ಯಾಷನಲ್ ಹೆರಾಲ್ಡ್ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಸುತ್ತಿನ ವಿಚಾರಣೆಗೆ ಜುಲೈ 27 ರಂದು ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯವರಿಗೆ ಸಮನ್ಸ್ ನೀಡಿದೆ.

ಇಂದು ಎರಡನೇ ಸುತ್ತಿನ ವಿಚಾರಣೆಗೆ ಸೋನಿಯಾ ಗಾಂಧಿ ಇಡಿ ಮುಂದೆ ಹಾಜರಾಗಿದ್ದರು. ಅವರ ಜೊತೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೂಡ ಇದ್ದರು.

ಇದನ್ನೂ ಓದಿ : Kargil Vijay Diwas: ಸಿಗರೇಟ್‌ ಕೊಟ್ಟಿತ್ತು ಪಾಕ್‌ ನುಸುಳುಕೋರರ ಸುಳಿವು, ಇದು 'ನಾಗರಿಕ ಸೈನಿಕರ' ಕಹಾನಿ

ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ನಿಂದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ ಅಕ್ರಮ ಹಣ ವರ್ಗಾವಣೆ ಕುರಿತು ಇಡಿ ತನಿಖೆ ನಡೆಸುತ್ತಿದೆ, ಈ ಸಂಸ್ಥೆಯಲ್ಲಿ ಸೋನಿಯಾ ಗಾಂಧಿಯವರು ಶೇ. 38 ರಷ್ಟು ಷೇರುಗಳನ್ನು ಹೊಂದಿದ್ದಾರೆ ಮತ್ತು ನಿರ್ದೇಶಕರಾಗಿದ್ದಾರೆ.

ಇಂದು ಮೂರು ಗಂಟೆಗಳ ವಿಚಾರಣೆಯ ನಂತರ ಸೋನಿಯಾ ಗಾಂಧಿ ಅವರಿಗೆ ಊಟದ ವಿರಾಮಕ್ಕೆ ತೆರಳಲು ಅವಕಾಶ ನೀಡಲಾಯಿತು. ಇಡಿ ಅವರಿಗೆ ಸಂಜೆ 4 ಗಂಟೆವರೆಗೆ ವಿಚಾರಣೆ ನಡೆಸಿತು.

ಹೆಚ್ಚುವರಿ ನಿರ್ದೇಶಕಿ ಮೋನಿಕಾ ಶರ್ಮಾ ನೇತೃತ್ವದ ತಂಡವು ಸೋನಿಯಾ ಗಾಂಧಿ ಅವರನ್ನು  ವಿಚಾರಣೆ ನಡೆಸುತ್ತಿದೆ. 

ಇದನ್ನೂ ಓದಿ : Sabarimala: ಸೋರುತಿಹುದು ಶಬರಿಮಲೆ ಗರ್ಭಗುಡಿಯ ಚಿನ್ನದ ಛಾವಣಿ

ಜುಲೈ 21 ರಂದು ಸೋನಿಯಾ ಗಾಂಧಿ ಅವರು ಮಗ ರಾಹುಲ್ ಗಾಂಧಿ ಮತ್ತು ಮಗಳು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಮಧ್ಯಾಹ್ನ 12.10 ರ ಸುಮಾರಿಗೆ ದೆಹಲಿಯ ಇಡಿ ಪ್ರಧಾನ ಕಚೇರಿಗೆ ತಲುಪಿದ್ದರು. ಕೆಲವು ನಿಮಿಷಗಳ ನಂತರ ರಾಹುಲ್ ಗಾಂಧಿ ಇಡಿ ಕಚೇರಿಯಿಂದ ಹೊರಬಂದರು, ಆದರೆ ಪ್ರಿಯಾಂಕಾ ಅಲ್ಲಿಯೇ ಉಳಿದುಕೊಂಡರು.

ಇದಕ್ಕೂ ಮುನ್ನ, ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಯನ್ನು ವಿರೋಧಿಸಿ ಮಂಗಳವಾರ ದೆಹಲಿಯ ವಿಜಯ್ ಚೌಕ್‌ನಲ್ಲಿ ರಾಹುಲ್ ಗಾಂಧಿ ಮತ್ತು ಪಕ್ಷದ ಹಲವಾರು ಸಂಸದರನ್ನು ಪೊಲೀಸರು ಬಂಧಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News