ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು ಬೆಚ್ಚಿಬಿಳಿಸಿದ ಉದ್ಯಮಿ ಪುತ್ರ ಅಖಿಲ್ ಜೈನ್ ಸುಪಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಹುಬ್ಬಳ್ಳಿ - ಧಾರವಾಡ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ತಂದೆಯೇ ಸುಪಾರಿ ನೀಡಿ ಮಗನ ಹತ್ಯೆಗೈಸಿದ್ದಾನೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ನಿರಂತರ ಕಾರ್ಯಾಚರಣೆ ಬಳಿಕ  ನಗರದ ಉದ್ಯಮಿ ಪುತ್ರನ ಶವ ಹೂತಾಕ್ಕಿರುವ ಜಾಗ ಕೊನೆಗೂ ಪತ್ತೆಯಾಗಿತ್ತು. ಇಂದು ಮುಂಜಾನೆ ಶವ ಹೊರತೆಗೆದು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಈ  ಮೂಲಕ ನಗರದ ಕೇಶ್ವಾಪೂರ ಠಾಣೆಯ ಪೊಲೀಸರು ತನಿಖೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ವಾಣಿಜ್ಯ ನಗರಿ ಹುಬ್ಬಳ್ಳಿಯ ಉದ್ಯಮಿ  ಭರತ್‌ ಮಹಾಜನ್‌ ಸೇಠ್‌ (ಜೈನ್) ತನ್ನ ಪುತ್ರನಾದ ಅಖಿಲ್ ಕೊಲೆಗೆ ಹಂತಕರಿಂದ ಸುಪಾರಿ ನೀಡಿದ್ದಾಗಿ ಒಪ್ಪಿಕೊಂಡಿದ್ದಲೆನ್ನಲಾಗಿದ್ದು, ಕೊನೆಗೂ ಅಖಿಲ್ ಮೃತ ದೇಹ ಹೂತಾಕ್ಕಿರುವ ಜಾಗದ ಬಗ್ಗೆ ಮಾಹಿತಿ ನೀಡಿದ್ದನು. ಕೊನೆಗೂ ಹುಬ್ಬಳ್ಳಿ ಪೊಲೀಸರು ಮೃತ ದೇಹವನು ಹೋತಾಕಿದ್ದ ಜಾಗವನ್ನು ಮಂಗಳವಾರ (ಡಿ.06) ಪತ್ತೆ ಹಚ್ಚಿದ್ದರು.  ಆದರೆ, ನಿನ್ನೆ ಕತ್ತಲಾದ ಕಾರಣ ಶವವನ್ನು ಹೊರ ತಗೆದಿರಲಿಲ್ಲ. ಇಂದು (ಬುಧವಾರ) ಬೆಳಗ್ಗೆ, ತಹಶೀಲ್ದಾರ, ಎಸಿ ಸಮ್ಮುಖದಲ್ಲಿ ಹೂತು ಹಾಕಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.   Crime News: ಪ್ರೇಮಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ..!


ಪುತ್ರನ ಕಿರುಕುಳ ತಾಳಲಾರದೆ ಹತ್ಯೆಗೆ ಸುಪಾರಿ ನೀಡಿದ್ದ ತಂದೆ:
ಉದ್ಯಮಿ ಭರತ್ ಜೈನ್ ತನ್ನ ಪುತ್ರನ ಕಿರುಕುಳ, ರಂಪಾಟ ತಾಳಲಾರದೆ 10 ಲಕ್ಷ ರೂಪಾಯಿಗೆ ಕೊಲೆಗೆ ಸುಫಾರಿ ನೀಡಿದ್ದ ಎಂಬುದು ತಿಳಿದು ಬಂದಿದ್ದು, ಅದರಂತೆ ಸುಫಾರಿ ಹಂತಕರು ಕೊಲೆ ಮಾಡಿ ಶವವನ್ನು ಎಲ್ಲಿ ಹೂತು ಹಾಕಿದ್ದರು. ಆದರೆ ಶವವನ್ನು ಎಲ್ಲಿ ಹೂತಿದ್ದರು ಎಂಬುದು ಸ್ಪಷ್ಟವಾಗಿ ಗೊತ್ತಿರಲಿಲ್ಲ. ಆದರೇ ತನಿಖೆ ಚುರುಕುಗೊಳಿಸಿದ ಪೊಲೀಸರು ಕೊನೆಗೆ ಅಖಿಲ್ ಶವ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.   


ಇದನ್ನೂ ಓದಿ- ಚಿಕ್ಕಬಳ್ಳಾಪುರ ASI ಮನೆಗೆ ನುಗ್ಗಿ ಶೂಟೌಟ್ ಮಾಡಿ ದರೋಡೆ ಪ್ರಕರಣ : ಆರೋಪಿಗಳ ಬಂಧನ


ಕೊಲೆ ಕೇಸ್ ಗೆ  ಸಂಬಂಧಿಸಿದಂತೆ ತಂದೆ ಭರತ್ ಜೈನ್ ಸೇರಿ ಐವರ ವಿರುದ್ದ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ತಂದೆ ಭರತ್ ಜೈನ್ ಸೇರಿ ಇಬ್ಬರನ್ನು ವಶಕ್ಕೆ ಪಡೆದಿದ್ದು, ಇನ್ನುಳಿದ ಸುಫಾರಿ ಹಂತಕರಿಗೆ ಶೋಧ ಕಾರ್ಯ ‌ಮುಂದುವರೆದಿದೆ.‌


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.