ತಮ್ಮನ ಸಂಸಾರ ಸರಿಪಡಿಸಲು ಹೋಗಿ ಹೆಣವಾದ ಅಣ್ಣ!

ತಮ್ಮನ ಸಂಸಾರ ಸರಿಪಡಿಸಲು ಮುಂದಾಗಿದ್ದ ಅಣ್ಣನನ್ನ ಸಂಬಂಧಿಕರೇ ಹತ್ಯೆ ಮಾಡಿರುವ ಘಟನೆ ಜೆ.ಜೆ.ನಗರದಲ್ಲಿ‌ ನಡೆದಿದೆ. ಈ ಸಂಬಂಧ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

Written by - VISHWANATH HARIHARA | Edited by - Manjunath N | Last Updated : Nov 29, 2022, 08:14 PM IST
  • ಹತ್ಯೆಯಾದ ಇಮಾಯುನ್ ಜೀವನಕ್ಕಾಗಿ ಸ್ಕ್ರಾಪ್ ಬಿಸೆನೆಸ್ ಮಾಡುತ್ತಿದ್ದ
  • ಈತನ ಸಹೋದರ ಜಾವೀದ್ ಗೆ ನಾಲ್ಕು ತಿಂಗಳ ಹಿಂದೆ ಮುಸ್ಕಾನ್ ಎಂಬಾಕೆಯೊಂದಿಗೆ ಶಾದಿಯಾಗಿತ್ತು‌‌‌
  • ಕೌಟುಂಬಿಕ ಕಾರಣಗಳಿಂದಾಗಿ ಗಂಡ-ಹೆಂಡತಿ ದೂರವಾಗಿದ್ದರು
ತಮ್ಮನ ಸಂಸಾರ ಸರಿಪಡಿಸಲು ಹೋಗಿ ಹೆಣವಾದ ಅಣ್ಣ! title=

ಬೆಂಗಳೂರು: ತಮ್ಮನ ಸಂಸಾರ ಸರಿಪಡಿಸಲು ಮುಂದಾಗಿದ್ದ ಅಣ್ಣನನ್ನ ಸಂಬಂಧಿಕರೇ ಹತ್ಯೆ ಮಾಡಿರುವ ಘಟನೆ ಜೆ.ಜೆ.ನಗರದಲ್ಲಿ‌ ನಡೆದಿದೆ. ಈ ಸಂಬಂಧ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಜೆ.ಜೆ.ನಗರ ನಿವಾಸಿ ಇಮಾಯುನ್ ಮೃತ ದುರ್ದೈವಿಯಾಗಿದ್ದಾನೆ.ಕೊಲೆ ಆರೋಪದಡಿ ಸೈಯ್ಯದ್ ಫಸಲ್, ಸೈಯ್ಯದ್ ಅಸ್ಮತ್ ಸೇರಿ ನಾಲ್ವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ‌.

ಇದನ್ನೂ ಓದಿ: Siddaramiah Biopic: ತೆರೆ ಮೇಲೆ ಸಿದ್ದರಾಮಯ್ಯ ಬಯೋಪಿಕ್: ಸಿದ್ದು ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ತಮಿಳಿನ ಈ ನಟ!

ಹತ್ಯೆಯಾದ ಇಮಾಯುನ್ ಜೀವನಕ್ಕಾಗಿ ಸ್ಕ್ರಾಪ್ ಬಿಸೆನೆಸ್ ಮಾಡುತ್ತಿದ್ದ.ಈತನ ಸಹೋದರ ಜಾವೀದ್ ಗೆ ನಾಲ್ಕು ತಿಂಗಳ ಹಿಂದೆ ಮುಸ್ಕಾನ್ ಎಂಬಾಕೆಯೊಂದಿಗೆ ಶಾದಿಯಾಗಿತ್ತು‌‌‌. ಕೌಟುಂಬಿಕ ಕಾರಣಗಳಿಂದಾಗಿ ಗಂಡ-ಹೆಂಡತಿ ದೂರವಾಗಿದ್ದರು.ಈ ಮಧ್ಯೆ ತಮ್ಮನ ಸಂಸಾರ ಸರಿಪಡಿಸಲು ಮುಂದಾಗಿದ್ದ ಇಮಾಯುನ್, ನಿನ್ನೆ ಮಧ್ಯಾಹ್ನ ಮುಸ್ಕಾನ್ ಮನೆಗೆ ಹೋಗಿದ್ದ.ಈ ವೇಳೆ ಮುಸ್ಕಾನ್ ಸಹೋದರರು ಜೊತೆಗಿದ್ದರು‌‌. ರಾಜಿ ಮಾತುಕತೆ ವೇಳೆ ನಡೆದ ಮಾತಿನ ಚಕಮಕಿ ತಾರಕ್ಕಕೇರಿದೆ. ಮುಸ್ಕಾನ್ ಸಹೋದರರು ಹಾಗೂ ಇಮಾಯುಲ್ ಸಹೋದರರ ನಡುವೆ ಗಲಾಟೆಯಾಗಿದೆ‌.

ಇದನ್ನೂ ಓದಿ: ಕರುನಾಡಿನ ಕಿಚ್ಚ ಈಗ ಸಮಂತಾ ಜೊತೆ ಡ್ಯೂಯಟ್ ಹಾಡಲು ಫುಲ್ ರೆಡಿ!

ಈ ವೇಳೆ ಜಾವೀದ್ ಗೆ ಕಬ್ಬಿಣದ ರಾಡ್ ಗಳಿಂದ ಹಲ್ಲೆ ಮಾಡಿದ್ದರು‌. ಹಲ್ಲೆ ತಡೆಯಲು ಮುಂದಾದ  ಇಮಾಯುನ್ ಎದೆಗೆ ಜೋರಾಗಿ ಗುದ್ದಿದ್ದಾರೆ. ಮೊದಲೇ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಇಮಾಯುನ್ ಏಕಾಏಕಿ‌ ಕುಸಿದು ಬಿದ್ದಿದ್ದಾನೆ‌‌.‌ ಕೂಡಲೇ ಸಮೀಪದ‌ ಆಸ್ಪತ್ರೆಗೆ ಕರೆದೊಯ್ದರೂ ಸಹ ಆತ ಮೃತಪಟ್ಟಿದ್ದಾನೆ.ನ್ನೂ ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News