ಖ್ಯಾತ ಹಾಸ್ಯನಟನಿಗೆ ಸಂಕಷ್ಟ ತಂದ ಒಪ್ಪಂದ: 7 ವರ್ಷಗಳ ಬಳಿಕ ವಿದೇಶದಲ್ಲಿ ಕೇಸ್ ದಾಖಲು
ಹಾಸ್ಯನಟ ಕಪಿಲ್ ಶರ್ಮಾ ವಿರುದ್ಧ ಸದ್ಯ ಕೇಸ್ ದಾಖಲಾಗಿರೋದು ವಿದೇಶದಲ್ಲಿ. ಹೊರ ದೇಶಗಳಲ್ಲೂ ಅನೇಕ ಕಾಮಿಡಿ ಶೋಗಳನ್ನು ನಡೆಸುವ ಕಪಿಲ್, ಒಪ್ಪಂದ ಮಾಡಿಕೊಂಡು ಕಾರ್ಯಕ್ರಮವನ್ನು ನಡೆಸಿಲ್ಲ ಎಂಬ ಆರೋಪವನ್ನು ಹೊತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಹಿಂದಿ ಮನರಂಜನಾ ಕ್ಷೇತ್ರಗಳಲ್ಲಿ ಸಖತ್ ಹೆಸರುವಾಸಿಯಾಗಿರುವ ಕಪಿಲ್ ಶರ್ಮಾ ಇದೀಗ ಹೊಸ ವಿವಾದವೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಆಗಾಗ್ಗೆ ಕೆಲ ಸಣ್ಣ ಪುಟ್ಟ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳೋ ಇವರು ಈ ಬಾರಿ ಭಾರೀ ಪ್ರಮಾಣದಲ್ಲಿ ಸಮಸ್ಯೆಗೆ ಸಿಲುಕಿದ್ದಾರೆ.
ಹಾಸ್ಯನಟ ಕಪಿಲ್ ಶರ್ಮಾ ವಿರುದ್ಧ ಸದ್ಯ ಕೇಸ್ ದಾಖಲಾಗಿರೋದು ವಿದೇಶದಲ್ಲಿ. ಹೊರ ದೇಶಗಳಲ್ಲೂ ಅನೇಕ ಕಾಮಿಡಿ ಶೋಗಳನ್ನು ನಡೆಸುವ ಕಪಿಲ್, ಒಪ್ಪಂದ ಮಾಡಿಕೊಂಡು ಕಾರ್ಯಕ್ರಮವನ್ನು ನಡೆಸಿಲ್ಲ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Palmistry: ಬೆರಳುಗಳ ನಡುವಿನ ಇಂತಹ ಅಂತರವು ದುರದೃಷ್ಟವನ್ನು ಸೂಚಿಸುತ್ತದೆ!
ಒಪ್ಪಂದದ ಉಲ್ಲಂಘನೆಯ ಆರೋಪ:
ಕಪಿಲ್ ಶರ್ಮಾ ತಮ್ಮ ಸಹ ಕಲಾವಿದರೊಂದಿಗೆ ಕೆನಡಾದಲ್ಲಿ ಕಾಮಿಡಿ ಶೋ ನಡೆಸಲು ತೆರಳಿದ್ದಾರೆ. ಆದರೆ ಇವರ ಮೇಲೆ ಕೇಸ್ ದಾಖಲಾಗಿದ್ದು, ಉತ್ತರ ಅಮೆರಿಕಾದಲ್ಲಿ. ಇನ್ನೊಂದು ವಿಷಯ ಏನೆಂದರೆ, ಈ ಆಪಾದನೆ ಇಂದಿನದ್ದಲ್ಲ. 2015ರಲ್ಲಿ ಅಂದರೆ 7 ವರ್ಷಗಳ ಹಿಂದೆ ಉತ್ತರ ಅಮೆರಿಕಾದಲ್ಲಿ ಶೋ ನೆರವೇರಿಸುವುದಾಗಿ ಮಾಡಿಕೊಂಡ ಒಪ್ಪಂದವನ್ನು ಅವರು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಪಗೊಂಡ ಆಯೋಜಕರು ಇವರ ವಿರುದ್ಧ ದೂರು ದಾಖಲಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಎಸ್‌ಎಐ ಯುಎಸ್‌ಎ ಐಎನ್‌ಸಿ (SAI USA INC) ಸಂಸ್ಥೆಯು ಕಪಿಲ್ ಶರ್ಮಾ ವಿರುದ್ಧ ಕೇಸ್ ದಾಖಲಿಸಿದೆ. 2015ರಲ್ಲಿ ಉತ್ತರ ಅಮೇರಿಕಾ ಪ್ರವಾಸ ಕೈಗೊಂಡಿದ್ದ ಸಮಯದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಲ್ಲಿ ಆರು ಒಪ್ಪಂದಗಳಿದ್ದು, ಅದಕ್ಕೆ ಸಹಿಯನ್ನು ಹಾಕಿ ಹಣವನ್ನು ಸಹ ಪಡೆದಿದ್ದರು. ಆ ಒಪ್ಪಂದಗಳ ಪೈಕಿ ಒಂದರಲ್ಲಿ ಕಪಿಲ್ ಶರ್ಮಾ ಕಾರ್ಯಕ್ರಮ ನಡೆಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೇಸ್ ದಾಖಲಿಸಿದ್ದೇವೆ ಎಂದು ಅಮೇರಿಕಾದಲ್ಲಿ ಕಾರ್ಯಕ್ರಮಗಳ ಪ್ರಸಿದ್ಧ ಪ್ರವರ್ತಕರಾದ ಅಮಿತ್ ಜೇಟ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಮುಖದ ಈ ಭಾಗದಲ್ಲಿ ಮಚ್ಚೆ ಇದ್ರೆ ಐಷಾರಾಮಿ ಜೀವನ ಗ್ಯಾರಂಟಿ!
ಅಷ್ಟೇ ಅಲ್ಲದೆ, ಅದಕ್ಕೆ ಪಾವತಿಸಿದ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ ಹಾಸ್ಯನಟ ಕಪಿಲ್ ಇಲ್ಲಿಯವರೆಗೆ ದುಡ್ಡು ಹಿಂದಿರುಗಿಸಿಲ್ಲ. ಜೊತೆಗೆ ಈ ಸಂಬಂಧ ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ. ನ್ಯಾಯಾಲಯದ ಮೊರೆ ಹೋಗುವ ಮುನ್ನ ಹಲವು ಬಾರಿ ಅವರ ಜತೆ ಮಾತನಾಡಲು ಪ್ರಯತ್ನಿಸಿದರೂ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಈ ವಿಷಯ ಇನ್ನೂ ನ್ಯೂಯಾರ್ಕ್ ಕೋರ್ಟ್‌ನಲ್ಲಿದ್ದು, ಈಗ ಕಪಿಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜೇಟ್ಲಿ ತಿಳಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.