ಬೆಂಗಳೂರು: ಕಂಪನಿ ವೆಬ್ ಸೈಟ್ ಡೇಟಾ ಅಳಿಸಿ ಹೋಗಿ ಲಕ್ಷಾಂತರ ರೂಪಾಯಿ ನಷ್ಟಕ್ಕೆ ಕಾರಣವಾಗಿದ್ದ ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿ ಸುಲಿಗೆ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಕಿಡ್ನ್ಯಾಪ್ ಒಳಗಾದ ಅಜಯ್ ಪಾಂಡೆ ಎಂಬಾತ ದೂರು ನೀಡಿದ ಮೇರೆಗೆ ಚೈತನ್ಯ ಶರ್ಮಾ, ವೈಭವ್ ಹಾಗೂ ಅಮಿತ್ ಎಂಬಾತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ‌. ಪ್ರಕರಣದಲ್ಲಿ ನಾಲ್ವರು  ತಲೆಮರೆಸಿಕೊಂಡಿದ್ದಾರೆ‌.


ಇದನ್ನೂ ಓದಿ- Crime: ದಿನದ ಖರ್ಚಿಗೆ ಹಣ ಬೇಕು: ಈತ ಮಾಡಿದ್ದೇನು ಗೊತ್ತಾ.!?


ಆರೋಪಿಗಳ ಪೈಕಿ ಚೈತನ್ಯ ಬಾಣಸವಾಡಿಯಲ್ಲಿ ಲ್ಯಾಂಪ್ಸ್ ಕಾರ್ಟ್ ಕಂಪನಿಯ ಮಾಲೀಕನಾಗಿದ್ದ. ಉದ್ಯಮಕ್ಕೆ ವೆಬ್ ಸೈಟ್ ಸಿದ್ದಪಡಿಸುವಂತೆ ಅಜಯ್ ಪಾಂಡೆಗೆ ಸೂಚಿಸಿದ್ದ. ಇದರಂತೆ ಪಾಂಡೆ ವೆಬ್ ಡಿಸೈನ್ ಮಾಡಿಕೊಟ್ಟಿದ್ದ‌.‌‌ ಒಂದು ವರ್ಷ ತರುವಾಯ ನವೀಕರಣ ಹಾಗೂ ವೆಬ್ ನಿರ್ವಹಣೆಗಾಗಿ ಚೈತನ್ಯಗೆ ಹೆಚ್ಚುವರಿ ಹಣ ಕೇಳಿದ್ದ. ಆದರೆ ಹಣ ಚೈತನ್ಯ ಕೊಟ್ಟಿರಲಿಲ್ಲ. ಇದರಿಂದ ಅಸಮಾನಧಾನಗೊಂಡು ವೆಬ್ ಸೈಟ್ ನಲ್ಲಿರುವ ಡೇಟಾ ಅಳಿಸಿ ಕಂಪ್ಲೀಟ್ ಶಟ್ಡೌನ್ ಆಗುವಂತೆ ಪಾಂಡೆ ನೋಡಿಕೊಂಡಿದ್ದ. ಇದರಿಂದ ವ್ಯವಹಾರದಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಚೈತ್ಯನ ಕೆಂಡಕಾರಿದ್ದ. ಅಲ್ಲದೆ‌ ಒಂದು ವರ್ಷಗಳಿಂದ ಪಾಂಡೆ ದೂರ ಸರಿದಿದ್ದ. ವಾಮಮಾರ್ಗದಿಂದ  ಪಾಂಡೆಯನ್ನ ಸಂಪರ್ಕಿಸಿದ್ದ ಆರೋಪಿಗಳು ಏಪ್ರಿಲ್ 23ರಂದು ಯಲಹಂಕದ ಬಿಬಿ ರಸ್ತೆಗೆ ಕರೆಸಿಕೊಂಡಿದ್ದಾರೆ. ನಷ್ಟದ ಹಣ ವಸೂಲಿಗೆ ಕಿಡ್ನ್ಯಾಪ್ ದಾರಿ ಕಂಡುಕೊಂಡಿದ್ದ ಆರೋಪಿಗಳು ಪಾಂಡೆಯನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಹಣ ನೀಡುವಂತೆ ಬೆದರಿಸಿದ್ದಾರೆ.


ಇದನ್ನೂ ಓದಿ- ಲವ್ ಮಾಡಲ್ಲ ಎಂದ ಯುವತಿ ಮೇಲೆ ಆಸಿಡ್ ಎರಚಿದ ಪಾಗಲ್ ಪ್ರೇಮಿ


ಪರಿಚಿತ ವ್ಯಕ್ತಿಯಿಂದ 6.35 ಲಕ್ಷ ಬಲವಂತವಾಗಿ ವರ್ಗಾಯಿಸಿಕೊಂಡು ಪಿಸ್ತೂಲ್ ತೋರಿಸಿ ಬೆದರಿಸಿ ಹಣ ವಸೂಲಿ ಮಾಡಲಾಗಿದೆ ಎಂದು ಆರೋಪಿಸಿ ಪಾಂಡೆ‌ ಠಾಣೆ ಮೆಟ್ಟಿಲೇರಿದ್ದ.‌ ಪ್ರಕರಣ ದಾಖಲಿಸಿಕೊಂಡ ಯಲಹಂಕ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಆರೋಪಿಗಳು  ಪಿಸ್ತೂಲ್ ಬಳಕೆಯಾಗಿದೆಯಾ ಎಂಬುದರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.