ಬೆಂಗಳೂರು: ಲೋಕಾಯುಕ್ತ ಮರುಸ್ಥಾಪನೆಯಿಂದಾಗಿ ಎಸಿಬಿಯಲ್ಲಿರುವ ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಅತಂತ್ರ ಸ್ಥಿತಿಯಲ್ಲಿದ್ದಾರೆ. ಸದಾ ತನಿಖೆ ವಿಚಾರಣೆ ಅಂತಾ ಕರ್ತವ್ಯದಲ್ಲಿರುತ್ತಿದ್ದ ಅಧಿಕಾರಿಗಳಿಗೆ ಕೆಲಸವೇ ಇಲ್ಲದಂತಾಗಿದೆ. ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಲೋಕಾಯುಕ್ತಕ್ಕೂ ಅಧಿಕಾರಿಗಳನ್ನು ವರ್ಗಾಯಿಸದೆ ಬೇರೆ ಸೇವೆಗೆ ನಿಯೋಜಿಸದೆ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. 


COMMERCIAL BREAK
SCROLL TO CONTINUE READING

ದಲಾಯತ್, ಲಿಪಿಕ ಸಿಬ್ಬಂದಿ‌ ಹುದ್ದೆಗಳು ಹೊರತುಪಡಿಸಿದರೆ ಒಟ್ಟು ಎಸಿಬಿಯಲ್ಲಿ 452 ಕಾರ್ಯಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದಾರೆ. ಕಳೆದ ಆಗಸ್ಟ್ 26 ರಂದು ಎಲ್ಲಾ‌ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸುವಂತೆ‌ ಎಸಿಬಿಗೆ ಸರ್ಕಾರ ಆದೇಶಿಸಿತ್ತು. ಇದರಂತೆ ರಾಜ್ಯದ ಎಲ್ಲಾ ಎಸಿಬಿ ಜಿಲ್ಲಾ ವಿಭಾಗಗಳಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿತ್ತು. ಬೆಂಗಳೂರು ನಗರದಲ್ಲಿ ದಾಖಲಾಗಿರುವ ಕೇಸ್ ಗಳನ್ನ ಹಸ್ತಾಂತರ ಪ್ರಕ್ರಿಯೆ ಪೂರ್ಣವಾಗಬೇಕಿದೆ. 


ಇದನ್ನೂ ಓದಿ : Shriya bold look : ಬ್ಯಾಕ್‌ಲೆಸ್ ಪೋಸ್‌ನಲ್ಲಿ​ ʻಕಬ್ಜʼ ಸುಂದರಿ ಶ್ರೀಯಾ ಶರಣ್


ಇನ್ನೂ ಲೋಕಾಯುಕ್ತಕ್ಕೆ ಫುಲ್‌ ಪವರ್‌ ಬಂದ ಮೇಲೆ ದೂರುಗಳು ಸಂಖ್ಯೆ ದಿನೇ‌ ದಿನೇ ಏರಿಕೆಯಾಗುತ್ತಿದ್ದು, ಪ್ರಕರಣಗಳನ್ನು ತನಿಖೆ ನಡೆಸಬೇಕಿದೆ.  ಇತ್ತ ಎಸಿಬಿಯಲ್ಲಿ ಕೆಲಸವಿಲ್ಲದೇ ಸಿಬ್ಬಂದಿ ಅಧಿಕಾರಿ ವರ್ಗ ಕಾಲಕಳೆಯುವಂತಾಗಿದೆ. 


ಇನ್ನೂ ಎಸಿಬಿಯಲ್ಲಿರುವ ಅಧಿಕಾರಿ-ಸಿಬ್ಬಂದಿ ಹಾಗೂ ಕಚೇರಿ ಸೇರಿ ವಿವಿಧ ಸೌಕರ್ಯಗಳನ್ನ ಯಥಾವತ್ ನೀಡುವಂತೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಪತ್ರ ಬರೆದರು ಸಹ ಸರ್ಕಾರ ಗಮನಹರಿಸಿಲ್ಲ. ಲೋಕಾಯುಕ್ತ ಹಾಗೂ ರದ್ದುಗೊಂಡಿರುವ ಎಸಿಬಿಯು ಸಿಬ್ಬಂದಿ ಆಡಳಿತ ಸೇವಾ ಸುಧಾರಣೆ ಇಲಾಖೆ ವ್ಯಾಪ್ತಿಗೆ ಬರಲಿದೆ.


ಎಸಿಬಿ ರದ್ದುಗೊಂಡರೂ‌ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿ ಬೇರೆ ಕಡೆ ನಿಯೋಜಿಸುವ ಗೋಜಿಗೆ ಇಲಾಖೆ ಹೋಗಿಲ್ಲ. ಈ ಬಗ್ಗೆ ಗಮನಹರಿಸಬೇಕಾದ ಸಿಎಂ, ಗೃಹ ಸಚಿವರು ಹಾಗೂ ಸಂಬಂಧಿಸಿದ ರಾಜ್ಯ ಮುಖ್ಯಕಾರ್ಯದರ್ಶಿಗಳು ಈ ಬಗ್ಗೆ ಒಮ್ಮೆಯೂ ಸಭೆ ನಡೆಸಿಲ್ಲ. 


ಇದನ್ನೂ ಓದಿ : Mysuru Dasara 2022: ಮೈಸೂರು ಅರಮನೆಯಲ್ಲಿ ಆಯುಧ ಪೂಜೆ, ಖಾಸಗಿ ದರ್ಬಾರ್ ಸಂಭ್ರಮ


ಇತ್ತ ಎಸಿಬಿಯಲ್ಲಿರುವ ಐಪಿಎಸ್ ಅಧಿಕಾರಿಗಳು, ಡಿವೈಎಸ್ಪಿ, ಇನ್ಸ್‌ಪೆಕ್ಟರ್‌ಗಳನ್ನ ಮರುನಿಯುಕ್ತಿಗೊಳಿಸುವುದೇ ಸರ್ಕಾರಕ್ಕೆ ಸವಾಲಾಗಿದೆ. ಹಿರಿತನ ಅಥವಾ ಗ್ರೇಡ್ ಆಧಾರದ ಮೇಲೆ ಹುದ್ದೆಗೆ  ನಿಯೋಜಿಸಬೇಕಿದೆ. ಬೆರಳಣಿಕೆಯಷ್ಟು ಹುದ್ದೆಗೆ ಹೊರತುಪಡಿಸಿ ಬಹುತೇಕ ಕಡೆಗಳಲ್ಲಿ ಪೂರ್ಣ‌ ಪ್ರಮಾಣದಲ್ಲಿ ಅಧಿಕಾರಿಗಳಿದ್ದಾರೆ. ಲೋಕಾಯುಕ್ತಕ್ಕೆ ಕೆಲವು ಅಧಿಕಾರಿ ಸಿಬ್ಬಂದಿಯನ್ನ ವರ್ಗಾಯಿಸಬಹುದು. ಇನ್ನುಳಿದ ಸಿಬ್ಬಂದಿಯನ್ನು ಬೇರೆ ಕಡೆ ನಿಯೋಜಿಸಬೇಕಿದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಖಾಲಿ ಕೂತಿರುವ ಎಸಿಬಿ ಅಧಿಕಾರಿಗಳಿಗೆ ಜವಬ್ದಾರಿ ನೀಡಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.