Mysuru Dasara 2022 : ಮೈಸೂರು ಅರಮನೆಯಲ್ಲಿ ಇಂದು ರಾಜ ಪರಂಪರೆ ಸಂಪ್ರದಾಯದಂತೆ ಆಯುಧ ಪೂಜೆ ನೆರವೇರಿಸಲಾಯಿತು.
Mysuru Dasara 2022: ಮೈಸೂರು ಅರಮನೆಯಲ್ಲಿ ಇಂದು ರಾಜ ಪರಂಪರೆ ಸಂಪ್ರದಾಯದಂತೆ ಆಯುಧ ಪೂಜೆ ನೆರವೇರಿಸಲಾಯಿತು. ಪ್ರಾತಃಕಾಲ 5.30 ರಿಂದ ಆರಂಭಗೊಂಡ ಪೂಜಾ ಕೈಂಕರ್ಯಗಳು, ಮಧ್ಯಾಹ್ನ 1 ಗಂಟೆ ವರೆಗೂ ನೆರವೇರಿತು. ಅರಮನೆಯ ಆವರಣದಲ್ಲಿ ಆಯುಧ ಪೂಜೆ ನಡೆಯಿತು.
ಮೈಸೂರು ಅರಮನೆಯಲ್ಲಿ ಇಂದು ರಾಜ ಪರಂಪರೆ ಸಂಪ್ರದಾಯದಂತೆ ಆಯುಧ ಪೂಜೆ ನೆರವೇರಿಸಲಾಯಿತು.
ಪ್ರಾತಃಕಾಲ 5.30 ರಿಂದ ಆರಂಭಗೊಂಡ ಪೂಜಾ ಕೈಂಕರ್ಯಗಳು, ಮಧ್ಯಾಹ್ನ 1 ಗಂಟೆ ವರೆಗೂ ನೆರವೇರಿತು. ಅರಮನೆಯ ಆವರಣದಲ್ಲಿ ಆಯುಧ ಪೂಜೆ ನಡೆಯಿತು.
ಚಿನ್ನಲೇಪಿತ ಪಲ್ಲಕ್ಕಿಯಲ್ಲಿ ಬಂದ ಆಯುಧಗಳಿಗೆ ಪೂಜೆ ಮಾಡಲಾಯಿತು. ಮೊದಲು ಸಾಲಿಗ್ರಾಮ ಪೂಜೆ, ಪಟ್ಟದ ಖಡ್ಗ, ಪಿಸ್ತೂಲು ಸೇರಿದಂತೆ ಅರಮನೆಯ ಆಯುಧಗಳಿಗೆ ಪೂಜೆ ಮಾಡಿದರು.
ಚಿನ್ನಲೇಪಿತ ಪಲ್ಲಕ್ಕಿಯಲ್ಲಿ ಕೊಂಡೊಯ್ದು ಪುರಾತನ ಬಾವಿಯ ಗಂಗೆಯಿಂದ ಶುಚಿ ಮಾಡಿದರು. ಬಳಿಕ ಕೋಡಿ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧ ಪೂಜೆ ಮತ್ತು ಖಾಸಗಿ ದರ್ಬಾರ್ ನಡೆಸಿದರು. ರಾಜಪುರೋಹಿತರ ಮಾರ್ಗದರ್ಶನದಂತೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಿದರು.
ಪಟ್ಟದ ಆನೆ, ಫಟ್ಟದ ಕುದುರೆ, ಪಟ್ಟದ ಒಂಟೆ, ಪಟ್ಟದ ಹಸುಗಳು, ಅರಮನೆಯಲ್ಲಿರುವ ಐಷಾರಾಮಿ ಕಾರು ಮತ್ತು ಇತರೆ ವಾಹನಗಳಿಗೂ ಪೂಜೆ ಸಲ್ಲಿಸಿದರು.