ಬೆಂಗಳೂರು : ಮಹಿಳಾ ಪಿಜಿಯೊಂದರಲ್ಲಿ ವಾಸವಾಗಿರುವ ಯುವತಿಯರ ನಗ್ನ ದೃಶ್ಯಗಳನ್ನು ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನ ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಾಂಡಿಚೇರಿ ಮೂಲದ ನಿರಂಜನ್ ಬಂಧಿತ ಆರೋಪಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Infant inside school toilet :ಶಾಲೆಯ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆ!


ಎಚ್ಎಸ್ಆರ್ ಲೇಔಟ್ ನ ಪಿ.ಜಿಯೊಂದರಲ್ಲಿ ವಾಸವಿದ್ದ ಆರೋಪಿ ಪಕ್ಕದಲ್ಲೇ ಇದ್ದ ಮಹಿಳಾ ಪಿಜಿಯ ಬಾತ್ ರೂಮಿನಲ್ಲಿ ಮೊಬೈಲ್ ಇಟ್ಟು ವೀಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಬಳಿಕ ಯುವತಿಯರ ಮೊಬೈಲ್‌ಗೆ ಅನಾಮಧೇಯ ಸಂದೇಶ ಕಳುಹಿಸಿ ಲೈಂಗಿಕ ಶೋಷಣೆ ನೀಡುತ್ತಿದ್ದ. 


ಈ ಬಗ್ಗೆ ನೊಂದ ಯುವತಿಯೊಬ್ಬಳು ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರ ತಂಡ ಯುವತಿಯ ಸೋಗಿನಲ್ಲಿ ತಾವೇ ಆರೋಪಿಗೆ ಸಂದೇಶ ಕಳುಹಿಸಿ ಬಳಿಕ ಆತನನ್ನ ಬಂಧಿಸುವಲ್ಲಿ  ಯಶಸ್ವಿಯಾಗಿದೆ.


ಇದನ್ನೂ ಓದಿ :  Viral Video: ಕೋಳಿ ಕದಿಯುವ ಈ ತಾತನ ಸ್ಪೀಡ್ ನೋಡಿ ನೀವೂ ಕೂಡ ದಂಗಾಗುವಿರಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.