Shocking Video: ಪ್ರತಿ ದಿನ ಸಾಮಾಜಿಕ ಮಾಧ್ಯಮಗಳನ್ನು ಕೆದಕುವ ಅಭ್ಯಾಸ ನಿಮಗೂ ಇದ್ದರೆ, ಕೆಲವೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ ನೋಡಲು ಸಿಗುವ ಕೆಲ ವಿಷಯಗಳ ಮೇಲೆ ನಂಬಿಕೆ ಇಡುವುದು ಕಷ್ಟ ಸಾಧ್ಯವೇ ಎನಿಸಿಬಿಡುತ್ತದೆ. ಕೆಲ ವಿಡಿಯೋಗಳನ್ನು ನೋಡಿದರೆ ಜನರ ತಲೆ ಒಂದು ಕ್ಷಣ ಗಿರಕಿ ಹೊಡೆಯುತ್ತದೆ. ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದ ಮೇಲೆ ಭಾರಿ ವೈರಲ್ ಆಗುತ್ತಿದ್ದು, ಅದನ್ನು ನೋಡಿ ನೀವು ಕೂಡ ಒಂದು ಕ್ಷಣ ನಿಬ್ಬೇರಗಾಗುವಿರಿ. ಈ ವಿಡಿಯೋದಲ್ಲಿ ವೃದ್ಧನೊಬ್ಬ ಕೋಳಿ ಕದಿಯುತ್ತಿರುವುದನ್ನು ನೀವು ನೋಡಬಹುದು. ಆದರೆ, ಕೋಳಿ ಕದಿಯುವ ವೃದ್ಧನ ಸ್ಪೀಡ್ ನಿಮಗೂ ಕೂಡ ಆಶ್ಚರ್ಯಕ್ಕೀಡು ಮಾಡಬಹುದು.
ಇದನ್ನೂ ಓದಿ-Viral Video: ಟವೆಲ್ ಧರಿಸಿ ಮೆಟ್ರೋ ಹತ್ತಿದ ಭೂಪ, ಎಲ್ಲರ ಎದುರೆ ಏನ್ ಮಾಡ್ತಿದಾನೆ ನೀವೇ ನೋಡಿ
ವೇಗದ ವಿಷಯಕ್ಕೆ ಬಂದಾಗ ಎಲ್ಲಕ್ಕಿಂತ ಮೊದಲು ಕೇಳಿಬರುವ ಹೆಸರು ಅಂದರೆ ಅದು ಚಿರತೆ. ಏಕೆಂದರೆ, ಚಿರತೆಯ ವೇಗದ ಮುಂದೆ ನಿಲ್ಲುವುದು ಕಷ್ಟಸಾಧ್ಯವೇ ಹೌದು. ಆದರೆ, ಈ ವಿಡಿಯೋದಲ್ಲಿ ವೃದ್ಧನೊಬ್ಬನ ವೇಗವನ್ನು ನೋಡಿದರೆ ನೀವೂ ಕೂಡ ದಂಗಾಗುವಿರಿ. ವೈರಲ್ ಆಗಿರುವ ಈ ವಿಡಿಯೋ ಎಲ್ಲಿಂದ ಹೊರಹೊಮ್ಮಿದೆ ಎಂಬುದು ಇದುವರೆಗೆ ತಿಳಿದಿಲ್ಲ. ಆದರೆ, ವೃದ್ಧ ಒಂದು ಖಾಲಿ ಇರ್ಡುವ ಜಾಗದಲ್ಲಿ ಕುಳಿತಿರುವುದನ್ನು ನೀವು ನೋಡಬಹುದು. ಅವನ ಪಕ್ಕದಲ್ಲಿ ಓರ್ವ ವೃದ್ಧ ಮಹಿಳೆ ಕೂಡ ಕುಳಿತಿದ್ದಾಳೆ. ವಿಡಿಯೋದಲ್ಲಿ ಕೆಲ ಕೋಳಿಗಳು ಓಡಾಡುತ್ತಿರುವುದನ್ನು ನೀವು ನೋಡಬಹುದು. ವೃದ್ಧ ಮೊದಲು ಕೋಳಿಯನ್ನು ಬಲೆಗೆ ಬಲೆಗೆ ಬೀಲ್ಲಿಸಲು ಅದರ ಆಹಾರದ ಆಮೀಷ ಒಡ್ಡುತ್ತಾನೆ. ಬಡಪಾಯಿ ಕೋಳಿ ವೃದ್ಧನ ಆಮೀಷಕ್ಕೆ ಬಲಿಬಿದ್ದು ಆತನ ಬಳಿ ತಲುಪುತ್ತದೆ. ಕೋಳಿ ಅಲ್ಲಿಗೆ ತಲುಪಿದ ತಕ್ಷಣ, ತಾತ ಚಿರತೆಯ ವೇಗದಲ್ಲಿ ಅದನ್ನು ಕಣ್ಮರೆಯಾಗುವಂತೆ ಮಾಡುತ್ತಾನೆ. ವಿಡಿಯೋ ನೋಡಿ...
ಇದನ್ನೂ ಓದಿ-Trending Video: ಮೊದಲು ಜೋಕಾಲಿ ಆಡುವ ಈ ಪುಟಾಣಿಯ ವಿಡಿಯೋ ನೋಡಿ, ನಂತರ ದಮ್ಮಿದ್ರೆ ನಗು ತಡೆದು ತೋರಿಸಿ
ವಿಡಿಯೋ ನೋಡಿ ನಿಮ್ಮ ತಲೆಯೂ ಕೂಡ ಒಂದು ಕ್ಷಣ ತಿರುಗಿರಬಹುದು. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದ ಮೇಲೆ ಭಾರಿ ವೈರಲ್ ಆಗುತ್ತಿದೆ. 'satyam_x04' ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. 30 ಸಾವಿರಕ್ಕೂ ಹೆಚ್ಚು ಜನರು ಇದನ್ನು ಲೈಕ್ ಮಾಡಿದ್ದಾರೆ. ಒಂದೆಡೆ ಕೆಲವರು ವೃದ್ಧನ ಸ್ಪೀಡ್ ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದರೆ. ಕೆಲವರು ಸಕತ್ ಮಜಾಮಾಡಿ ಕಾಮೆಂಟ್ ಮಾಡುತ್ತಿದ್ದಾರೆ. ವೃದ್ಧನ ಚಾಕಚಕ್ಯತೆಯ ಕುರಿತು ನೀವು ಕೂಡ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡುವ ಮೂಲಕ ಹೇಳಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.