Infant inside school toilet :ಶಾಲೆಯ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆ!

Newborn baby found inside school toilet : ತಿರುಚ್ಚಿಯ ಹೊರವಲಯದ ಕತ್ತೂರಿನ ಸರ್ಕಾರಿ ಶಾಲೆಯ ಶೌಚಾಲಯದಲ್ಲಿ ಬುಧವಾರ ಸಂಜೆ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಶಾಲೆಯ ಸ್ವಚ್ಛತಾ ಕಾರ್ಯಕರ್ತೆಯು ಶೌಚಾಲಯಕ್ಕೆ ಪ್ರವೇಶಿಸಿದಾಗ ಮಗುವಿನ ಶವ ಕಂಡುಬಂದಿದೆ.  

Written by - Chetana Devarmani | Last Updated : Dec 8, 2022, 06:06 PM IST
  • ಶಾಲೆಯ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆ
  • ತಿರುಚ್ಚಿಯ ಹೊರವಲಯದ ಕತ್ತೂರಿನ ಸರ್ಕಾರಿ ಶಾಲೆ
  • ಸಿಆರ್‌ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲು
Infant inside school toilet :ಶಾಲೆಯ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆ!  title=
ನವಜಾತ ಶಿಶು

ತಿರುಚ್ಚಿ (ತಮಿಳುನಾಡು) : ತಮಿಳುನಾಡಿನ ಸರ್ಕಾರಿ ಶಾಲೆಯ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದು ಸಂಚಲನ ಸೃಷ್ಟಿಸಿದೆ. ತಿರುಚ್ಚಿಯ ಹೊರವಲಯದ ಕತ್ತೂರಿನ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಕೆಲವು ಗಂಟೆಗಳ ಹಿಂದೆ ಜನಿಸಿದ ನವಜಾತ ಶಿಶುವಿನ ಶವ ಶೌಚಾಲಯದಲ್ಲಿ ಪತ್ತೆಯಾಗಿದೆ. ಸರ್ಕಾರಿ ಶಾಲೆಯ ಶೌಚಾಲಯದಲ್ಲಿ ಬುಧವಾರ ಸಂಜೆ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಶಾಲೆಯ ಸ್ವಚ್ಛತಾ ಕಾರ್ಯಕರ್ತೆಯು ಶೌಚಾಲಯಕ್ಕೆ ಪ್ರವೇಶಿಸಿದಾಗ ಮಗುವಿನ ಶವ ಕಂಡುಬಂದಿದೆ.  

ಇದನ್ನೂ ಓದಿ :  Goodbye 2022: ಭಾರತದಲ್ಲಿ ಗೂಗಲ್‌ನಲ್ಲಿ ಈ ವರ್ಷ ಹೆಚ್ಚು ಸರ್ಚ್‌ ಮಾಡಿದ್ದು ಇಂತಹ ವಿಚಾರವನ್ನ!!

ಈ ಕುರಿತು ಶಾಲೆಯ ಮುಖ್ಯೋಪಾಧ್ಯಾಯರು ಡಿ.7ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಾಲೆಯ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಇರುವ ಬಗ್ಗೆ ಸ್ವಚ್ಛತಾ ಕಾರ್ಯಕರ್ತೆ ಶೌಚಾಲಯ ಸ್ವಚ್ಛಗೊಳಿಸಲು ಬಂದಾಗ ಶಿಶುವಿನ ಶವ ಪತ್ತೆಯಾಗಿದೆ. ಬಳಿಕ ಕಾರ್ಯಕರ್ತೆಯು ಮುಖ್ಯೋಪಾಧ್ಯಾಯರಿಗೆ ವಿಷಯ ತಿಳಿಸಿದ್ದಾರೆ. 

ಸ್ವಚ್ಛತಾ ಕಾರ್ಯಕರ್ತೆ ಶೌಚಾಲಯದಲ್ಲಿ ಅಪರಿಚಿತ ನವಜಾತ ಗಂಡು ಶಿಶುವನ್ನು ಕಂಡರು. ಅದು ರಕ್ತಸಿಕ್ತವಾಗಿತ್ತು. ನವಜಾತ ಶಿಶುವನ್ನು ಕಂಡ ಕೂಡಲೇ, ಅದನ್ನು ತಿರುಚ್ಚಿಯ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅಲ್ಲಿ ವೈದ್ಯರು ಶಿಶು ಬದುಕುಳಿದಿಲ್ಲ ಎಂದು ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶಾಲೆ ಆವರಣದ ಶೌಚಾಲಯದಲ್ಲಿ ಮಗು ಹುಟ್ಟಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಥವಾ ಯಾರಾದರೂ ನವಜಾತ ಶಿಶುವನ್ನು ತಂದು ಶಾಲೆಯ ಶೌಚಾಲಯದಲ್ಲಿ ಎಸೆದಿದ್ದಾರೆಯೇ? ಸೆಂದು ಕೂಡ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಇತರ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Janhvi Kapoor : ಬಂಗಾರದ ಬೊಂಬೆ ಜಾನ್ವಿ ಕಪೂರ್‌ ಮೋಹಕ ನೋಟ

ಫೋರೆನ್ಸಿಕ್ ತಜ್ಞರನ್ನು ಸಹ ಶಾಲೆಗೆ ಕರೆಸಿ ಪರೀಕ್ಷಿಸಲಾಗಿದ್ದು, ಮಾದರಿಗಳನ್ನು ಸಂಗ್ರಹಿಸಲಾಗಿದೆ. ಮಗುವನ್ನು ಪರೀಕ್ಷಿಸಿದ ವೈದ್ಯರು ನವಜಾತ ಶಿಶು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಮುಖ್ಯೋಪಾಧ್ಯಾಯರ ದೂರಿನ ಮೇರೆಗೆ ತಿರುವೆರುಂಬೂರ್ ಪೊಲೀಸರು ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News