ಬೆಂಗಳೂರು : ಅದೊಂದು ಅಸಹಜ ಸಾವು ಅಂತಲೇ ಅಂದುಕೊಂಡಿದ್ದ ಪ್ರಕರಣ. ಆದ್ರೆ ಪೊಲೀಸರ ತಲೆಯಲ್ಲಿ ಇದು ಅಸಹಜ ಸಾವು ಅಲ್ಲ ಅನ್ನೋ ಅನುಮಾನ ಆವತ್ತೆ ಬಂದಿತ್ತು. ಅದಕ್ಕೆ ಪೋಸ್ಟ್ ಮಾರ್ಟಂ ರಿಪೋರ್ಟ್ ಪುಷ್ಠಿ ನೀಡಿತ್ತು. ಇದೇ ಕೇಸ್‌ನ ರಹಸ್ಯ ಬೇಧಿಸಿರೊ ಆರ್.ಟಿ.ನಗರ ಪೊಲೀಸರು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಕೈಗೆ ಕೋಳ ತೊಡಿಸಿದ್ದಾರೆ. ಸಿನಿಮಾ ಸ್ಟೈಲ್ ನಲ್ಲಿ ನಡೆದ ಘಟನೆಯ ಅಸಲಿ‌ ಕಹಾನಿ ಇಲ್ಲಿದೆ..


COMMERCIAL BREAK
SCROLL TO CONTINUE READING

24ನೇ ತಾರೀಖು ಉಂಜಾನೆಯ ಸಮಯ ಆರ್.ಟಿ.ನಗರ ಪೊಲೀಸರಿಗೆ ದಿಣ್ಣೂರು ಮುಖ್ಯರಸ್ತೆಯಲ್ಲಿರುವ ಒಂದು ರೂಂ ನಲ್ಲಿ 27 ವರ್ಷ ವಯಸ್ಸಿನ ಮೃತದೇಹ ಇದೆ ಎಂಬ ಮಾಹಿತಿ ಬರುತ್ತೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಪೊಲೀಸರಿಗೆ ಸತ್ತವನು ಯಾರು ಅನ್ನೋದೆ ಗೊತ್ತಿರೋದಿಲ್ಲ. ರೂಮ್‌ನಲ್ಲಿ ಮೃತದೇಹ ಬಿಟ್ರೆ ಬೇರೆ ಯಾರು ಇರೋದಿಲ್ಲ. ನಂತರ ಮೃತನ ಗುರುತು ಪತ್ತೆ ಹಚ್ಚಿದ್ದ ಪೊಲೀಸರಿಗೆ ಮೃತನು ಉತ್ತರ ಪ್ರದೇಶದ ಗೋರಖ್ ಪುರದ ಶ್ರವಣ್ ಶರ್ಮಾ ಅನ್ನೋದು ಗೊತ್ತಾಗಿದೆ. ನಂತರ ಸಂಬಂಧಿಕರಿಗೆ ಕರೆ ಮಾಡಿ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಬೆಂಗಳೂರಿಗೆ ಬಂದ ಕುಟುಂಬಸ್ಥರು ಸಾವು ಸಂಶಯಸ್ಪದವಾಗಿದೆ ಎಂದು ದೂರು ನೀಡಿದ್ದಾರೆ. ಅದರ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡ ಆರ್‌ಟಿ ನಗರ ಪೊಲೀಸರು ತನಿಖೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ವೇಳೆ ಸಾವಿನ ಅಸಲಿ ಸತ್ಯ ರಿವೀಲ್ ಆಗಿದೆ..


ಇದನ್ನೂ ಓದಿ: ಕಸ ಆಯುವವನ ಯಡವಟ್ಟಿಗೆ ಬೆಚ್ಚಿಬಿತ್ತು ರಾಜಧಾನಿ..! ʼಬಾಕ್ಸ್‌ ಅವಾಂತರಕ್ಕೆʼ ಖಾಕಿ ಶಾಕ್‌


ಡೆತ್ ಡ್ಯೂ ಟು ಇಂಟರ್ನಲ್ ಇಂಜ್ಯೂರಿ ಅನ್ನೋ ಪೋಸ್ಟ್ ಮಾರ್ಟಂ ರಿಪೋರ್ಟ್ ಪೊಲೀಸರ ಕೈಸೇರುತ್ತೆ. ಅದರ ಆಧಾರದ ಮೇಲೆ ಶ್ರವಣ್ ಬೆಂಗಳೂರಿಗೆ ಬಂದ ರೀತಿಯ ಬಗ್ಗೆ  ಖಾಕಿ ಟೀಂ ವಿಚಾರಣೆ ಮಾಡಿತ್ತು. ಮೃತ ಶ್ರವಣ್ ಕಳೆದ ಎರಡು ವಾರದ ಹಿಂದೆ ಸ್ನೇಹಿತನ ಜೊತೆಗೆ ಬೆಂಗಳೂರಿಗೆ ಬಂದು ಕಾರ್ಪೆಂಟರ್ ಆಗಿ‌ ಕೆಲಸ ಮಾಡಿಕೊಂಡಿದ್ದ. ದಿಣ್ಣೂರು ಮುಖ್ಯರಸ್ತೆಯಲ್ಲಿಯೇ ಈಗಾಗಲೇ ಇದ್ದ ಸ್ನೇಹಿತರ ರೂಮ್ ನಲ್ಲಿಯೇ ವಾಸ್ತವ್ಯ ಹೂಡಿದ್ದ..


ಹೀಗಿರುವ 23 ರ ರಾತ್ರಿ ಆರೋಪಿ ಔಪೇಂದ್ರ@ ಉಜಾಲ ಹಾಗೂ ಶ್ರವಣ್ ಶರ್ಮಾ ಇಬ್ಬರೇ ಇರ್ತಾರೆ. ಈ ವೇಳೆ ಎಣ್ಣೆ ತರಿಸುವ ವಿಚಾರಕ್ಕೆ ಗಲಾಟೆಯಾಗಿ. ಔಪೇಂದ್ರ ಮೊಣಕಾಲಿಂದ ಶ್ರವಣ್ ಎದೆಗೆ ಒದ್ದಿದ್ದು ಇಂಟರ್ನಲ್ ಇಂಜ್ಯೂರಿ ಆಗಿದ್ದು ಲಂಗ್ಸ್ ಎಲ್ಲಾ ಡ್ಯಾಮೆಜ್ ಆಗಿತ್ತು. ಹಾಗಾಗಿ ಆತ ಸ್ಥಳದಲ್ಲೇ ಸಾವನ್ನಪ್ತಿದ್ದಂತೆ. ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದ. ಈ ಎಲ್ಲಾ ಮಾಹಿತಿ ಕಲೆ‌ ಹಾಕಿಕೊಂಡ ಪೊಲೀಸರು ಯು.ಪಿ.ನಲ್ಲಿ ಅಡಗಿದ್ದ ಆರೋಪಿಯನ್ನ ಫೆಬ್ರವರಿ 9 ರಂದು ಬಂಧಿಸಿ ಅಸಹಜ ಸಾವು ಪ್ರಕರಣವನ್ನು ಕೊಲೆ ಪ್ರಕರಣವನ್ನಾಗಿ ಮಾಡಿಕೊಂಡು ಜೈಲಿಗಟ್ಟಿದ್ದಾರೆ.


ಅದೇನೇ ಹೇಳಿ ಪ್ರಾಣಕ್ಕೆ ಪ್ರಾಣ ನೀಡೊ ಸ್ನೇಹಿತರಾದ್ರು ಎಣ್ಣೆಯ ಮತ್ತು ಅನ್ನೋದು ಹೇಗೆಲ್ಲ ಮಾಡಿಸಿಬಿಡುತ್ತೆ ನೋಡಿ...ಇಲ್ಲೊಬ್ಬ ಸ್ನೇಹಿತನ ಪ್ರಾಣವನ್ನೇ ತೆಗೆದುಕೊಂಡಿದ್ದು ಮಾತ್ರ ನಿಜಕ್ಕೂ ಅಯ್ಯೋ ಅನಿಸುವಂತಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.