Foods for Dengue fever : ಮಳೆಗಾಲದಲ್ಲಿ ಹೆಚ್ಚಾಗಿ ರೋಗಗಳು ಹರಡುತ್ತವೆ.. ಮಲೇರಿಯಾ, ಚಿಕೂನ್‌ಗುನ್ಯಾ ಮತ್ತು ಡೆಂಗ್ಯೂನಂತಹ ಅಪಾಯಕಾರಿ ರೋಗಗಳನ್ನು ಹೆಚ್ಚಾಗಿ ಕಾಡುತ್ತವೆ.. ಆದ್ದರಿಂದ, ಮಳೆಯ ದಿನಗಳಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬೇಕು. ಇದರಿಂದ ಡೆಂಗ್ಯೂ ಬಂದರೂ ಬಹು ಬೇಗನೇ ಗುಣಮುಖರಾಗಬಹುದು.. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಯಾವ ಹಣ್ಣುಗಳನ್ನು ತಿನ್ನಬೇಕು? ಅಂತ ತಿಳಿಯೋಣ ಬನ್ನಿ..
ಡೆಂಗ್ಯೂ ಬಂದಾಗ ತ್ವರಿತವಾಗಿ ಚೇತರಿಸಿಕೊಳ್ಳಲು ಯಾವ ಹಣ್ಣುಗಳನ್ನು ತಿನ್ನಬೇಕು..? ಡೆಂಗ್ಯೂ ಸೋಂಕಿನಿಂದ ಚೇತರಿಕೆ ಕಾಣಲು ಯಾವ ರೀತಿಯ ಆಹಾರ ಸೇವಿಸಬೇಕು ಎಂಬುವುದರ ಕುರಿತು ವೈದ್ಯರು ಏನ್ ಹೇಳ್ತಾರೆ..? ತಿಳಿಯೋಣ ಬನ್ನಿ..
ಮಳೆಗಾಲದ ದಿನಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೀವು ಹೆಚ್ಚು ಗಮನ ಹರಿಸಬೇಕು. ಈ ಋತುವಿನಲ್ಲಿ ಸೋಂಕಿನ ಅಪಾಯವು ತುಂಬಾ ಹೆಚ್ಚು. ಇದರಿಂದ ಯಾವುದೇ ವೈರಾಣು ದೇಹವನ್ನು ತ್ವರಿತವಾಗಿ ಆಕ್ರಮಣ ಮಾಡುತ್ತದೆ. ಇದಕ್ಕಾಗಿ, ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳನ್ನು ಆಹಾರದಲ್ಲಿ ತೆಗೆದುಕೊಳ್ಳಬೇಕು.
ಇದನ್ನೂ ಓದಿ:ಬೊಜ್ಜು ತುಂಬಿದ ನಿಮ್ಮ ಹೊಟ್ಟೆಯನ್ನು ಬಳ್ಳಿಯಂತಾಗಿಸುತ್ತೆ ಈ ಬೆಳ್ಳುಳ್ಳಿ..! ಆದರೆ.. ಹೀಗೆ ತಿನ್ನಬೇಕು..
ಡೆಂಗ್ಯೂ ಜ್ವರವಿದ್ದಾಗ ಯಾವ ಹಣ್ಣುಗಳನ್ನು ತಿನ್ನಬೇಕು? : ನೀವು ಡೆಂಗ್ಯೂವನ್ನು ತಡೆಗಟ್ಟಲು ಅಥವಾ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರೆ, ನಿಮ್ಮ ಆಹಾರದಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವ ಸಿಟ್ರಸ್ ಹಣ್ಣುಗಳನ್ನು ಸೇರಿಸಿ. ವಿಟಮಿನ್ ಸಿ ಸಮೃದ್ಧವಾಗಿರುವ ಕಿವಿ ಹಣ್ಣನ್ನು ಸೇವಿಸಿ. ಡೆಂಗ್ಯೂ ರೋಗಿಗಳು ಪ್ರತಿದಿನ ಪಪ್ಪಾಯಿಯನ್ನು ತಿನ್ನಬೇಕು. ಪಪ್ಪಾಯಿಯಲ್ಲಿ ಪಾಪೈನ್ ಕಿಣ್ವವಿದೆ. ಇದು ಪ್ಲೇಟ್ಲೆಟ್ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದಾಳಿಂಬೆ ಡೆಂಗ್ಯೂ ರೋಗಿಗಳಿಗೆ ಪ್ರಯೋಜನಕಾರಿ ಹಣ್ಣು.
ಡೆಂಗ್ಯೂಗೆ ಎಳನೀರು : ನೀವು ಡೆಂಗ್ಯೂ ಅಥವಾ ಇತರ ವೈರಲ್ ಸೋಂಕುಗಳಿಂದ ರಕ್ಷಣೆ ಪಡೆಯಲು ಬಯಸಿದರೆ, ಮಳೆಗಾಲದಲ್ಲಿ ದೇಹವನ್ನು ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ.. ಅದಕ್ಕಾಗಿ ಪ್ರತಿದಿನ ಎಳನೀರನ್ನು ಕುಡಿಯಿರಿ. ಡೆಂಗ್ಯೂ ಸಂದರ್ಭದಲ್ಲಿ ರೋಗಿಗೆ ತಾಜಾ ಎಳಕಾಯಿಯನ್ನು ನೀಡಬಹುದು. ಇದರಿಂದಾಗಿ ದೇಹದಲ್ಲಿ ಖನಿಜಾಂಶಗಳ ಕೊರತೆ ಇರುವುದಿಲ್ಲ. ( ಗಮನಿಸಿ: ಇಲ್ಲಿ ನೀಡಿರುವ ವಿಷಯವು ತಿಳುವಳಿಕೆಗಾಗಿ ಮಾತ್ರ. ಇದನ್ನು ಅನುಸರಿಸುವ ಮೊದಲು ಇಲ್ಲವೇ ಯಾವುದೇ ಸಂದೇಹಗಳಿದ್ದಲ್ಲಿ, ತಜ್ಞರನ್ನು ಸಂಪರ್ಕಿಸಿ...)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.