ಹುಬ್ಬಳ್ಳಿ: ಕಾರ್ಮಿಕನ ಸೋಗಿನಲ್ಲಿ ಬಂದು ಆರು ಲಕ್ಷ ಕಳ್ಳತನ ಮಾಡಿದ್ದ ಕಿರಾತಕನನ್ನು  ಬಂಧಿಸುವಲ್ಲಿ ನಗರದ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸರು ಚಾಲಾಕಿ ಕಳ್ಳ ಸಂದೀಪಗೌಡನನ್ನು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಸಂದೀಪಗೌಡ ಮೂಲತಃ ಬೆಂಗಳೂರ ನಿವಾಸಿ. ಹುಬ್ಬಳ್ಳಿಯ ಮನೋಜ್ ಪಾರ್ಕ್ ಬಳಿ ಇರೋ ಜಿಯೋ‌ ಮಾರ್ಟ್ ನಲ್ಲಿ ಕೆಲಸಕ್ಕೆ ಸೇರಿದ್ದ. ತಾನು ಕೆಲಸ ಮಾಡುವ ಜಿಯೋ ಮಾರ್ಟ್ ನಲ್ಲಿಯೇ 6 ಲಕ್ಷ ಕಳ್ಳತನ ಮಾಡಿದ್ದ. ಕಳ್ಳತನ ಮಾಡೋ ಉದ್ದೇಶದಿಂದಲೇ ಕೆಲಸಕ್ಕೆ ಸೇರಿದ್ದ ಎನ್ನಲಾಗಿದೆ. 


ಇದನ್ನೂ ಓದಿ- Shocking: ಮನೆಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಳೆತ ಶವ ಪತ್ತೆ..!


ಕೆಲಸಕ್ಕೆ ಸೇರಿ ಎಲ್ಲರ ವಿಶ್ವಾಸ ಗಳಿಸಿದ್ದ ಸಂದೀಪಗೌಡ, ಗೋಡೌನ್ ನಲ್ಲಿಯೇ ಮಲಗುತ್ತಿದ್ದ. ಕಳೆದ ತಿಂಗಳು 25 ರಂದು ಜಿಯೋ ಮಾರ್ಟ್ ಗೋಡೌನ್ ನಲ್ಲಿ 6 ಲಕ್ಷ ರೂಪಾಯಿ ಕಳ್ಳತನ ಮಾಡಿ ಪರಾರಿಯಾಗಿದ್ದ. ಇನ್ನು, ಜೊತೆಗಿದ್ದ ಕೆಲಸಗಾರಿಗೆ ಸಾರಾಯಿ ಕುಡಿಸಿ ಹಣ ಕೊಳ್ಳೆ ಹೊಡೆದಿದ್ದ ಚಾಲಾಕಿ ಕಳ್ಳನ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು


ಇದನ್ನೂ ಓದಿ- ಜ್ಯೂಸ್‌ನಲ್ಲಿ ಆಸಿಡ್‌ ಹಾಕಿ ಕುಡಿಸಿ ಲವರ್‌ ಕೊಂದ ಸುರ ಸುಂದರಿ..!


ಸಂದೀಪಗೌಡ ವಿರುದ್ದ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕೇಶ್ವಾಪೂರ ಪೊಲೀಸರು ಸಂದೀಪಗೌಡನನ್ನ ಶ್ರೀರಂಗಪಟ್ಟಣದಲ್ಲಿ ಬಂಧಿಸಿದ್ದಾರೆ. ಬಂಧಿತನಿಂದ 4 ಲಕ್ಷಕ್ಕೂ ಅಧಿಕ ಹಣ, ಬಂಗಾರದ ಆಭರಣ, ಒಂದು ಡಿಯೋ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.