Shocking: ಮನೆಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಳೆತ ಶವ ಪತ್ತೆ..!

ಒಡಿಶಾದ ಬರ್ಗರ್ ಜಿಲ್ಲೆಯ ಭೇದನ್ ಬ್ಲಾಕ್‌ನ ಜಂದೋಲ್ ಗ್ರಾಮದಲ್ಲಿ ಬಾಗಿಲು ಹಾಕಿದ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ನಾಲ್ವರ ಶವಗಳು ಪತ್ತೆಯಾಗಿವೆ.

Written by - Puttaraj K Alur | Last Updated : Oct 31, 2022, 09:06 PM IST
  • ಬಾಗಿಲು ಹಾಕಿದ್ದ ಮನೆಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಳೆತ ಶವಗಳು ಪತ್ತೆ
  • ಒಡಿಶಾದ ಬರ್ಗರ್ ಜಿಲ್ಲೆಯ ಭೇದನ್ ಬ್ಲಾಕ್‌ನ ಜಂದೋಲ್ ಗ್ರಾಮದಲ್ಲಿ ಘಟನೆ
  • ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು
Shocking: ಮನೆಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಳೆತ ಶವ ಪತ್ತೆ..!   title=
ನಾಲ್ವರ ಕೊಳೆತ ಶವಗಳು ಪತ್ತೆ!

ಒಡಿಶಾ: ಆಘಾತಕಾರಿ ಘಟನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಕೊಳೆತ ಶವಗಳು ಭಾನುವಾರ ಸಂಜೆ ಪತ್ತೆಯಾಗಿವೆ. ಒಡಿಶಾದ ಬರ್ಗರ್ ಜಿಲ್ಲೆಯ ಭೇದನ್ ಬ್ಲಾಕ್‌ನ ಜಂದೋಲ್ ಗ್ರಾಮದಲ್ಲಿ ಬಾಗಿಲು ಹಾಕಿದ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ನಾಲ್ವರ ಶವಗಳು ಪತ್ತೆಯಾಗಿವೆ. ಪ್ರಾಥಮಿಕ ತನಿಖೆಯ ವೇಳೆ ಮೃತರನ್ನು ದಿನಗೂಲಿ ಕೆಲಸ ಮಾಡುತ್ತಿದ್ದ ಶೇಷಾದೇಬ್ ಮೆಹರ್ (65), ಅವರ 60 ವರ್ಷದ ಪತ್ನಿ ಖೀರೇಶ್ವರಿ, ಮಗ ಅರಬಿಂದ (30) ಮತ್ತು ಮಗಳು ಶಿಬಾನಿ (22) ಎಂದು ಗುರುತಿಸಲಾಗಿದೆ.  

ದೀಪಾವಳಿ ಹಬ್ಬದ ವೇಳೆ ಕೊನೆಯದಾಗಿ ಕಾಣಿಸಿಕೊಂಡಿದ್ದ ಈ ಕುಟುಂಬಸ್ಥರು ಕಳೆದ ಮೂರ್ನಾಲ್ಕು ದಿನಗಳಿಂದ ನೆರೆಹೊರೆಯವರಿಗೆ ಕಾಣಿಸಿರಲಿಲ್ಲ. ಹೀಗಾಗಿ ಎಲ್ಲೋ ಹೊರಗಡೆ ಹೋಗಿರಬಹುದು ಎಂದು ಸ್ಥಳೀಯ ನಿವಾಸಿಗಳು ಭಾವಿಸಿದ್ದರಂತೆ. ಆದರೆ ಭಾನುವಾರ ಸಂಜೆ ಶೇಷಾದೇಬ್ ಅವರ ಮನೆಯಿಂದ ದುರ್ನಾತ ಬಂದಿದೆ. ಕೊಳೆತ ವಾಸನೆಯಿಂದ ಸಂಶಯಗೊಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ: ʼಕಾಂತಾರʼ ಕಾಪಿರೈಟ್ ವಿವಾದ : ಹೊಂಬಾಳೆಗೆ ಬೇಡಿಕೆ ಇಟ್ಟ ‘ತೈಕ್ಕುಡಂ ಬ್ರಿಡ್ಜ್​​’...!

ರುಸುದಾ ಪೊಲೀಸರು ಹೆಚ್ಚುವರಿ ತಹಸೀಲ್ದಾರ್ ದೇಬಾನಂದ್ ಸಾಹು ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮನೆಯ ಬೀಗ ಒಡೆದು ನೋಡಿದಾಗ ನಾಲ್ವರು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದರೆ, ಮತ್ತಿಬ್ಬರು ನೆಲದ ಮೇಲೆ ಬಿದ್ದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಒಂದೇ ಕುಟುಂಬದ ನಾಲ್ವರು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಭೀತಿ ಹೆಚ್ಚಿಸಿದೆ.

ಶೇಷಾದೇಬ್ ಮನೆಯ ಹಿಂಬದಿಯ ಬಾಗಿಲಿಗೆ ಬೀಗ ಹಾಕಿರುವುದು ಕಂಡು ಬಂದ ಕಾರಣ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಸಾವಿನ ಹಿಂದಿನ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ಖಾಕಿಪಡೆ ತನಿಖೆ ಕೈಗೊಂಡಿದೆ.

ಇದನ್ನೂ ಓದಿ: Monkey Viral News : ಎಣ್ಣೆ ಹೊಡೆಯಲು ಬಾರ್‌ಗೆ ಬರುತ್ತೆ ಈ ಮಂಗಣ್ಣ! ಗುಂಡಿನ ಮತ್ತಲ್ಲಿ ಕೋತಿಯ ಗಮ್ಮತ್ತು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News