ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಹಜರತ್‌ಗಂಜ್ ಪ್ರದೇಶದಲ್ಲಿರುವ ಲೆವಾನಾ ಹೋಟೆಲ್‌ನಲ್ಲಿ ಇಂದು (ಸೋಮವಾರ) ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ 2 ಮಂದಿ ಸಾವನ್ನಪ್ಪಿದ್ದಾರೆ.


COMMERCIAL BREAK
SCROLL TO CONTINUE READING

ಅಗ್ನಿಶಾಮಕ ಇಲಾಖೆಯ ಡಿಜಿ ಪ್ರಕಾರ, ಬಹುತೇಕ ಎಲ್ಲಾ ಜನರನ್ನು ಲೆವಾನಾ ಹೋಟೆಲ್‌ನಿಂದ ಸ್ಥಳಾಂತರಿಸಲಾಗಿದೆ ಮತ್ತು ಬೆಂಕಿಯನ್ನು ನಂದಿಸಲಾಗಿದೆ.


ಇದನ್ನೂ ಓದಿ: Asia up 2022: ಪಾಕಿಸ್ತಾನ ವಿರುದ್ಧದ ಸೋಲಿನ ಬಳಿಕ ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನ ಅಂತ್ಯ!


ಇನ್ನು ಲೆವಾನಾ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ, ಅನೇಕ ಜನರು ಕಿಟಕಿಯ ಮೂಲಕ  ಹೊರಕ್ಕೆ ಹಾರಿದ್ದಾರೆ. ಈಗಲೂ ಕಟ್ಟಡದಿಂದ ಹೊಗೆ ಬರುತ್ತಲೇ ಇದೆ. ಇನ್ನು ಹೋಟೆಲ್ ಪ್ರವೇಶಿಸಲು ಹಿಂಬದಿಯ ಗೋಡೆಯನ್ನು ಬುಲ್ಡೋಜರ್ ಮೂಲಕ ತೆರೆಯಲಾಗುತ್ತಿದೆ. ವಿಷಯ ತಿಳಿದು ಸಿಎಂ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರ ಎಂದು ಅಧಿಕಾರಿಗಳು ಹೇಳಿದ್ದಾರೆ.


ಇನ್ನೂ 7 ಜನರು ಲಕ್ನೋದ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈಗಾಗಲೇ ಇಬ್ಬರು ಮೃತಪಟ್ಟಿದ್ದಾರೆ ಎಂದು ಸಿವಿಲ್ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಆರ್.ಪಿ.ಸಿಂಗ್ ತಿಳಿಸಿದ್ದಾರೆ. ಇನ್ನು ಶಾರ್ಟ್ ಸರ್ಕ್ಯೂಟ್ ನಿಂದ ಲೆವಾನಾ ಹೋಟೆಲ್ ನಲ್ಲಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ.


ಸಿಎಂ ಯೋಗಿ ಸೂಚನೆ:


ಲಕ್ನೋದ ಲೆವಾನಾ ಹೋಟೆಲ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದ ಬಗ್ಗೆ ಮಾಹಿತಿ ಪಡೆದುಕೊಂಡ ಸಿಎಂ ಯೋಗಿ ಆದಿತ್ಯನಾಥ್ ಅವರು ತಕ್ಷಣದ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿ ಯೋಗಿ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 


ಇದನ್ನೂ ಓದಿ: ಎಸಿ ಜೊತೆಗೆ ಈ ಸಾಧನ ಅಳವಡಿಸಿದರೆ ವಿದ್ಯುತ್ ಬಿಲ್ 2 ಸಾವಿರ ರೂ. ಕಡಿಮೆ ಆಗುತ್ತೆ!


ಸದ್ಯ ಲೆವಾನಾ ಹೋಟೆಲ್‌ನಲ್ಲಿ ಸಿಲುಕಿದ್ದ ಬಹುತೇಕ ಜನರನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ದಳದ ಡಿಜಿ ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.