Viral Video : I LOVE YOU ಎಂದು ವರನಿಗೆ ಮುತ್ತಿಟ್ಟ ವಧು, ವರನನ್ನು ನೋಡಿ ದಂಗಾದ ಜನ

Bride Groom Video:ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವೀಡಿಯೋ ಕೂಡಾ ನೋಡುಗರನ್ನು ಬೆರಗಾಗುವಂತೆ ಮಾಡಿದೆ. ವೀಡಿಯೋ ನೋಡಿದ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿರುವ ಜನ.

Written by - Ranjitha R K | Last Updated : Sep 5, 2022, 09:29 AM IST
  • ಮದುವೆ ಎನ್ನುವುದು ಏಳೇಳು ಜನ್ಮದ ಬಂಧ
  • ಯಾರಿಗೆ ಯಾರು ಜೋಡಿ ಎನ್ನುವುದು ಕೂಡಾ ಪೂರ್ವ ನಿರ್ಧರಿತ
  • ವಧು ವರರ ವಯಸ್ಸಿನ ಅಂತರಕ್ಕೂ ಒಂದು ಮಿತಿ ಇರುತ್ತದೆ.
Viral Video : I LOVE YOU ಎಂದು ವರನಿಗೆ ಮುತ್ತಿಟ್ಟ ವಧು, ವರನನ್ನು ನೋಡಿ ದಂಗಾದ ಜನ  title=
Bride Groom Video (photo twitter)

Bride Groom Video : ಮದುವೆ ಎನ್ನುವುದು ಏಳೇಳು ಜನ್ಮದ ಬಂಧ ಎಂದು ಹೇಳಲಾಗುತ್ತದೆ. ಯಾರಿಗೆ ಯಾರು ಜೋಡಿ ಎನ್ನುವುದು ಕೂಡಾ ಪೂರ್ವ ನಿರ್ಧರಿತ ಎಂದು ಕೂಡಾ ಹೇಳಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಸಂಗಾತಿಯನ್ನು ಅದೃಷ್ಟದಿಂದಲೇ ಪಡೆಯುತ್ತಾರೆ. ಇನ್ನು ಮದುವೆಯ ವೇಳೆಯಲ್ಲಿ ಸಾಮಾನ್ಯವಾಗಿ ಗಂಡು ಹೆಣ್ಣಿಗಿಂತ ವಯಸ್ಸಿನಲ್ಲಿ ದೊಡ್ದವನಾಗಿರಬೇಕು ಎಂದು ಹೇಳಲಾಗುತ್ತದೆ. ಈ ವಯಸ್ಸಿನ  ಅಂತರಕ್ಕೂ ಒಂದು ಮಿತಿ ಇರುತ್ತದೆ. ಆದರೆ,  ಕೆಲವೊಮ್ಮೆ ವಧು ವರರ ನಡುವಿನ ಅಂತರ ಕಂಡಾಗ ಆಶ್ಚರ್ಯವಾಗುತ್ತದೆ.  

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವೀಡಿಯೋ ಕೂಡಾ ನೋಡುಗರನ್ನು ಬೆರಗಾಗುವಂತೆ ಮಾಡಿದೆ.  ಈ ವೀಡಿಯೋ ಆರಂಭದಲ್ಲಿ ವಧುಯೊಬ್ಬಳು ನಗುತ್ತಾ ತನ್ನ ಪಕ್ಕದಲ್ಲಿ ಕುಳಿತಿರುವ ವಯಸ್ಸಾದ ವ್ಯಕ್ತಿಗೆ ಐ ಲವ್ ಯು ಎಂದು ಹೇಳಿ ಹಣೆಗೆ ಮುತ್ತಿಕ್ಕುತ್ತಾಳೆ. ಆ ವ್ಯಕ್ತಿ ಕೂಡಾ ತಿರುಗಿ ಐ ಲವ್ ಯು ಎನ್ನುತ್ತಾರೆ. ಇಬ್ಬರ ಮುಖದಲ್ಲೂ ಮಂದಹಾಸ ಕಾಣಬಹುದು. 

ಇದನ್ನೂ ಓದಿ : Viral Video : ಸಿಂಗಲ್ಸ್‌ ಈ ವಿಡಿಯೋ ನೋಡ್ಲೇಬೇಡಿ! ಅಪ್ಪನ ವಯಸ್ಸಿನ ವ್ಯಕ್ತಿಗೆ ಮಗಳ ವಯಸ್ಸಿನ ಗರ್ಲ್‌ಫ್ರೆಂಡ್‌

ಇಲ್ಲಿದೆ ವಿಡಿಯೋ  : 

 

ವೀಡಿಯೋ ನೋಡಿದ ಪ್ರತಿಕ್ರಿಯಿಸುತ್ತಿರುವ ಜನ : 
ವಧು ಐ ಲವ್ ಯೂ ಎಂದು ಹೇಳಿ ವೃದ್ಧ ವ್ಯಕ್ತಿಯ ಹಣೆಗೆ ಮುತ್ತಿಟ್ಟ ವಿಡಿಯೋ ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ  ಓಡಿ ಹೋಗಿ ನೀರಿಗೆ ಜಿಗಿಯುವ ಮೆಮೆಯನ್ನು ಕೂಡಾ ಬಳಸಲಾಗಿದೆ. ಈ ವೀಡಿಯೊವನ್ನು Instagram ನಲ್ಲಿ couple_official_page ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಹಲವರು ತಮ್ಮದೇ ಆದ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಒಬ್ಬ ಬಳಕೆದಾರರಂತೂ ದೇವರೇ ಈಗ ಅವತರಿಸಿ ಬನ್ನಿ ಎಂದು ಬರೆದಿದ್ದಾರೆ. 

ಇದನ್ನೂ ಓದಿ Viral Video: ಎಕ್ಸ್‌ಪ್ರೆಸ್ ರೈಲಿಗೆ ಕೈ ಅಡ್ಡಹಾಕಿ ನಿಲ್ಲಿಸಿದ ತಾತ, ದಂಗಾದ ನೆಟ್ಟಿಗರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News