ಏಷ್ಯಾಕಪ್‌ನ ಸೂಪರ್-4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಸೋಲನುಭವಿಸಬೇಕಾಯಿತು. ಅಗ್ರ ಕ್ರಮಾಂಕದಲ್ಲಿ ಭಾರತ ಉತ್ತಮ ಬ್ಯಾಟಿಂಗ್ ಮಾಡಿತ್ತು. ಇನ್ನೊಂದೆಡೆ ವಿರಾಟ್ ಕೊಹ್ಲಿ ಬಿರುಸಿನ ಅರ್ಧಶತಕ ಬಾರಿಸಿದ್ದರು. ಆದರೆ ಸ್ಟಾರ್ ಆಟಗಾರನೊಬ್ಬ ಬೌಲಿಂಗ್ ನಲ್ಲಿ ಪ್ಲಾಪ್ ಆಗಿದ್ದು ಈ ಸೋಲಿಗೆ ಕಾರಣ ಎನ್ನಬಹುದು. ಈ ಮೂಲಕ ಆತ ಟೀಂ ಇಂಡಿಯಾಗೆ ಹೊರೆಯಾಗಿ ಪರಿಣಮಿಸಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಈ ಆಟಗಾರನ ವೃತ್ತಿಜೀವನದ ಮೇಲೆ ಬಿಕ್ಕಟ್ಟಿನ ಮೋಡಗಳು ಸುಳಿದಾಡುತ್ತಿವೆ ಎನ್ನಬಹುದು.
ಇದನ್ನೂ ಓದಿ: Video : ಈ 4 ಅಕ್ಷರ ಪದ ಹೇಳಲು ನಾಚಿನೀರಾದ ರಾಹುಲ್ ದ್ರಾವಿಡ್
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಭಾರತ ತಂಡದಲ್ಲಿ ಅತ್ಯಂತ ಅನುಭವಿ ಬೌಲರ್ ಆಗಿದ್ದರು, ಆದರೆ ಅವರು ತಮ್ಮ ಬೌಲಿಂಗ್‌ನಿಂದ ಎಲ್ಲರನ್ನು ನಿರಾಸೆಗೊಳಿಸಿದರು. ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ನಿರೀಕ್ಷೆಗೆ ತಕ್ಕಂತೆ ಆಟವಾಡಲು ಅವರಿಗೆ ಸಾಧ್ಯವಾಗಲಿಲ್ಲ. ಅವರು ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 40 ರನ್‌ಗಳನ್ನು ಬಿಟ್ಟುಕೊಟ್ಟಿದ್ದು, ಕೇವಲ 1 ವಿಕೆಟ್ ಗಳಿಸಲು ಮಾತ್ರ ಸಾಧ್ಯವಾಯಿತು. ಭಾರತೀಯ ಅಭಿಮಾನಿಗಳು ಅವರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದರು.
ನಾಯಕ ರೋಹಿತ್ ಶರ್ಮಾ ಅವರು ಭುವನೇಶ್ವರ್ ಕುಮಾರ್ ಅವರಿಗೆ ಸಾಕಷ್ಟು ನಿರೀಕ್ಷೆಯೊಂದಿಗೆ 19 ನೇ ಓವರ್ ಅನ್ನು ನೀಡಿದರು. ಆದರೆ ಫಲಿತಾಂಶ ಮಾತ್ರ ಕೈ ತಪ್ಪಿ ಹೋಗಿತ್ತು. ಈ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ 19 ರನ್ ನೀಡಿದ್ದರಿಂದ ಪಂದ್ಯ ಭಾರತ ತಂಡದ ಕೈ ತಪ್ಪಿತು.
ಭುವನೇಶ್ವರ್ ಕುಮಾರ್ ಅವರನ್ನು ಡೆತ್ ಓವರ್‌ಗಳ ಮಾಸ್ಟರ್ ಎಂದು ಪರಿಗಣಿಸಲಾಗಿದೆ. ಆದರೆ ಪಾಕಿಸ್ತಾನದ ವಿರುದ್ಧ ಅವರ ಮ್ಯಾಜಿಕ್ ಕೆಲಸ ಮಾಡಲಿಲ್ಲ. ಟೀಂ ಇಂಡಿಯಾ ಸೋಲಿಗೆ ದೊಡ್ಡ ಕಾರಣರಾದರು ಎನ್ನಬಹುದು. ಒಂದು ವೇಳೆ ಇದೇ ಆಟವನ್ನು ಪರಿಗಣಿಸಿ ಟೀಮ್ ಇಂಡಿಯಾದಿಂದ ಅವರನ್ನು ಹೊರಗಿಡುವ ಸಾಧ್ಯತೆಯಿದೆ.
ಭುವನೇಶ್ವರ್ ಕುಮಾರ್ ಈಗಾಗಲೇ ಟೆಸ್ಟ್ ಮತ್ತು ಏಕದಿನ ತಂಡದಿಂದ ಹೊರಗುಳಿದಿದ್ದಾರೆ. ಇದೀಗ ಟಿ20 ತಂಡದಲ್ಲಿ ಅವರ ಸ್ಥಾನವೂ ಅಪಾಯದಲ್ಲಿದೆ. ಭುವನೇಶ್ವರ್ ಕುಮಾರ್ ಭಾರತ ಪರ 21 ಟೆಸ್ಟ್ ಪಂದ್ಯಗಳಲ್ಲಿ 63 ವಿಕೆಟ್, 121 ODIಗಳಲ್ಲಿ 141 ಮತ್ತು 75 T20 ಪಂದ್ಯಗಳಲ್ಲಿ 79 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: T20 World Cup 2022 : ಜಡೇಜಾ ಸ್ಥಾನಕ್ಕೆ ಈ ಆಟಗಾರನಿಗೆ ಚಾನ್ಸ್, ಮೊದಲ ಬಾರಿಗೆ ಟಿ20 ವಿಶ್ವಕಪ್ಗೆ ಎಂಟ್ರಿ!
ಹೀನಾಯ ಸೋಲು ಕಂಡ ಭಾರತ:
ಭಾರತ ತಂಡ ಪಾಕಿಸ್ತಾನದ ವಿರುದ್ಧ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪಾಕಿಸ್ತಾನಕ್ಕೆ ಗೆಲ್ಲಲು 182 ರನ್‌ಗಳ ಗುರಿ ನೀಡಿತು, ಅದನ್ನು ಪಾಕಿಸ್ತಾನ ತಂಡ 5 ವಿಕೆಟ್ ಕಳೆದುಕೊಂಡು ಸಾಧಿಸಿತು. ಈ ಪಂದ್ಯದಲ್ಲಿ ಭಾರತ ತಂಡದ ಬೌಲರ್‌ಗಳು ಹೀನಾಯವಾಗಿ ಸೋತಿದ್ದರು. ಅಷ್ಟೇ ಅಲ್ಲದೆ, ಭಾರತಕ್ಕೆ ಯಾವುದೇ ಬೌಲರ್ ಪರಿಣಾಮಕಾರಿ ಎಂದು ಸಾಬೀತುಪಡಿಸಲಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ